ETV Bharat / bharat

ಕಳೆದ ನಾಲ್ಕು ವರ್ಷಗಳಲ್ಲಿ 32 ಮರಿಗಳು ಸೇರಿದಂತೆ 85 ಹುಲಿಗಳು ಸಾವಿಗೀಡಾಗಿವೆ: ಮಧ್ಯಪ್ರದೇಶ ಸರ್ಕಾರ - tiger state

ಕಳೆದ 4 ವರ್ಷಗಳಲ್ಲಿ 85 ಹುಲಿಗಳು ಸೇರಿದಂತೆ 32 ಮರಿಗಳು ಮಧ್ಯಪ್ರದೇಶದಲ್ಲಿ ಸಾವಿಗೀಡಾಗಿವೆ ಎಂದು ಕಾಂಗ್ರೆಸ್ ಶಾಸಕರಿಗೆ ರಾಜ್ಯ ಅರಣ್ಯ ಸಚಿವ ಕುನ್ವರ್ ವಿಜಯ್ ಶಾ ಉತ್ತರಿಸಿದ್ದಾರೆ.

MP lost 85 tigers in past four years: Govt

author img

By

Published : Dec 23, 2021, 4:26 PM IST

ಭೋಪಾಲ್: ಮಧ್ಯಪ್ರದೇಶದ ವನ್ಯಜೀವಿಗಳ ಆವಾಸಸ್ಥಾನಗಳಲ್ಲಿ ವಿವಿಧ ಕಾರಣಗಳಿಂದ ಕಳೆದ ನಾಲ್ಕು ವರ್ಷಗಳಲ್ಲಿ 32 ಮರಿಗಳು ಸೇರಿದಂತೆ 85 ಹುಲಿಗಳು ಸಾವಿಗೀಡಾಗಿವೆ ಎಂದು ಸರ್ಕಾರ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದೆ.

ಜಬಲ್ಪುರ (ಪೂರ್ವ)ದ ಕಾಂಗ್ರೆಸ್ ಶಾಸಕ ಲಖನ್ ಘಂಘೋರಿಯಾ ಅವರ ಪ್ರಶ್ನೆಗೆ ರಾಜ್ಯ ಅರಣ್ಯ ಸಚಿವ ಕುನ್ವರ್ ವಿಜಯ್ ಶಾ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. 2018-19 ರಿಂದ 2021-22 ರವರೆಗಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಎಷ್ಟು ಹುಲಿಗಳು ಸಾವನ್ನಪ್ಪಿವೆ ಎಂದು ಕಾಂಗ್ರೆಸ್ ಶಾಸಕರು ಪ್ರಶ್ನೆ ಮಾಡಿದ್ದರು.

ವಿವಿಧ ಮೀಸಲು ಪ್ರದೇಶಗಳಿಂದ ಎಷ್ಟು ಹುಲಿಗಳು ತಪ್ಪಿಸಿಕೊಂಡಿವೆ ಎಂಬ ಮಾಹಿತಿಯನ್ನೂ ಸಹ ಶಾಸಕರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಾ, ಆಹಾರ, ಉತ್ತಮ ಆವಾಸಸ್ಥಾನ ಮತ್ತು ಹೊಸ ಪ್ರದೇಶದ ಹುಡುಕಾಟದಲ್ಲಿ ವಿವಿಧ ಅರಣ್ಯ ಕಾರಿಡಾರ್‌ಗಳ ಮೂಲಕ ಹುಲಿಗಳ ಚಲನೆ ನೈಸರ್ಗಿಕ ಪ್ರಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮದುಮಲೈನಲ್ಲಿ ಸೆರೆಸಿಕ್ಕ ಟಿ-23 ಹುಲಿ ಆರೋಗ್ಯದಲ್ಲಿ ಚೇತರಿಕೆ: ವಿಡಿಯೋ ರಿಲೀಸ್

ರಾಜ್ಯ ಸರ್ಕಾರವು ದೊಡ್ಡ ಬೆಕ್ಕುಗಳ ಸಂರಕ್ಷಣೆ, ಭದ್ರತೆ ಮತ್ತು ಮೇಲ್ವಿಚಾರಣೆಗಾಗಿ 2019 - 20 ರಲ್ಲಿ 22,049.98 ಲಕ್ಷ ರೂ. 2020-21 ಮತ್ತು 2021-22ರಲ್ಲಿ ಕ್ರಮವಾಗಿ 26,427.86 ಲಕ್ಷ ಮತ್ತು 12,882.82 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ವರದಿಗಳ ಪ್ರಕಾರ ಮಧ್ಯಪ್ರದೇಶದಲ್ಲಿ 2012 ಮತ್ತು 2020 ರ ನಡುವೆ ಒಟ್ಟು 202 ಹುಲಿಗಳು ಸಾವಿಗೀಡಾಗಿವೆ ಎಂದು ವರದಿಯಾಗಿದೆ. ಎನ್‌ಟಿಸಿಎ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿ - ಅಂಶಗಳ ಪ್ರಕಾರ ಈ ವರ್ಷದ ಜನವರಿ ಮತ್ತು ಡಿಸೆಂಬರ್ ನಡುವೆ ರಾಜ್ಯದಲ್ಲಿ ಇದುವರೆಗೆ 38 ಹುಲಿಗಳು ಸಾವಿಗೀಡಾಗಿವೆ.

2018 ರ ಜನಗಣತಿಯಲ್ಲಿ ಮಧ್ಯಪ್ರದೇಶವು 526 ಹುಲಿಗಳಿಗೆ ನೆಲೆಯಾಗಿತ್ತು. ಕರ್ನಾಟಕಕ್ಕಿಂತ ಹೆಚ್ಚು ಅಂದರೆ ಎರಡು ಹುಲಿಗಳು ಹೆಚ್ಚಾಗಿ ಇಲ್ಲಿ ಇದ್ದಿದ್ದರಿಂದ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಸರನ್ನು ಪಡೆದುಕೊಂಡಿತ್ತು.

2018ರ ಗಣತಿ ಪ್ರಕಾರ ಹೆಚ್ಚು ಹುಲಿಗಳಿರುವ ರಾಜ್ಯಗಳು ಇಂತಿವೆ:

  • ಮಧ್ಯಪ್ರದೇಶ- 526
  • ಕರ್ನಾಟಕ- 524
  • ಉತ್ತರಾಖಂಡ - 442
  • ಮಹಾರಾಷ್ಟ್ರ- 312
  • ತಮಿಳು ನಾಡು - 264
  • ಉತ್ತರಪ್ರದೇಶ - 173
  • ಕೇರಳ - 190
  • ಅಸ್ಸೋಂ -190

ಕರ್ನಾಟಕ ರಾಜ್ಯದಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಅವುಗಳ ಸಂರಕ್ಷಣೆಗೆ ರಾಜ್ಯ ಅರಣ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿ ರಂಗನ ಬೆಟ್ಟ(ಬಿಆರ್‌ಟಿ), ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಳಿ ಹುಲಿ ಸಂರಕ್ಷಿತ ಪ್ರದೇಶ ಹುಲಿಗಳ ಪ್ರಮುಖ ಸ್ಥಳಗಳಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.