ETV Bharat / bharat

ಇಲ್ಲಿ ಲವ್​ ಜಿಹಾದ್​ ಕಾನೂನು ಜಾರಿಯಾದ ಬಳಿಕ ಮೊದಲ ಪ್ರಕರಣ ದಾಖಲು - ಮಧ್ಯಪ್ರದೇಶ ಲವ್​ ಜಿಹಾದ್​ ಸಂಬಂಧಿತ ಸುದ್ದಿ

ಮಧ್ಯಪ್ರದೇಶದಲ್ಲಿ ಲವ್​ ಜಿಹಾದ್​ ಕಾನೂನು ಜಾರಿಯಾದ ಬಳಿಕ ಬಾರ್ವಾನಿ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಯುವತಿಯೊಬ್ಬಳು 25 ವರ್ಷದ ವಿವಾಹಿತ ವ್ಯಕ್ತಿಯೊಬ್ಬನ ಮೇಲೆ ದೂರು ನೀಡಿದ್ದು, ತನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

love Jihad
ಎಂಪಿಯಲ್ಲಿ ಲವ್​ ಜಿಹಾದ್​
author img

By

Published : Jan 19, 2021, 11:20 AM IST

ಭೋಪಾಲ್: ಮಧ್ಯಪ್ರದೇಶದಲ್ಲಿ ಲವ್​ ಜಿಹಾದ್​ ಕಾನೂನು ಜಾರಿಯಾದ ಬಳಿಕ ಮೊದಲ ಪ್ರಕರಣ ಬಾರ್ವಾನಿ ಜಿಲ್ಲೆಯಲ್ಲಿ ದಾಖಲಾಗಿದೆ.

ಬಾರ್ವಾನಿ ಜಿಲ್ಲೆಯ 22 ವರ್ಷದ ಯುವತಿಯೊಬ್ಬಳು 25 ವರ್ಷದ ವಿವಾಹಿತ ವ್ಯಕ್ತಿಯೊಬ್ಬನ ಮೇಲೆ ದೂರು ನೀಡಿದ್ದು, ತನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದಾನೆ. ಅಷ್ಟೇ ಅಲ್ಲದೇ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ.

"ಆರೋಪಿಯು ಸಂತ್ರಸ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಈಕೆಯೊಂದಿಗೆ ಪರಿಚಯ ಮಾಡಿಕೊಂಡ ವೇಳೆ, ಒಂದೇ ಸಮುದಾಯದವನು ಎಂದು ನಂಬಿಸಿದ್ದನಂತೆ. ಆ ಬಳಿಕ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ" ಎಂದು ಇನ್ಸ್​ಪೆಕ್ಟರ್​ ರಾಜೇಶ್​ ಯಾದವ್​ ಹೇಳಿದ್ದಾರೆ.

ಹಲ್ಲೆ, ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಮಧ್ಯಪ್ರದೇಶದ ಸ್ವಾತಂತ್ರ್ಯ ಆರ್ಡಿನೆನ್ಸ್ (2020) ಅಡಿ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನು ಮಧ್ಯಪ್ರದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮಸೂದೆಯಡಿ ಬಲವಂತದ ಧಾರ್ಮಿಕ ಮತಾಂತರಕ್ಕೆ 1-5 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 25 ಸಾವಿರ ರೂ. ದಡ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಕ, ಮಹಿಳೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸಿದರೆ ಕನಿಷ್ಠ 2-10 ವರ್ಷಗಳ ಜೈಲು ಶಿಕ್ಷೆ, ಕನಿಷ್ಠ 50,000 ರೂ. ಜುಲ್ಮಾನೆ ಹಾಕಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.