ETV Bharat / bharat

90 ನಿಮಿಷದಲ್ಲಿ ಅಪಹರಣಕ್ಕೊಳಗಾದ ಬಾಲಕನ ಪತ್ತೆ ಹಚ್ಚಿದ ಪೊಲೀಸ್​ ಶ್ವಾನ 'ಲಿಯೋ'!

author img

By ETV Bharat Karnataka Team

Published : Nov 29, 2023, 5:35 PM IST

Police Dog Leo Sniffs Out Kidnapped Boy in Mumbai: ಮುಂಬೈನಲ್ಲಿ ಅಪಹರಣಕ್ಕೊಳಗಾದ ಆರು ವರ್ಷದ ಬಾಲಕನನ್ನು ಪೊಲೀಸ್​ ಶ್ವಾನ 'ಲಿಯೋ' ನೆರವಿನಿಂದ 90 ನಿಮಿಷದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

mumbai police dog leo sniffs out kidnapped boy in 90 minutes
90 ನಿಮಿಷದಲ್ಲಿ ಅಪಹರಣಕ್ಕೊಳಗಾದ ಬಾಲಕನ ಪತ್ತೆ ಹಚ್ಚಿದ ಪೊಲೀಸ್​ ಶ್ವಾನ 'ಲಿಯೋ'!

ಮುಂಬೈ (ಮಹಾರಾಷ್ಟ್ರ): ಪೊಲೀಸ್ ಇಲಾಖೆಯಲ್ಲಿ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಅನೇಕ ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯ ಸಂಗ್ರಹಿಸುವಲ್ಲಿ ಶ್ವಾನಗಳನ್ನು ಬಳಸಲಾಗುತ್ತದೆ. ತಮ್ಮ ವಿಶೇಷ ಗ್ರಹಿಕ ಶಕ್ತಿಯಿಂದ ಈ ಮೂಕಪ್ರಾಣಿಗಳು ಕಷ್ಟಕರ ಪರಿಸ್ಥಿತಿಯಲ್ಲಿ ಪೊಲೀಸರ ನೆರವಿಗೆ ಬರುತ್ತವೆ. ಮಹಾರಾಷ್ಟ್ರದ ಮುಂಬೈನಲ್ಲಿ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕನನ್ನು ಒಂದೂವರೆ ಗಂಟೆಯಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸ್​ ಶ್ವಾನ ಯಶಸ್ವಿಯಾಗಿದೆ.

ಇಲ್ಲಿನ ಅಂಧೇರಿ ಪೂರ್ವದ ಕೆಬಿಎಂ ಕಾಂಪೌಂಡ್ ಕೊಳೆಗೇರಿಯಲ್ಲಿ ನವೆಂಬರ್ 23ರಂದು ರಾತ್ರಿ 8 ಗಂಟೆ ಸುಮಾರಿಗೆ ಆರು ವರ್ಷದ ವಿವೇಕ್ ಫೂಲ್‌ಚಂದ್​ ಕೋರಿ ಎಂಬ ಬಾಲಕ ತನ್ನ ಮನೆ ಬಳಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಆದರೆ, ನಂತರ ಇದ್ದಕ್ಕಿದ್ದಂತೆ ಬಾಲಕ ಕಾಣೆಯಾಗಿದ್ದ. ಹೀಗಾಗಿ ಆತನಿಗಾಗಿ ತಾಯಿ ವಿಮ್ಲಾ ಫೂಲ್‌ಚಂದ್ ಕೋರಿ ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದ್ದರಿಂದ ನವೆಂಬರ್ 24ರಂದು ಮಧ್ಯಾಹ್ನ 12:30ರ ಸುಮಾರಿಗೆ ಪೊವಾಯಿ ಪೊಲೀಸ್ ಠಾಣೆಗೆ ಧಾವಿಸಿ ಮಗನ ಪತ್ತೆ ಬಗ್ಗೆ ದೂರು ದಾಖಲಿಸಿದ್ದರು.

