ETV Bharat / bharat

2018 ರಲ್ಲಿ ಪೋಸ್ಟ್​ನಲ್ಲಿ ಮಾಡಿದ 500 ರೂ ಮನಿಆರ್ಡರ್​ 2022 ರಲ್ಲಿ ಮನೆಗೆ ಬಂತು!

ಪೋಸ್ಟ್​ ಆಫೀಸ್​ನಲ್ಲಿ 2018 ರಲ್ಲಿ ಮಾಡಿದ್ದ ಮನಿಆರ್ಡರ್​ ಕಳೆದ ತಿಂಗಳ 26 ರಂದು ಬಂದು ತಲುಪಿದೆ. 100 ಕಿಮೀ ದೂರವನ್ನು ತಲುಪಲು ಅದು ಬರೋಬ್ಬರಿ 4 ವರ್ಷ ತೆಗೆದುಕೊಂಡಿದ್ದು, ಅಚ್ಚರಿ ಮೂಡಿಸಿದೆ.

money-order-to-sister-takes
ಪೋಸ್ಟ್​ನಲ್ಲಿ ಮಾಡಿದ ₹500 ಮನಿಆರ್ಡರ್
author img

By

Published : Dec 1, 2022, 10:57 PM IST

ರೂರ್ಕೆಲಾ(ಒಡಿಶಾ): ಡಿಜಿಟಲ್​ ಸಹಾಯದಿಂದ ಕ್ಷಣಮಾತ್ರದಲ್ಲೇ ಯಾರಿಗೆ, ಎಲ್ಲಿಗೆ ಬೇಕಾದರೂ ಈಗ ಹಣ ಪಾವತಿಸಬಹುದು. ಆದರೆ, ಈ ಸ್ಟೋರಿ ಮಾತ್ರ ಸ್ವಲ್ಪ ವಿಚಿತ್ರವಾಗಿದೆ. 100 ಕಿಮೀ ದೂರದಲ್ಲಿರುವ ತನ್ನ ಸಹೋದರಿಗೆ ಅಣ್ಣನೊಬ್ಬ ಮಾಡಿದ್ದ 500 ರೂಪಾಯಿ ಮನಿ ಆರ್ಡರ್​ ಬರೋಬ್ಬರಿ 4 ವರ್ಷಗಳ ಬಳಿಕ ಮನೆ ತಲುಪಿ ಅಚ್ಚರಿ ಮೂಡಿಸಿದೆ.

ಒಡಿಶಾದ ಸುಂದರ್​ಗಢ ಜಿಲ್ಲೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ನವೆಂಬರ್​ 26 ರಂದು ಪೋಸ್ಟ್​ಮ್ಯಾನ್​ ಮನಿ ಆರ್ಡರ್​ ರಸೀದಿ ನೀಡಿದಾಗ ಘಟನೆ ಮುನ್ನೆಲೆಗೆ ಬಂದಿದೆ.

ಏನಾಗಿತ್ತು?: ರಾಯಗಢದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣನೊಬ್ಬ ತನ್ನ ತಂಗಿಗೆ 2018 ರ ಮೇ 9 ರಂದು ಪೂರ್ವ ಮಾಹಿತಿ ನೀಡದೇ ಖರ್ಚಿಗೆಂದು 500 ರೂಪಾಯಿ ಹಣವನ್ನು ಪೋಸ್ಟ್​ ಆಫೀಸಿನಲ್ಲಿ ಮನಿ ಆರ್ಡರ್​ ಮಾಡಿದ್ದರು. ಇದಕ್ಕಾಗಿ ಅವರು ದಾಖಲೆಯನ್ನೂ ಪಡೆದಿದ್ದರು. ಹಣ ಮುಟ್ಟಿದ ಬಗ್ಗೆ ಅಣ್ಣ ಈವರೆಗೂ ವಿಚಾರಿಸಿರಲೇ ಇಲ್ಲ.

ಅಂದು ಮಾಡಿದ ಮನಿ ಆರ್ಡರ್​ ಬರೋಬ್ಬರಿ ನಾಲ್ಕು ವರ್ಷ ಅಂದರೆ ಕಳೆದ ತಿಂಗಳ ನವೆಂಬರ್​ 26 ರಂದು ನಮೂದಿಸಿದ ವಿಳಾಸಕ್ಕೆ ಬಂದಿದೆ. ಪೋಸ್ಟ್​ಮ್ಯಾನ್​ ಹಣವಿದ್ದ ಪೊಟ್ಟಣವನ್ನು ನೀಡಿ ಮಹಿಳೆಯಿಂದ ಸಹಿ ಪಡೆದಿದ್ದಾರೆ. ಇದನ್ನು ತೆರೆದು ನೋಡಿದಾಗ ಅದರಲ್ಲಿ 500 ರೂಪಾಯಿ ಹಣ ಇರುವುದು ಕಂಡು ಬಂದಿದೆ.

ಈ ಬಗ್ಗೆ ಮನೆಯವರನ್ನು ವಿಚಾರಿಸಿದಾಗ ಇದು ಯಾರೂ ಕಳಿಸಿಲ್ಲ ಎಂಬುದು ಗೊತ್ತಾಗಿದೆ. ಬಳಿಕ ತನ್ನ ಅಣ್ಣನನ್ನು ಕೇಳಿದಾಗ ತಾನು 2018 ರಲ್ಲಿ ಮನಿ ಆರ್ಡರ್​ ಮಾಡಿದ್ದು ನೆನಪಿಸಿಕೊಂಡಿದ್ದಾರೆ. 100 ಕಿಮೀ ದೂರವಿರುವ ಗ್ರಾಮಕ್ಕೆ 2018 ರಲ್ಲಿ ಮಾಡಿದ ಮನಿ ಆರ್ಡರ್​ 2022 ಕ್ಕೆ ಬಂದು ತಲುಪಿದ್ದು, ಅಚ್ಚರಿಯ ಜೊತೆಗೆ ಕರ್ತವ್ಯಲೋಪವನ್ನು ತೋರಿಸುತ್ತದೆ. ಬಳಿಕ ಈ ಬಗ್ಗೆ ಅಂಚೆ ಇಲಾಖೆಗೆ ದೂರು ನೀಡಿದ್ದು, ಈ ಬಗ್ಗೆ ಅಧಿಕಾರಿಗಳು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಓದಿ: ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ: ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.