ETV Bharat / bharat

ಫ್ಯಾಷನ್​ ಶೋ ವೇಳೆ ಅಲಂಕಾರಿಕ ಲೈಟಿಂಗ್​ ಕಂಬ ಬಿದ್ದು ಮಾಡೆಲ್​​ ಸಾವು: ಮತ್ತೋರ್ವ ಗಂಭೀರ

ಫ್ಯಾಷನ್​ ಶೋ ವೇಳೆ ಅಲಂಕಾರಿಕ ಲೈಟಿಂಗ್​ ಕಂಬ ಬಿದ್ದು ಮಾಡೆಲ್​ ಸಾವನ್ನಪ್ಪಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

model-dies-after-lighting-truss-falls-on-her-during-fashion-show-in-noida
ಫ್ಯಾಶನ್​ ಶೋ ವೇಳೆ ಅಲಂಕಾರಿಕ ಲೈಟಿಂಗ್​ ಕಂಬ ಬಿದ್ದು ಮಾಡೆಲ್​​ ಸಾವು: ಮತ್ತೋರ್ವ ಗಂಭೀರ
author img

By

Published : Jun 11, 2023, 10:55 PM IST

ನವದೆಹಲಿ /ನೋಯ್ಡಾ: ಫ್ಯಾಷನ್​ ಶೋ ವೇಳೆ ಅಲಂಕಾರಿಕ ಲೈಟಿಂಗ್​ ಕಂಬ ಬಿದ್ದು ಮಾಡೆಲ್​ ಒಬ್ಬರು ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಮೃತರನ್ನು ವಂಶಿಕಾ ಚೋಪ್ರಾ(24) ಎಂದು ಗುರುತಿಸಲಾಗಿದೆ. ಬಾಬಿ ರಾವ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ.​

ಭಾನುವಾರ ನೋಯ್ಡಾ ಫಿಲ್ಮ್ ಸಿಟಿಯಲ್ಲಿ ಫ್ಯಾಷನ್ ಶೋ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಫ್ಯಾಷನ್ ​ಶೋನಲ್ಲಿ ಭಾಗವಹಿಸಿದ್ದ ವಂಶಿಕಾ ಮತ್ತು ಬಾಬಿ ರಾವ್​ ಮೇಲೆ ವೇದಿಕೆಯಲ್ಲಿ ಅಳವಡಿಸಿದ್ದ ಅಲಂಕಾರಿಕ ಲೈಟಿಂಗ್​ ಕಂಬ ಬಿದ್ದಿದೆ. ತಕ್ಷಣ ಗಂಭೀರ ಗಾಯಗೊಂಡ ಇಬ್ಬರನ್ನೂ ಇಲ್ಲಿನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವಂಶಿಕಾ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮತ್ತೊರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿರುವ ಗೌತಮ್​ ಬುದ್ಧ ನಗರದ ಕಮಿಷನರ್​ ಕಚೇರಿ​, ಪ್ರಕರಣ ಸಂಬಂಧ ಫ್ಯಾಷನ್ ಶೋ ಆಯೋಜಕರು ಮತ್ತು ಲೈಟಿಂಗ್ ಟ್ರಸ್ ಅಳವಡಿಸಿದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗಾಯಾಳು ಮತ್ತು ಮೃತರ ಸಂಬಂಧಿಕರು ದೂರು ದಾಖಲಿಸಿದರೆ ಹೆಚ್ಚಿನ ತನಿಖೆ ನಡೆಸಲಾಗುವುದು.ಅಲ್ಲದೆ ಅಪಘಾತಕ್ಕೆ ಕಾರಣ ಯಾರು, ಅವಘಡ ಹೇಗೆ ಸಂಭವಿಸಿತು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸಿನಿಮಾ ನಿರ್ಮಾಣಕ್ಕಾಗಿ ಸಾಲ ಪಡೆದ ಸಹೋದರನಿಂದಲೇ ಜೀವ ಬೆದರಿಕೆ: ಪೊಲೀಸರಿಗೆ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.