ನವದೆಹಲಿ: ಉಪರಾಷ್ಟ್ರಪತಿಯಾಗಿ ಹಾಗೂ ರಾಜ್ಯಸಭಾ ಸಭಾಪತಿಯಾಗಿ ಎಂ.ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಬುಧವಾರ ಕೊನೆಗೊಳ್ಳಲಿದೆ. ಇದಕ್ಕೂ ಮುನ್ನ ಇಂದು ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಸಂಸತ್ ಭವನದ ಗ್ರಂಥಾಲಯ ಕಟ್ಟಡದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವೆಂಕಯ್ಯಾಜಿ ಅವರ ಬದುಕೇ ನಮಗೆ ದೊಡ್ಡ ಕೊಡುಗೆ. ಅವರಿಂದ ಪಡೆದ ಅನುಭವಗಳನ್ನು ಪಡೆದುಕೊಂಡು ಮುಂದೆ ಸಾಗೋಣ. ಅವರು ತಮ್ಮ ತಾಯ್ನಾಡಿನ ಭಾಷೆಯ ಜತೆಗೆ ದೇಶದ ಎಲ್ಲ ಭಾಷೆಗಳ ಮೇಲೂ ಅಪಾರ ಪ್ರೀತಿ, ಗೌರವ ಹೊಂದಿದ್ದವರು. ಅವರ ಅಧಿಕಾರವಧಿ ಸ್ಫೂರ್ತಿದಾಯಕ, ಪ್ರೋತ್ಸಾಹದಾಯಕ ಮತ್ತು ಗೌರವಯುತವಾಗಿತ್ತು ಎಂದು ಬಣ್ಣಿಸಿದರು.
ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿ, "ನಾನು ಒಂದೆಡೆ ತುಂಬಾ ಸಂತೋಷವಾಗಿದ್ದೇನೆ ಇನ್ನೊಂದೆಡೆ ನಿಮ್ಮೆಲ್ಲರನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಬೇಸರದಲ್ಲೂ ಇದ್ದೇನೆ. ಆಗಸ್ಟ್ 10 ರಂದು ನಾನು ಸದನದ ಅಧ್ಯಕ್ಷತೆ ವಹಿಸುವಂತಿಲ್ಲ" ಎಂದು ಭಾವುಕರಾದರು.
ಆಗಸ್ಟ್ 11 ರಂದು ಜಗದೀಪ್ ಧನಕರ್ ದೇಶದ ನೂತನ ಉಪರಾಷ್ಟ್ರಪತಿಯಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಬಿರುಕು: ಮಹತ್ವದ ಸಭೆ ಕರೆದ ಸಿಎಂ ನಿತೀಶ್ ಕುಮಾರ್