ETV Bharat / bharat

ಉತ್ತರ ಪ್ರದೇಶದ ಮುಸ್ಲಿಮರು ನಮ್ಮನ್ನು ಬೆಂಬಲಿಸುತ್ತಾರೆ, ಎಲ್ಲ 80 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಪಕ್ಷ ಸಿದ್ಧ: ಕಾಂಗ್ರೆಸ್ - 2022 ರ ವಿಧಾನಸಭಾ ಚುನಾವಣೆ

ಮುಂದಿನ ದಿನಗಳಲ್ಲಿ ಯುಪಿಯಲ್ಲಿ ಕಾಂಗ್ರೆಸ್ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳಲಿದೆ ಎಂದು ರಾಜ್ಯದ ಹಿರಿಯ ನಾಯಕ ಪಿಎಲ್ ಪುನಿಯಾ ಈಟಿವಿ ಭಾರತ್​ಗೆ ತಿಳಿಸಿದ್ದಾರೆ. ಅಲ್ಲದೇ, ರಾಷ್ಟ್ರೀಯ ಚುನಾವಣೆಗಳಿಗೆ ಮುಸ್ಲಿಮರು ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್
ಕಾಂಗ್ರೆಸ್
author img

By ETV Bharat Karnataka Team

Published : Oct 5, 2023, 6:06 AM IST

ನವದೆಹಲಿ : ಇತ್ತೀಚೆಗಷ್ಟೇ ರಾಜ್ಯ ಘಟಕದ ನೂತನ ಮುಖ್ಯಸ್ಥರನ್ನು ನೇಮಕ ಮಾಡಿದ ಬಳಿಕ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ದನೆಗೆ ಪ್ರಬಲ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿನ ಎಲ್ಲ 80 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಪಕ್ಷವು ಯೋಜಿಸಿದೆ ಎಂದು ಹೇಳಿದೆ.

ಬುಧವಾರ ಸೀತಾಪುರದಿಂದ 2024 ರ ಲೋಕಸಭಾ ಚುನಾವಣೆಯ ಸಿದ್ಧತೆಗಳ ಜಿಲ್ಲಾವಾರು ಪರಿಶೀಲನೆಯನ್ನು ಪ್ರಾರಂಭಿಸಿದ ನಂತರ ಮಾತನಾಡಿದ ರಾಜ್ಯ ಘಟಕದ ಮುಖ್ಯಸ್ಥ ಅಜಯ್ ರೈ ಅವರು, ನಾವು ಎಲ್ಲಾ 80 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಸಿದ್ದರಿದ್ದೇವೆ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರಮುಖ ಬಿಎಸ್‌ಪಿ ಮತ್ತು ಎಸ್‌ಪಿ ನಾಯಕರು ಕಾಂಗ್ರೆಸ್‌ಗೆ ಸೇರುವ ಸಾಧ್ಯತೆಯಿದೆ ಎಂದು ರಾಯ್ ಹೇಳಿಕೊಂಡ ನಂತರ, ಪಶ್ಚಿಮ ಯುಪಿಯಲ್ಲಿ ಪ್ರಭಾವ ಹೊಂದಿರುವ ಮಾಜಿ ಬಿಎಸ್‌ಪಿ ನಾಯಕ ಇಮ್ರಾನ್ ಮಸೂದ್ ಶೀಘ್ರದಲ್ಲೇ ಹಳೆಯ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ಪಕ್ಷದ ಪ್ರಮುಖರು ಹೇಳಿದ್ದಾರೆ.

