ನವದೆಹಲಿ: ಟೆಲಿಕಾಂ ಇಂಡಸ್ಟ್ರೀಯಲ್ಲಿ ಈಗಾಗಲೇ ಹೊಸ ದಾಖಲೆ ಸೃಷ್ಟಿ ಮಾಡಿರುವ ರಿಲಯನ್ಸ್ ಇಂಡಸ್ಟ್ರೀ ಅಧ್ಯಕ್ಷ ಮುಖೇಶ್ ಅಂಬಾನಿ ಇದೀಗ ಮತ್ತೊಂದು ಹೊಸ ಇತಿಹಾಸ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಜಿಯೋ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಮುಖೇಶ್ ಅಂಬಾನಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಅತಿ ಕಡಿಮೆ ಬೆಲೆಗೆ ಜಿಯೋ ಫೋನ್ ನೆಕ್ಸ್ಟ್(JIOPHONE NEXT) ಬಿಡುಗಡೆ ಮಾಡಲು ನಿರ್ಧರಿಸಿದ್ದು, ಬರುವ ಸೆಪ್ಟೆಂಬರ್ 10 ರಂದು ಗಣೇಶ ಚತುರ್ಥಿಯ ದಿನ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ತಿಳಿಸಿದ್ದಾರೆ.
-
JIOPHONE NEXT is powered by an optimized version of Android OS jointly developed by Jio and Google. It is ultra-affordable and packs cutting-edge features. It will be available in market from Ganesh Chaturthi, 10th September: Reliance Industries Chairman Mukesh Ambani
— ANI (@ANI) June 24, 2021 " class="align-text-top noRightClick twitterSection" data="
">JIOPHONE NEXT is powered by an optimized version of Android OS jointly developed by Jio and Google. It is ultra-affordable and packs cutting-edge features. It will be available in market from Ganesh Chaturthi, 10th September: Reliance Industries Chairman Mukesh Ambani
— ANI (@ANI) June 24, 2021JIOPHONE NEXT is powered by an optimized version of Android OS jointly developed by Jio and Google. It is ultra-affordable and packs cutting-edge features. It will be available in market from Ganesh Chaturthi, 10th September: Reliance Industries Chairman Mukesh Ambani
— ANI (@ANI) June 24, 2021
ಜಿಯೋ ಹಾಗೂ ಗೂಗಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಆಂಡ್ರಾಯ್ಡ್ ಒಎಸ್ ಅಪ್ಟಿಮೈಸ್ಡ್ ಆವೃತ್ತಿಯಾಗಿದ್ದು, ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಅತ್ಯಾಧುನಿಕ ಫೀಚರ್ಸ್ ಇದು ಒಳಗೊಂಡಿದೆ ಎಂದಿದ್ದಾರೆ. ಗೂಗಲ್ ಮತ್ತು ಜಿಯೋ ಸೇರಿ ಈ ಸ್ಮಾರ್ಟ್ಫೋನ್ ಅಭಿವೃದ್ಧಿ ಪಡಿಸಿವೆ ಎಂದು ಘೋಷಣೆ ಮಾಡಲು ನನಗೆ ಸಂತೋಷವಾಗುತ್ತದೆ. ಇದರಲ್ಲಿನ ಅಪ್ಲಿಕೇಶನ್ ಬಳಕೆದಾರರ ಫ್ರೆಂಡ್ಲಿ ಆಗಿವೆ ಎಂದಿದ್ದಾರೆ.
ದೇಶದಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ಜಿಯೋ ಫೈಬರ್ ಒಂದೇ ವರ್ಷದಲ್ಲಿ 2 ಮಿಲಿಯನ್ ಗ್ರಾಹಕರ ಹೊಂದಿದ್ದು, ಈಗಾಗಲೇ 3 ಮಿಲಿಯನ್ ಸಕ್ರಿಯ ಬಳಕೆದಾರರು ಇದ್ದಾರೆ ಎಂದಿದ್ದಾರೆ. ಜಿಯೋ ಫೈಬರ್ ಭಾರತದ ಅತಿದೊಡ್ಡ ಬ್ರಾಡ್ಬ್ಯಾಂಡ್ ಆಪರೇಟರ್ ಆಗಿದೆ ಎಂದರು. ಭಾರತದಲ್ಲಿ ಡಿಜಿಟಲೀಕರಣ ಮಾಡುವ ಉದ್ದೇಶದಿಂದ 2016ರಲ್ಲಿ ಜಿಯೋ ಆರಂಭ ಮಾಡಿದ್ದೇವು. ಆದರೆ ಇದೀಗ ಹೊಸ ಉದ್ದೇಶದೊಂದಿಗೆ ಮತ್ತೊಂದು ವ್ಯವಹಾರಕ್ಕೆ ಕೈಹಾಕಿದ್ದು, ಇಂಧನ ವ್ಯವಹಾರಕ್ಕಾಗಿ 60,000 ಕೋಟಿ ರೂ. ಮೀಸಲಿಡುತ್ತಿದ್ದೇವೆ ಎಂದರು.
ರಿಲಯನ್ಸ್ನಿಂದ ನಿವೃತ್ತ ನೌಕರರು, ಕಂಪನಿ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಸೇರಿದಂತೆ 20 ಲಕ್ಷ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ನೀತಾ ಅಂಬಾನಿ ತಿಳಿಸಿದ್ದಾರೆ. ಕಳೆದ ವಾರ್ಷಿಕ ಸಭೆಗೆ ಹೋಲಿಕೆ ಮಾಡಿದಾಗ ನಮ್ಮ ವ್ಯವಹಾರ ಮತ್ತು ಆರ್ಥಿಕತೆ ಮತ್ತಷ್ಟು ಹೆಚ್ಚಾಗಿದ್ದು, ಇದರಿಂದ ಸಂತೋಷವಾಗಿದೆ ಎಂದು ಹೇಳಿಕೊಂಡರು.