ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆ ಪ್ರಕರಣದ ತನಿಖೆ ನಡೆಯುತ್ತಿದೆ. ಈ ನಡುವೆ ಮುಂಬೈ ಪೊಲೀಸ್ ಮಖ್ಯಸ್ಥ ಪರಂ ಬಿರ್ ಸಿಂಗ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಹೆಮಂತ್ ನರ್ಗಾಲೆ ಅವರನ್ನು ನೇಮಕ ಮಾಡಲಾಗಿದೆ.
ಪರಂ ಬಿರ್ ಸಿಂಗ್ ಅವರನ್ನು ಹೋಂಗಾರ್ಡ್ ದಳದ ಮುಖ್ಯಸ್ಥರಾಗಿ ವರ್ಗಾಯಿಸಲಾಗಿದೆ. ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಆದೇಶ ಬಂದ ತಕ್ಷಣ ಹೊಸ ಸ್ಥಳಕ್ಕೆ ಪರಂ ಬಿರ್ ಸಿಂಗ್ ತೆರಳಿದ್ದಾರೆ.
ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಝೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಕೋವಿಡ್ 2ನೇ ಅಲೆ: 24 ಗಂಟೆಯಲ್ಲಿ 23 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ!
ಮಾಜಿ ಶಿವಸೇನೆ ಸದಸ್ಯರಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಝೆಯ ಬಂಧನ ಆಡಳಿತರೂಢ ಶಿವಸೇನೆ ಪಕ್ಷಕ್ಕೆ ದೊಡ್ಡ ಮುಜುಗರ ಉಂಟುಮಾಡಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪಿಯನ್ನು ರಕ್ಷಿಸುತ್ತಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಕಳೆದ ಫೆಬ್ರವರಿ 25 ರಂದು ಮುಂಬೈನ ಕಾರ್ಮೈಕಲ್ ರಸ್ತೆಯಲ್ಲಿರುವ ಮುಖೇಶ್ ಅಂಬಾನಿಯ 27 ಅಂತಸ್ತಿನ ಆ್ಯಂಟಿಲಿಯಾ ನಿವಾಸದ ಬಳಿ ಜೆಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಫಿಯೋ ಕಾರು ಪತ್ತೆಯಾಗಿತ್ತು.