ಮಸೂದ್ ಪಕ್ಷ ಸೇರುವ ಸಾಧ್ಯತೆ ಇದೆ. ಅವರು ಪ್ಯಾನ್-ಸ್ಟೇಟ್ ಪ್ರಭಾವವನ್ನು ಹೊಂದಿದ್ದಾರೆಂದು ನಾನು ಹೇಳುತ್ತಿಲ್ಲ. ಆದರೆ, ಅವರು ಖಂಡಿತವಾಗಿಯೂ ಪಶ್ಚಿಮ ಯುಪಿಯ ಸಹರಾನ್‌ಪುರ ಪ್ರದೇಶದ ಸುಮಾರು ಏಳು ಅಥವಾ ಎಂಟು ವಿಧಾನಸಭಾ ಸ್ಥಾನಗಳಲ್ಲಿ ಪ್ರಭಾವ ಹೊಂದಿದ್ದಾರೆ ಎಂದು ಹಿರಿಯ ರಾಜ್ಯ ನಾಯಕ ಪಿಎಲ್ ಪುನಿಯಾ ಈಟಿವಿ ಭಾರತ್‌ಗೆ ತಿಳಿಸಿದರು. “ನಾನು ಕೂಡ ಅದನ್ನು ಕೇಳಿದ್ದೇನೆ. ಇಮ್ರಾನ್ ಮಸೂದ್ ಪ್ರಭಾವಿ ನಾಯಕ ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ರಾಜ್ಯ ನಾಯಕ ಪ್ರಮೋದ್ ತಿವಾರಿ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಯುಪಿಯಲ್ಲಿ ಕಾಂಗ್ರೆಸ್ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳಲಿದೆ ಎಂದು ಹೇಳಿದ ಪುನಿಯಾ, ರಾಷ್ಟ್ರೀಯ ಚುನಾವಣೆಗಳಿಗೆ ಮುಸ್ಲಿಮರು ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 2024 ರಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಬೆಂಬಲಿಸುತ್ತೇವೆ ಎಂದು ಮುಸ್ಲಿಮರು ಹೇಳುತ್ತಾರೆ. ಆದರೆ ಇಂಡಿಯಾ ಮೈತ್ರಿಕೂಟವು ಒಟ್ಟಾಗಿ ಚುನಾವಣೆಯಲ್ಲಿ ಹೋರಾಡಿದರೆ ಒಳ್ಳೆಯದು ಎಂದು ಹೇಳುವ ಮೂಲಕ ಅವರು ಗಮನಸೆಳೆದಿದ್ದಾರೆ" ಎಂದು ಪುನಿಯಾ ಹೇಳಿದರು.

ಮಾಯಾವತಿ ಅವರ ಯೋಜನೆಯನ್ನು ಮತದಾರರು ನೋಡಿದ್ದರಿಂದ ಪಶ್ಚಿಮ ಯುಪಿಯಲ್ಲಿ ಹಲವಾರು ಬಿಎಸ್ಪಿ ಮತ್ತು ಎಸ್ಪಿ ನಾಯಕರು ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಹಿರಿಯರು ಗಮನಿಸಿದ್ದಾರೆ. "ಮಾಯಾವತಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದನ್ನು ಮತದಾರರು ಗಮನಿಸಿದ್ದಾರೆ" ಎಂದು ಪುನಿಯಾ ಹೇಳಿದರು. ಮಸೂದ್ 2022 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಎಸ್‌ಪಿ ಸೇರಲು ಕಾಂಗ್ರೆಸ್ ತೊರೆದಿದ್ದರು. ಆದರೆ, ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಮಾಯಾವತಿ ಅವರನ್ನು ಆಗಸ್ಟ್‌ನಲ್ಲಿ ಹೊರಹಾಕಿದರು. ಅಂದಿನಿಂದ ಅವರು ಕಾಂಗ್ರೆಸ್ ತೆಕ್ಕೆಗೆ ಮರಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

2014 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಿದ್ದ ಅಜಯ್ ರೈ, ಮಿತ್ರಪಕ್ಷಗಳಾದ ಎಸ್‌ಪಿ ಮತ್ತು ಆರ್‌ಎಲ್‌ಡಿಗೆ ವಿರುದ್ಧವಾಗಿ ಆಕ್ರಮಣಕಾರಿ ನಿಲುವು ಅನುಸರಿಸಿದರೆ, ಇದಕ್ಕೆ ಪ್ರತಿಯಾಗಿ ಪ್ರಮೋದ್ ತಿವಾರಿ ಅವರು ಪ್ರತಿಕ್ರಿಯಿಸಿ, “ರಾಷ್ಟ್ರೀಯವಾಗಿ ಇಂಡಿಯಾ ಮೈತ್ರಿ ಇದೆ ಮತ್ತು ರಾಜ್ಯದಲ್ಲಿ ಸೀಟು ಹಂಚಿಕೆ ಕುರಿತು ಚರ್ಚೆ ನಡೆಯುತ್ತಿದೆ. ನಾವು ಗೆಲ್ಲುವ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ಆದರೆ ಸಂಖ್ಯೆಗಳನ್ನು ಊಹಿಸಲು ನಾನು ಬಯಸುವುದಿಲ್ಲ'' ಎಂದು ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ: ಆಪ್‌ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.