ETV Bharat / bharat

ಮಧ್ಯಪ್ರದೇಶದ ನೂತನ ಸಿಎಂ ಆಗಿ ಮೋಹನ್​ ಯಾದವ್ ದೇವರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕಾರ

author img

By ETV Bharat Karnataka Team

Published : Dec 13, 2023, 12:18 PM IST

Updated : Dec 13, 2023, 2:29 PM IST

Mohan Yadav becomes Madya Pradesh new CM: ಮಧ್ಯಪ್ರದೇಶ ನೂತನ ಸಿಎಂ ಆಗಿ ಮೋಹನ್​ ಯಾದವ್ ಅಧಿಕಾರ ವಹಿಸಿಕೊಂಡರು.

ಮೋಹನ್​ ಯಾದವ್
ಮೋಹನ್​ ಯಾದವ್

ಭೋಪಾಲ್ (ಮಧ್ಯಪ್ರದೇಶ) : ಮಧ್ಯಪ್ರದೇಶದ ನೂತನ ಸಿಎಂ ಆಗಿ ಆಯ್ಕೆಯಾಗಿರುವ ಮೋಹನ್​ ಯಾದವ್​ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಭೋಪಾಲ್‌ನ ಮೋತಿಲಾಲ್ ನೆಹರು ಕ್ರೀಡಾಂಗಣದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ.ಪಟೇಲ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಇದರ ಜೊತೆಗೆ ಉಪ ಮುಖ್ಯಮಂತ್ರಿಗಳಾಗಿ ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದೇವ್ರಾ ಅವರು ಕೂಡ ಪ್ರತಿಜ್ಞೆ ಪಡೆದರು. ಕೇಂದ್ರದ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಧಾನಸಭೆ ಸ್ಪೀಕರ್ ಆಗಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮಾಜಿ ಸಿಎಂ ಶಿವರಾಜ್​ ಸಿಂಗ್​ ಔಹಾಣ್​, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

  • #WATCH | BJP leader Jagdish Devda take oath as the Deputy Chief Minister of Madhya Pradesh.

    Prime Minister Narendra Modi and other senior NDA leaders attend the ceremony. pic.twitter.com/VgqbDtyA8F

    — ANI (@ANI) December 13, 2023 " class="align-text-top noRightClick twitterSection" data=" ">

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ, ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಿದರು. ಬಳಿಕ ರಾಜ್ಯ ಬಿಜೆಪಿ ಕಚೇರಿಗೂ ಭೇಟಿ ನೀಡಿದರು. ಅಲ್ಲಿ ಅವರು ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಕೇಸರಿ ಪಕ್ಷದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ನಮನ ಸಲ್ಲಿಸಿದರು.

ಯಾದವ ಸಮುದಾಯದ ನಾಯಕರಾದ ಸಿಎಂ ಮೋಹನ್​ ಯಾದವ್​ ಅವರ ಶಪಥ ಕಾರ್ಯಕ್ರಮಕ್ಕೆ ಉಜ್ಜಯಿನಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ರಾಜ್ಯದಲ್ಲಿ ಯಾದವರ ಸಂಖ್ಯೆ ಅಧಿಕವಾಗಿದ್ದರಿಂದ ಅದೇ ಸಮುದಾಯದ ನಾಯಕನಿಗೆ ಪಕ್ಷ ಮಣೆ ಹಾಕಿದೆ.

  • #WATCH | BJP leader Rajendra Shukla takes oath as the Deputy Chief Minister of Madhya Pradesh, in Bhopal.

    Prime Minister Narendra Modi and other senior NDA leaders attend the ceremony. pic.twitter.com/GEUaA4TRR8

ಶಿವರಾಜ್​ ಸಿಂಗ್​ ಹವಾ: ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಶಿವರಾಜ್​ ಸಿಂಗ್ ಚೌಹಾಣ್​ ಅವರು ಹಾಜರಿದ್ದರು. ಕಾರ್ಯಕ್ರಮದ ವೇದಿಕೆ ಹತ್ತುವ ವೇಳೆ ಜನರತ್ತ ಕೈ ಬೀಸಿದರು. ಜನರು ದೊಡ್ಡದಾಗಿ ಘೋಷಣೆ ಕೂಗಿದರು. ಸತತ ನಾಲ್ಕು ಅವಧಿಗೆ ಸಿಎಂ ಆಗಿದ್ದ ಚೌಹಾಣ್​, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದರು.

ಮುಂದಿನ ದಿನಗಳಲ್ಲಿ ನಾಯಕತ್ವ ಬೆಳೆಸುವ ದೃಷ್ಟಿಯಿಂದ ಪಕ್ಷದ ಹೈಕಮಾಂಡ್ ನಿರ್ದೇಶನದಂತೆ, ಚೌಹಾಣ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಮೋಹನ್​ ಯಾದವ್ ಅವರನ್ನು ಸೋಮವಾರ ನಡೆದ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

  • #WATCH | Prime Minister Narendra Modi, Union Home Minister Amit Shah, BJP national president JP Nadda and other leaders leave from the venue of the swearing-in ceremony, in Bhopal. pic.twitter.com/YrdzQWGh67

ಇನ್ನೂ, ನ. 17 ರಂದು 230 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಡಿಸೆಂಬರ್ 3 ರಂದು ಮತ ಎಣಿಕೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆದ್ದುಕೊಂಡಿತು. ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸಿದ್ದ ಕಾಂಗ್ರೆಸ್ 66 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಿತು. ಅಲ್ಲದೇ, 50 ಅಧಿಕ ಸ್ಥಾನಗಳ ಖೋತಾ ಅನುಭವಿಸಿತು.

ಇದನ್ನೂ ಓದಿ: ಇಂದು ಮಧ್ಯಪ್ರದೇಶ, ಛತ್ತೀಸ್‌ಗಢದ ನೂತನ ಸಿಎಂಗಳ ಪ್ರಮಾಣವಚನ ಸ್ವೀಕಾರ

Last Updated : Dec 13, 2023, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.