ETV Bharat / bharat

Women reservation: ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ.. ಹೊಸ ಸಂಸತ್ತಿನಲ್ಲಿ ಮಂಗಳವಾರ ಮಂಡನೆ ಸಾಧ್ಯತೆ

ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇಕಡಾ 33 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ ಎಂದು ತಿಳಿದುಬಂದಿದೆ.

ಮಹಿಳಾ ಮೀಸಲಾತಿ ಮಸೂದೆ
ಮಹಿಳಾ ಮೀಸಲಾತಿ ಮಸೂದೆ
author img

By ETV Bharat Karnataka Team

Published : Sep 18, 2023, 10:15 PM IST

Updated : Sep 18, 2023, 10:35 PM IST

ನವದೆಹಲಿ: ಬಹುಚರ್ಚಿತ ಮಹಿಳಾ ಮೀಸಲಾತಿ ವಿಧೇಯಕವನ್ನು ಸದ್ಯ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನವಾದ ಸೋಮವಾರ 75 ವರ್ಷಗಳ ಸಂಸದೀಯ ಇತಿಹಾಸದ ಬಗ್ಗೆ ಚರ್ಚೆ ನಡೆದ ಬಳಿಕ, ಸಂಜೆ ಕೇಂದ್ರ ಸಚಿವ ಸಂಪುಟ ಸಭೆ ನಡೆಸಲಾಯಿತು. ಅದರಲ್ಲಿ ಸರ್ಕಾರ ಹಲವು ಮಸೂದೆಗಳನ್ನು ಮಂಡಿಸುವ ಕುರಿತು ಒಪ್ಪಿಗೆ ಪಡೆದುಕೊಳ್ಳಲಾಯಿತು. ಅದರಲ್ಲಿ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇಕಡಾ 33 ಮೀಸಲಾತಿ ನೀಡುವ ಮಸೂದೆಯನ್ನೂ ಮಂಡಿಸಲು ಸಮ್ಮತಿ ಸಿಕ್ಕಿದೆ ಎಂದು ವರದಿಯಾಗಿದೆ.

ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ ನಡೆಸಿದ್ದು, ರಾಜನಾಥ್ ಸಿಂಗ್, ಅಮಿತ್ ಶಾ, ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ, ಎಸ್ ಜೈಶಂಕರ್, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಸತ್​ ವಿಶೇಷ ಅಧಿವೇಶನ ದಿನಾಂಕ ಘೋಷಿಸಿದಾಗಿನಿಂದಲೂ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡುವ ಬಗ್ಗೆ ಊಹಾಪೋಹಗಳು ಸುಳಿದಾಡುತ್ತಿವೆ. ಇದೀಗ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈ ಮಧ್ಯೆ, ಮಸೂದೆಯು ಬಹುಕಾಲದ ಬೇಡಿಕೆಯಾಗಿದೆ. ಒಂದು ವೇಳೆ ಕೇಂದ್ರ ಸಚಿವ ಸಂಪುಟದ ವಿಧೇಯಕ ಮಂಡಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದರೆ ಅದನ್ನು ಕಾಂಗ್ರೆಸ್ ಬೆಂಬಲಿಸಲಿದೆ. ವಿಶೇಷ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಬಹುದಿತ್ತು. ಗೌಪ್ಯತೆವಾಗಿಟ್ಟು ಮಂಡನೆ ಮಾಡುವ ಬದಲು ವಿಪಕ್ಷಗಳ ಜೊತೆಗೆ ಒಮ್ಮತದಿಂದ ಮುಂದಡಿ ಇಡಬಹುದಾಗಿತ್ತು ಎಂದು ಕಾಂಗ್ರೆಸ್​ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಮಂಗಳವಾರ ಹೊಸ ಸಂಸತ್​ ಭವನದಲ್ಲಿ ಕಲಾಪ: ಸೋಮವಾರ ಮೊದಲ ದಿನದ ಕಲಾಪದ ಬಳಿಕ ಉಭಯ ಸದನಗಳನ್ನು ಮಂಗಳವಾರ ಮಧ್ಯಾಹ್ನ 1.15 ಕ್ಕೆ ಮುಂದೂಡಲಾಗಿದೆ. ನಾಳೆಗೆ ಹೊಸ ಸಂಸತ್​ ಭವನದಲ್ಲಿ ಕಲಾಪ ನಡೆಯಲಿದೆ. 75 ವರ್ಷಗಳಿಂದ ಪ್ರಜಪ್ರಭುತ್ವದ ಹಲವು ಮಹತ್ವದ ಘಟ್ಟಗಳಿಗೆ, ವಿಧೇಯಗಳಿಗೆ, ವಿವಾದಗಳನ್ನು ಕಂಡಿದ್ದ ಹಳೆಯ ಸಂಸತ್​ ಭವನ ಇನ್ನು ಮುಂದೆ ರಾಜಕೀಯ ಕಲಾಪಗಳಿಂದ ಮುಕ್ತವಾಗಲಿದೆ. ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ಈ ವಿಶೇಷ ಅಧಿವೇಶನ ನಡೆಯಲಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಪರ ಕಾಂಗ್ರೆಸ್​ ಬ್ಯಾಟಿಂಗ್​.. ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಕೇಂದ್ರಕ್ಕೆ ಆಗ್ರಹ

Last Updated : Sep 18, 2023, 10:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.