ETV Bharat / bharat

ಕಿರಿಯ ಪರ್ವತಾರೋಹಿ ಶೀತಲ್​ರಾಜ್​ಗೆ ತೇನ್ಸಿಂಗ್​ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ ಪ್ರದಾನ - President Ramnath Kovind

ವಿಶ್ವದ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟ್(Treacherous mountains mount everest)ಅನ್ನು ಏರಿದ ಅತ್ಯಂತ ಕಿರಿಯ ಪರ್ವತಾರೋಹಿ ಶೀತಲ್ ರಾಜ್(Sheetal Raj)ಅವರಿಗೆ ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು(Tenzing Norgay Award)ರಾಷ್ಟ್ರಪತಿ ರಾಮನಾಥ್ ಕೋವಿಂದ್(President Ramnath Kovind)ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.

Mountaineer Sheetal Raj
ಕಿರಿಯ ಪರ್ವತಾರೋಹಿ ಶೀತಲ್​ರಾಜ್​
author img

By

Published : Nov 13, 2021, 2:11 PM IST

ಹಲ್ದ್ವಾನಿ(ಉತ್ತರಾಖಂಡ): ವಿಶ್ವದ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟ್(Treacherous mountains mount Everest) ಅನ್ನು ಏರಿದ ಅತ್ಯಂತ ಕಿರಿಯ ಪರ್ವತಾರೋಹಿ ಶೀತಲ್ ರಾಜ್ (Sheetal Raj) ಅವರಿಗೆ ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು (Tenzing Norgay Award)ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ಪ್ರದಾನ ಮಾಡಿದರು.

ಪಿಥೋರಗಢ್ ಜಿಲ್ಲೆಯ ಸಲ್ಲೋಡಾ ಗ್ರಾಮದ ನಿವಾಸಿ ಟ್ಯಾಕ್ಸಿ ಚಾಲಕನ ಮಗಳಾದ ಶೀತಲ್ ರಾಜ್​(25) ತೇನ್ಸಿಂಗ್​ ಪ್ರಶಸ್ತಿ ಪಡೆದ ಅತಿ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ನವದೆಹಲಿ - ಝಾನ್ಸಿ ತಾಜ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ: ಪ್ರಯಾಣಿಕರು ಬಚಾವ್​

ಕುಮಾವೂನ್ ಮಂಡಲ್ ವಿಕಾಸ್ ನಿಗಮದ ಸಾಹಸ ಪ್ರವಾಸೋದ್ಯಮ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶೀತಲ್​ರಾಜ್​, 2018 ರಲ್ಲಿ 8,586 ಮೀಟರ್ ಎತ್ತರವಿರುವ ಮೌಂಟ್ ಕಾಂಚನಜುಂಗಾ ಶಿಖರವನ್ನು ಮತ್ತು 2019 ರಲ್ಲಿ ಮೌಂಟ್ ಎವರೆಸ್ಟ್ ಅನ್ನು ಏರಿ ದಾಖಲೆ ಬರೆದಿದ್ದರು.

ಅಲ್ಲದೇ, ಯುರೋಪ್‌ನ ಅತ್ಯುನ್ನತ ಶಿಖರವಾದ ಮೌಂಟ್ ಎಲ್ಬ್ರಸ್‌ ಅನ್ನು 15 ಆಗಸ್ಟ್​ 2021ರಲ್ಲಿ ಏರಿ ಅಲ್ಲಿ ಭಾರತೀಯ ಧ್ವಜವನ್ನು ಹಾರಿಸಿದ ಕೀರ್ತಿ ಶೀತಲ್​ರಾಜ್​ ಅವರದ್ದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.