ETV Bharat / bharat

ಪೆಟ್ರೋಲ್, ಡೀಸೆಲ್​ ದರ ಇಳಿಸಿದಂತೆ ಸಿಲಿಂಡರ್​ ಬೆಲೆಯ ಹೊರೆ ತಗ್ಗಿಸಿ: ಮನೇಕಾ ಗಾಂಧಿ - ಉತ್ತರ ಪ್ರದೇಶ ಲೇಟೆಸ್ಟ್​​ ಅಪ್ಡೇಟ್​​ ನ್ಯೂಸ್​​

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯನ್ನು ಸ್ವಾಗತಿಸಿರುವ ಸಂಸದೆ ಮನೇಕಾ ಗಾಂಧಿ ಅವರು ಎಲ್‌ಪಿಜಿ ಸಿಲಿಂಡರ್ ದರವನ್ನು ಇಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Nov 7, 2021, 2:26 PM IST

ಸುಲ್ತಾನ್‌ಪುರ (ಉತ್ತರ ಪ್ರದೇಶ): ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯನ್ನು ಸ್ವಾಗತಿಸಿರುವ ಕೇಂದ್ರದ ಮಾಜಿ ಸಚಿವೆ ಮತ್ತು ಸುಲ್ತಾನ್‌ಪುರ ಸಂಸದೆ ಮನೇಕಾ ಗಾಂಧಿ ಅವರು ಶನಿವಾರ ಎಲ್‌ಪಿಜಿ ಸಿಲಿಂಡರ್ ದರವನ್ನು ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Maneka Gandhi
ಮನೇಕಾ ಗಾಂಧಿ

ಕ್ಷೇತ್ರಕ್ಕೆ ನಾಲ್ಕು ದಿನಗಳ ಭೇಟಿಯಲ್ಲಿರುವ ಅವರು, ತಮ್ಮ ಸಂಸದೀಯ ಕ್ಷೇತ್ರ ಸುಲ್ತಾನ್‌ಪುರದಲ್ಲಿ ಎಲ್‌ಪಿಜಿ ಬೆಲೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರು. 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿದಿವೆ. ಕೇಂದ್ರ ಸರ್ಕಾರವು ಜನರಿಗೆ ಪರಿಹಾರ ನೀಡಲು ಗ್ಯಾಸ್ (ಎಲ್‌ಪಿಜಿ ಸಿಲಿಂಡರ್) ನಂತಹ ಇತರ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಬೇಕು' ಎಂದರು.

ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ರೂ 5 ಮತ್ತು ರೂ 10 ರಷ್ಟು ಕಡಿತಗೊಳಿಸಿದ ದಿನಗಳ ನಂತರ ಅವರು ಈ ಮನವಿಯನ್ನು ಮನೇಕಾ ಮಾಡಿದರು. ನಂತರ ವಿವಿಧ ಬಿಜೆಪಿ ಆಡಳಿತದ ರಾಜ್ಯಗಳು ಸಹ ಎರಡು ಇಂಧನಗಳ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದವು.

ಇಸೌಲಿ ಅಸೆಂಬ್ಲಿ ವಿಭಾಗದ ಡೆಹ್ಲಿ ಬಜಾರ್ ಟೌನ್‌ಶಿಪ್‌ನಲ್ಲಿ ತಮ್ಮ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ ಅವರು, 'ನಮ್ಮ ಪ್ರಯತ್ನಗಳು ಇಸೌಲಿಯನ್ನು ಗೆಲ್ಲುವುದಾಗಿದೆ. ನಾನು ಎಲ್ಲಿಗೆ ಹೋದರೂ ಸಭೆಗಳನ್ನು ಮಾಡುತ್ತಲೇ ಇರುತ್ತೇನೆ. 100 ದಿನಗಳಲ್ಲಿ 100 ಕಾರ್ಯಕ್ರಮಗಳು ನಡೆಯುತ್ತವೆ, ಆದರೆ ನಾವು ಮನಸ್ಸು ಮಾಡದ ತನಕ ಇದು ಹೆಚ್ಚು ಮುಖ್ಯವಲ್ಲ ಎಂದಿದ್ದಾರೆ.

'ನಾವು ಚುನಾವಣೆಯಲ್ಲಿ ಗೆಲ್ಲಲೇಬೇಕು. ಈ ಹಿಂದೆಯೂ ಲಕ್ಷ ಲಕ್ಷ ಸದಸ್ಯರಿದ್ದರೂ ಜಿಲ್ಲಾ ಪರಿಷತ್​ನಲ್ಲಿ ಒಂದೇ ಒಂದು ಸ್ಥಾನವೂ ಬಂದಿರಲಿಲ್ಲ. ನಮ್ಮ ಬಿಜೆಪಿ ಪದಾಧಿಕಾರಿಗಳು ಮತ ಹಾಕಿದ್ದರೆ ನಾವು ಗೆಲ್ಲುತ್ತಿದ್ದೆವು. ಬೂತ್ ಅಧ್ಯಕ್ಷರು, ಅವರ ಕುಟುಂಬದವರು, ಅವರ ಸಂಬಂಧಿಕರು ಮತ ಹಾಕಿದ್ದರೆ ನಾವು ಗೆಲ್ಲುತ್ತಿದ್ದೆವು' ಎಂದು ಅವರು ಪಂಚಾಯತ್​ ಚುನಾವಣೆಯನ್ನು ಉಲ್ಲೇಖಿಸಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.