ಯೋಗಾಭ್ಯಾಸವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಿದ್ಧಿ ಅಥವಾ ಸಮಾಧಿ ಸ್ಥಿತಿಯಲ್ಲಿ ಮನಸ್ಸು ಸಂಯಮವಾಗುತ್ತದೆ. ಆನಂದದ ಸಮಾಧಿ ಸ್ಥಿತಿಯಲ್ಲಿ ನೆಲೆಸಿರುವ ಮನುಷ್ಯ ಎಂದಿಗೂ ಸತ್ಯದಿಂದ ವಿಮುಖನಾಗುವುದಿಲ್ಲ ಮತ್ತು ಈ ಸಂತೋಷವನ್ನು ಪಡೆದ ನಂತರ ಅವನು ಇದಕ್ಕಿಂತ ದೊಡ್ಡ ಲಾಭವನ್ನು ಪರಿಗಣಿಸುವುದಿಲ್ಲ.
ಮನುಷ್ಯನು ತನ್ನನ್ನು ಶುದ್ಧ ಮನಸ್ಸಿನಿಂದ ನೋಡಿಕೊಳ್ಳಬೇಕು. ಸುಖಮಯ ಸಮಾಧಿಯ ಸ್ಥಿತಿಯನ್ನು ಪಡೆದ ನಂತರ ಮನುಷ್ಯ ಯಾವುದೇ ಕಷ್ಟದಲ್ಲಿ ವಿಚಲಿತರಾನಾಗುವುದಿಲ್ಲ. ಹೇಗೆ ಗಾಳಿಯಿಲ್ಲದ ಸ್ಥಳದಲ್ಲಿ ದೀಪವು ತೂಗಾಡುವುದಿಲ್ಲವೋ, ಅದೇ ರೀತಿ ಯೋಗಿ ತನ್ನ ಮನಸ್ಸನ್ನು ನಿಯಂತ್ರಿಸುತ್ತಾನೆ. ಆತ ಯಾವಾಗಲೂ ಆತ್ಮ-ತತ್ತ್ವದ ಧ್ಯಾನದಲ್ಲಿ ಸ್ಥಿರವಾಗಿರುತ್ತಾನೆ.
ಮಾನಸಿಕ ಧರ್ಮದಿಂದ ಉದ್ಭವಿಸುವ ಎಲ್ಲ ಆಸೆಗಳನ್ನು ನಿರಂತರವಾಗಿ ತ್ಯಜಿಸಬೇಕು. ಮನಸ್ಸಿನ ಮೂಲಕ ಇಂದ್ರಿಯಗಳನ್ನು ನಿಯಂತ್ರಿಸಬೇಕು. ಕ್ರಮೇಣ ಸಂಪೂರ್ಣ ನಂಬಿಕೆಯೊಂದಿಗೆ ಬುದ್ಧಿ ಸಮಾಧಿಯಲ್ಲಿ ನೆಲೆಗೊಳ್ಳುತ್ತದೆ. ಮನಸ್ಸನ್ನು ಆತ್ಮದಲ್ಲಿಯೇ ಸ್ಥಿರವಾಗಿಡಬೇಕು ಮತ್ತು ಬೇರೆ ಯಾವುದೇ ವಿಷಯದ ಕುರಿತು ಯೋಚಿಸಬಾರದು. ಯೋಗಿಯು ತನ್ನ ಮನಸ್ಸನ್ನು ಪರಮಾತ್ಮನಲ್ಲಿ ಸ್ಥಿರವಾಗಿರಿಸಿದ್ದಾನೆ. ಹೀಗಾಗಿ ಅತೀಂದ್ರಿಯ ಸಂತೋಷದ ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸುತ್ತಾನೆ. ಆತನು ಪರಮಾತ್ಮನೊಂದಿಗಿನ ತನ್ನ ಗುಣಾತ್ಮಕ ಏಕತೆಯನ್ನು ಅರ್ಥಮಾಡಿಕೊಳ್ಳುತ್ತಾನೆ.