ETV Bharat / bharat

ಹೆಲ್ಮೆಟ್​ ಇಲ್ಲದೇ ಬೈಕ್​ ಸವಾರಿ: ನಟ ವಿವೇಕ್​ ಒಬಿರಾಯ್​ಗೆ ​ನೋಟಿಸ್​ - actor Vivek Oberoi latest news

ಹೆಲ್ಮೆಟ್​ ಹಾಕದೇ ಬೈಕ್​ ಓಡಿಸಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಾಲಿವುಡ್​ ನಟ ವಿವೇಕ್​ ಒಬೇರಾಯ್​ಗೆ ಮುಂಬೈ ಟ್ರಾಫಿಕ್​ ಪೊಲೀಸರು ನೋಟಿಸ್​ ನೀಡಿದ್ದಾರೆ.

Mumbai traffic police issues challan to actor Vivek Oberoi
ಹೆಲ್ಮೆಟ್​ ಇಲ್ಲದೇ ವಿವೇಕ್​ ಒಬಿರಾಯ್​ ಬೈಕ್​ ಸವಾರಿ
author img

By

Published : Feb 20, 2021, 9:23 AM IST

Updated : Feb 20, 2021, 10:22 AM IST

ಮುಂಬೈ: ಹೆಲ್ಮೆಟ್​ ಹಾಕದೇ ಬೈಕ್​ ಓಡಿಸಿದ್ದಕ್ಕಾಗಿ ಬಾಲಿವುಡ್​ ನಟ ವಿವೇಕ್ ಒಬೇರಾಯ್​​ಗೆ ಮುಂಬೈ ಪೊಲೀಸರು ನೋಟಿಸ್​ ನೀಡಿದ್ದಾರೆ.

Mumbai traffic police issues challan to actor Vivek Oberoi
ನಟ ವಿವೇಕ್​ ಒಬೇರಾಯ್​ಗೆ ​ನೋಟಿಸ್​

ಮಾಹಿತಿ ಪ್ರಕಾರ ಶುಕ್ರವಾರ, ಮುಂಬೈ ಪೊಲೀಸರಿಗೆ ವಿವೇಕ್ ಒಬೇರಾಯ್ ಹೆಲ್ಮೆಟ್ ಇಲ್ಲದೆ ಬೈಕ್​ ಸವಾರಿ ಮಾಡುತ್ತಿರುವ ಬಗ್ಗೆ ಟ್ವಿಟರ್‌ನಲ್ಲಿ ದೂರು ಬಂದಿತ್ತು. ಈ ಹಿನ್ನೆಲೆ ಹೆಲ್ಮೆಟ್​ ಹಾಕದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಹೆಲ್ಮೆಟ್​ ಇಲ್ಲದೇ ವಿವೇಕ್​ ಒಬೇರಾಯ್​ ಬೈಕ್​ ಸವಾರಿ

ವಿವೇಕ್ ಒಬೇರಾಯ್ ಅವರೇ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ಅವರು ಹೆಲ್ಮೆಟ್ ಇಲ್ಲದೆ ಪತ್ನಿಯೊಂದಿಗೆ ಬೈಕ್ ಸವಾರಿ ಮಾಡಿದ್ದಾರೆ. ಈ ಕಾರಣಕ್ಕೆ ನಟನ ವಿರುದ್ಧ ಐಪಿಸಿ ಸೆಕ್ಷನ್ 188, 269, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129, 177 ಅಡಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್​ ಮೇಲೆ ಫೈರಿಂಗ್​​​

Last Updated : Feb 20, 2021, 10:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.