ETV Bharat / bharat

ಹಣೆಗೆ ರಿವಾಲ್ವರ್‌​ ಇಟ್ಟು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುವ ಪತಿ: ಪೊಲೀಸ್​ ಮೊರೆಹೋದ ಪತ್ನಿ - ಈಟಿವಿ ಭಾರತ ಕನ್ನಡ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಹಣೆಗೆ ರಿವಾಲ್ವರ್‌ ಇಟ್ಟು ಬೆದರಿಸಿ ಪತಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಾರೆ ಎಂದು ಪತ್ನಿಯೊಬ್ಬರು ದೂರಿದ್ದಾರೆ.

mp-woman-accuses-husband-of-unnatural-sex-at-gunpoint
ಹಣೆಗೆ ರಿವಾಲ್ವರ್‌​ ಇಟ್ಟು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುವ ಪತಿ: ಪತ್ನಿಯಿಂದ ಪೊಲೀಸರಿಗೆ ದೂರು
author img

By

Published : Sep 11, 2022, 3:35 PM IST

ಗ್ವಾಲಿಯರ್ (ಮಧ್ಯಪ್ರದೇಶ): ಪತಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ. ಇದನ್ನು ವಿರೋಧಿಸಿದಾಗಲೆಲ್ಲ ತನ್ನ ಪರವಾನಗಿ ಪಡೆದ ರಿವಾಲ್ವರ್‌ನನ್ನು ಹಣೆಗೆ ಇಟ್ಟು ಬೆದರಿಸಲಾಗುತ್ತದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪತಿ ವಿರುದ್ಧ ಪೊಲೀಸರಿಗೆ ನೀಡಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

2000ರಲ್ಲಿ ನಮ್ಮ ಮದುವೆಯಾಗಿದ್ದು, ಇದಾದ ಕೆಲವೇ ತಿಂಗಳಿಂದಲೂ ಪತಿ ನನ್ನನ್ನು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತಪಡಿಸಲು ಶುರು ಮಾಡಿದ್ದರು. ಇದೀಗ ಕಳೆದ ಒಂದೂವರೆ ವರ್ಷದಿಂದ ಇದೇ ರೀತಿಯಾದ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ. ಇದನ್ನು ಪ್ರತಿಭಟಿಸಿದರೆ ರಿವಾಲ್ವರ್‌ ತೆಗೆದುಕೊಂಡು ಹಣೆಗೆ ಇಡುತ್ತಾರೆ. ಅಲ್ಲದೇ, ವರದಕ್ಷಿಣೆಗಾಗಿಯೂ ನನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಸಂಬಂಧ ಸೆಪ್ಟೆಂಬರ್ 9ರಂದು ತಡರಾತ್ರಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಮತ್ತು ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಪರ ಪುರುಷನೊಂದಿಗೆ ಮಲಗುವಂತೆ ಒತ್ತಾಯ: ಪೊಲೀಸರ​ ಮೊರೆ ಹೋದ ಪತ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.