ETV Bharat / bharat

ಶಾಲೆಯಿಂದ ಮನೆಗೆ ಬರ್ತಿದ್ದ ಬಾಲಕಿಯನ್ನು ಕಾಡಿನೊಳಗೆ ಎಳೆದೊಯ್ದು ಗ್ಯಾಂಗ್​ರೇಪ್​! - ಜಮುಯಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಬಂಧನ

ಮುಗ್ಧ ಬಾಲಕಿಯನ್ನು ಒಂಟಿಯಾಗಿ ನೋಡಿದ ಕೀಚಕರು ಕ್ರೌರ್ಯದ ಎಲ್ಲ ಮಿತಿಗಳನ್ನೂ ಮೀರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

gang rape with minor girl in Jamui  gang rape with minor girl in bihar  girl molested in jamui  Jamui gang rape Case  SDPO Dr Rakesh Kumar  Kathua rape case  molestation with minor girl in Jamui  Jamui crime news  ಬಿಹಾರದಲ್ಲಿ ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿ ಮೇಲೆ ಐವರಿಂದ ಅತ್ಯಾಚಾರ  ಜಮುಯಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ  ಜಮುಯಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಬಂಧನ  ಬಿಹಾರ ಅಪರಾಧ ಸುದ್ದಿ
ಗ್ಯಾಂಗ್​ರೇಪ್
author img

By

Published : May 5, 2022, 7:27 AM IST

ಜಮುಯಿ: ಅತ್ಯಂತ ನಾಚಿಕೆಗೇಡಿನ ಅಪರಾಧ ಪ್ರಕರಣವೊಂದು ಬಿಹಾರದ ಜಮುಯಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಖೈರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿಯೊಬ್ಬಳ ಮೇಲೆ ಐವರು ಕಾಮುಕ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ದುಷ್ಕೃತ್ಯಕ್ಕೊಳಗಾದ ಬಾಲಕಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಪೊಲೀಸ್​ ಅಧಿಕಾರಿಯಿಂದಲೇ ಅತ್ಯಾಚಾರ

ವಿವರ: ಬಾಲಕಿ ಎಂದಿನಂತೆ ಬುಧವಾರ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದಳು. ಇದೇ ಸಂದರ್ಭದಲ್ಲಿ ಗ್ರಾಮದ ಐವರು ಯುವಕರು ಎದುರಾಗಿದ್ದಾರೆ. ಇವರನ್ನು ಕಂಡ ಆಕೆಗೆ ಅನುಮಾನ ಮೂಡಿದೆ. ಬಾಲಕಿಯ ಬಾಯಿ ಮುಚ್ಚಿ ಕಾಡಿನೊಳಗೆ ಕರೆದೊಯ್ದ ದುಷ್ಟರು ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಎಸಗಿದರು. ಇದರಿಂದ ಬಾಲಕಿ ಪ್ರಜ್ಞೆ ತಪ್ಪಿದ್ದು, ಕಾಡಿನಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.

ಬಾಲಕಿ ಬಹಳ ಹೊತ್ತು ಪ್ರಜ್ಞೆ ತಪ್ಪಿ ಕಾಡಿನಲ್ಲೇ ಬಿದ್ದಿದ್ದಳು. ಬಹಳ ಹೊತ್ತಾದರೂ ಮನೆಗೆ ಬಾರದ ಬಾಲಕಿಯನ್ನು ಕುಟುಂಬಸ್ಥರು ಹುಡುಕತೊಡಗಿದ್ದಾರೆ. ಆದರೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಅಷ್ಟರಲ್ಲಿ ಸಂತ್ರಸ್ತೆ ಮನೆಗೆ ಮರಳಿದ್ದು, ಘಟನೆಯನ್ನು ಹೇಳಿದ್ದಾಳೆ. ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ: ಒಂಟಿ ಮಹಿಳೆ ಮೇಲೆ ಅತ್ಯಾಚಾರ.. ಸಂತ್ರಸ್ತೆಗೆ ಚಾಕು ಇರಿದು ಪರಾರಿಯಾದ ಕೀಚಕರು

ಮೂವರ ಬಂಧನ: ಬಾಲಕಿಯ ಹೇಳಿಕೆ ಆಧರಿಸಿ ಸ್ಥಳೀಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 10 ದಿನಗಳ ಹಿಂದೆಯೂ ಶಾಲೆಯಿಂದ ಹಿಂತಿರುಗುತ್ತಿದ್ದ ಬಾಲಕಿ ಮೇಲೆ ಈ ಐವರಲ್ಲಿ ಯುವಕನೊಬ್ಬ ಕಿರುಕುಳ ನೀಡಿದ್ದ ಎಂದು ತಿಳಿದುಬಂದಿದೆ. ಈ ಪ್ರಕರಣವನ್ನು ಸ್ಥಳೀಯರು ತಮ್ಮಲ್ಲೇ ಇತ್ಯರ್ಥಪಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.