ETV Bharat / bharat

ಮಹಿಳೆಯರೊಂದಿಗೆ ಅಸಭ್ಯ ವರ್ತನೆ: ಆರೋಪಿಗಳಿಗೆ ರಸ್ತೆಯಲ್ಲೇ ಲಾಠಿ ರುಚಿ ತೋರಿಸಿ ಬಸ್ಕಿ ಹೊಡೆಸಿದ ಪೊಲೀಸ್​ - ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪಿಗಳಿಗೆ ಬಸ್ಕಿ ಶಿಕ್ಷೆ

ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನಡುರಸ್ತೆಯಲ್ಲಿ ಬಸ್ಕಿ ಹೊಡೆಸಿ ಬುದ್ಧಿ ಕಲಿಸಿದ್ದಾರೆ. ಈ ಇಬ್ಬರು ಕಾಮುಕರು ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​​ ಜೊತೆ ಕೂಡ ಅನುಚಿತವಾಗಿ ವರ್ತಿಸಿದ್ರು ಎನ್ನಲಾಗ್ತಿದೆ.

Dewas Police makes two men to do sit-ups for harassing women
ಆರೋಪಿಗಳಿಗೆ ರಸ್ತೆಯಲ್ಲೇ ಬಸ್ಕಿ ಹೊಡೆಸಿದ ಪೊಲೀಸ್​
author img

By

Published : Nov 22, 2020, 12:46 PM IST

Updated : Nov 22, 2020, 1:17 PM IST

ದೇವಾಸ್/ಮಧ್ಯಪ್ರದೇಶ: ದೇವಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಗಳನ್ನು ರಸ್ತೆ ಮಧ್ಯೆ ಕೂರಿಸಿ ಬಸ್ಕಿ ಹೊಡೆಸುವ ಮೂಲಕ ಮತ್ತೆ ಆ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ದೇವಾಸ್ ನಲ್ಲಿ ಬೀದಿ ಕಾಮಣ್ಣರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಈ ಇಬ್ಬರು ಆರೋಪಿಗಳ ಕಾಟದಿಂದ ಮಹಿಳೆಯರು ಮನೆಯಿಂದ ಹೊರಗೆ ಕಾಲಿಡಲು ಭಯಪಡುತ್ತಿದ್ದರು ಎಂದು ಮಹಿಳಾ ಕಾನ್ಸ್​ಟೇಬಲ್​ ಮನೀಶಾ ತಿಳಿಸಿದ್ರು. ಅಲ್ಲದೇ ಇನ್ಮುಂದೆ ಯಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಬಾರದು ಎಂದು ಎಚ್ಚರಿಸಲು ಇವರಿಗೆ ನಡುರಸ್ತೆಯಲ್ಲಿ ಬಸ್ಕಿ ಹೊಡೆಸಿ, ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದೇವೆ ಎಂದು ತಿಳಿಸಿದ್ರು.

ಕಳೆದ ಅಕ್ಟೋಬರ್ 18 ರಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಸಹ ಬಂಧಿಸಿ, ಬಂಗಂಗಾ ಪ್ರದೇಶದಲ್ಲಿ ಇದೇ ರೀತಿಯಾಗಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಗಿತ್ತು.

Last Updated : Nov 22, 2020, 1:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.