ಮುಂಬೈ: ಕ್ರಿಪ್ಟೋಕರೆನ್ಸಿ ಹೂಡಿಕೆ ಲಾಭದಾಯಕವಾದರೂ ಅದು ಕಾನೂನಾತ್ಮಕವಲ್ಲದ ಕಾರಣ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ ವಾಣಿಜ್ಯ ನಗರಿ ಮುಂಬೈನ ವ್ಯಕ್ತಿಯೊಬ್ಬ 1.57 ಕೋಟಿ ರೂಪಾಯಿ ಮೋಸ ಹೋಗಿದ್ದಾನೆ.
ಮಲಬಾರ್ ಹಿಲ್ ಪ್ರದೇಶದ ನೇಪಿಯರ್ ಸೀ ನಿವಾಸಿಯಾದ 36 ವರ್ಷದ ವ್ಯಕ್ತಿ 2021ರ ಅಕ್ಟೋಬರ್ನಲ್ಲಿ ವೆಬ್‌ಸೈಟ್ ಮೂಲಕ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಬಳಿಕ ಆತ ಕ್ರಿಪ್ಟೋಕರೆನ್ಸಿ ವ್ಯವಹಾರ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ, ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು ಆತ ಸಲಹೆ ನೀಡಿದ್ದಾನೆ. ಹೂಡಿಕೆಯ ವಿಧಾನ ಮತ್ತು ಲಾಭದ ಬಗ್ಗೆಯೂ ವಿವರಿಸಿದ್ದಾನೆ.
ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಬೇಕು ಎಂದು ಆಸಕ್ತಿ ಹೊಂದಿದ್ದ ಮುಂಬೈ ವ್ಯಕ್ತಿ ಅಪರಿಚಿತನ ಮಾತು ಕೇಳಿಕೊಂಡು ಹಂತಹಂತವಾಗಿ 1.57 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾನೆ. ವರ್ಷದ ಬಳಿಕ ಹಣವನ್ನು ವಾಪಸ್ ನೀಡಲು ಕೇಳಿದಾಗ ಆತ ಇದನ್ನು ನಿರಾಕರಿಸಿದ್ದಾನೆ. ಇದರಿಂದ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ನಕಲಿ ವೆಬ್‌ಸೈಟ್ ಮೂಲಕ ತಾವು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದು, ಕ್ರಮ ಕೈಗೊಳ್ಳಬೇಕು ಎಂದು ಆತ ಕೇಳಿಕೊಂಡಿದ್ದಾನೆ.
ಓದಿ:100 ಕೋಟಿ ರೂ.ಗೂ ಅಧಿಕ ಜಿಎಸ್‌ಟಿ ನಕಲಿ ಬಿಲ್ ಹಗರಣ ಬಯಲು: ಗುಜರಾತ್‌ನ ಇಬ್ಬರ ಬಂಧನ