ETV Bharat / bharat

ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಯ ಪರೀಕ್ಷಿಸಿದ ಭಾರತ - ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಯ ಪರೀಕ್ಷಿಸಿದ ಭಾರತ

ಬಾಲಸೋರ್​ನ ಐಟಿಆರ್​ನಿಂದ ಇಂದು ಬೆಳಗ್ಗೆ ಸುಮಾರು 10.30ಕ್ಕೆ  ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಭಾರತ ಭಾನುವಾರ ಯಶಸ್ವಿಯಾಗಿ ನಡೆಸಿದೆ..

MRSAM-Army missile system flight tested
ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಯ ಪರೀಕ್ಷಿಸಿದ ಭಾರತ
author img

By

Published : Mar 27, 2022, 2:35 PM IST

ಒಡಿಶಾ : ಒಡಿಶಾದ ಬಾಲಸೋರ್​ನ ಕರಾವಳಿಯಲ್ಲಿ ಮಧ್ಯಮ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಭಾರತ ಭಾನುವಾರ ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಿಳಿಸಿದೆ.

ಎಂಆರ್​ಎಸ್​ಎಎಂ-ಆರ್ಮಿ ಕ್ಷಿಪಣಿ ವ್ಯವಸ್ಥೆಯ ನೌಕೆಯ ಪರೀಕ್ಷೆಯನ್ನು ಬಾಲಸೋರ್​ನ ಐಟಿಆರ್​ನಿಂದ ಸುಮಾರು 10.30ಕ್ಕೆ ಮಾಡಲಾಯಿತು. ಈ ವ್ಯವಸ್ಥೆಯು ಭಾರತೀಯ ಸೇನೆಯ ಒಂದು ಭಾಗವಾಗಿದೆ. ಪರೀಕ್ಷೆಯಲ್ಲಿ ಕ್ಷಿಪಣಿಯು ಬಹಳ ದೂರದಲ್ಲಿದ್ದ ಗುರಿಯನ್ನು ನೇರವಾಗಿ ಹೊಡೆದು, ಯಶಸ್ವಿಗೊಳಿಸಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.

ಹಲವಾರು ಹೊಸ ಸ್ಥಳೀಯ ವ್ಯವಸ್ಥೆಗಳನ್ನು ಮೌಲ್ಯೀಕರಿಸುವ ಪರೀಕ್ಷಾರ್ಥವಾಗಿ ಜನವರಿ 20ರಂದು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಒಡಿಶಾದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್​)ನಿಂದ ಉಡಾವಣೆ ಮಾಡಲಾಯಿತು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.