ಶ್ವಾನದ ನೆರವಿನಿಂದ 90 ನಿಮಿಷದಲ್ಲಿ ಬಾಲಕ ಪತ್ತೆ: ಈ ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣ ಅಪರಾಧ ವಿಭಾಗದ ಪೊವಾಯಿ ಮೊಬೈಲ್ ತಂಡದಿಂದ ಕಾಣೆಯಾದ ಬಾಲಕನ ಹುಡುಕಾಟಕ್ಕಾಗಿ ಪ್ರಾರಂಭಿಸಿದ್ದರು. ಅಲ್ಲದೇ, ಮುಖ್ಯ ನಿಯಂತ್ರಣ ಕೊಠಡಿ ಹಾಗೂ ಟ್ರಾಫಿಕ್​ ಕಂಟ್ರೋಲ್ ರೂಮ್ ಮೂಲಕ ಮಾಹಿತಿಯನ್ನು ಹಂಚಿಕೊಂಡು ಪತ್ತೆ ಕಾರ್ಯ ಚುರುಕುಗೊಳಿಸಿದ್ದರು.

ಪ್ರಮುಖವಾಗಿ ಬಾಲಕ ನಾಪತ್ತೆಯಾದ ಸ್ಥಳವು ಕೊಳಚೆ ಪ್ರದೇಶವಾಗಿರುವುದರಿಂದ ಮತ್ತು ಸುತ್ತಮುತ್ತಲು ಯಾವುದೇ ಸಿಸಿಟಿವಿ ಕ್ಯಾಮರಾಗಳು ಇರಲಿಲ್ಲ. ಹೀಗಾಗಿ ಬಾಲಕನ ಪತ್ತೆಗೆ ಶ್ವಾನದಳದ ಸಹಾಯವನ್ನು ಪೊಲೀಸರು ತಕ್ಷಣವೇ ತೆಗೆದುಕೊಂಡಿದ್ದರು. ಪೊಲೀಸ್​ ಶ್ವಾನ 'ಲಿಯೋ'ವನ್ನು ಬಾಲಕನ ನಿವಾಸಕ್ಕೆ ಕರೆದೊಯ್ದ ಪೊಲೀಸರು, ಹಗಲಿನಲ್ಲಿ ಆತ ಧರಿಸಿದ್ದ ಟೀ-ಶರ್ಟ್ ವಾಸನೆ ತೋರಿಸಲಾಗಿತ್ತು.

ಇದಾದ ನಂತರ 90 ನಿಮಿಷದಲ್ಲಿ ಲಿಯೋ ಶ್ವಾನ ನೆರವಿನಿಂದ ಬಾಲಕನನ್ನು ಮುಂಜಾನೆ 4 ಗಂಟೆ ಸುಮಾರಿಗೆ ಅಶೋಕ್ ಟವರ್‌ನ ಅಂಬೇಡ್ಕರ್ ಉದ್ಯಾನದಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್​ ಶ್ವಾನ 'ಲಿಯೋ' ಕಾರ್ಯಕ್ಷಮತೆ ಮತ್ತು ಪೊಲೀಸರ ಸಮಯೋಚಿತ ನಿರ್ಧಾರದಿಂದ ಬಾಲಕನ ಈಗ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾನೆ. ಸದ್ಯ ಈ ಬಾಲಕನನ್ನು ಅಪಹರಣ ಮಾಡಿದ್ದು ಯಾರು ಎಂಬ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್​ ಆಯುಕ್ತ ದತ್ತ ನಲವಾಡೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ ರೇಪ್ ಆ್ಯಂಡ್​ ಮರ್ಡರ್ ಕೇಸ್​.. ಆರೋಪಿ ಪತ್ತೆ ಹಚ್ಚಿತು ತುಂಗಾ 777 ಚಾರ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.