ಕೃಷ್ಣ(ಆಂಧ್ರಪ್ರದೇಶ): ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆಂಧ್ರಪ್ರದೇಶದ ಹಳ್ಳಿಗಳಲ್ಲಿ ದೇಶಿ ಕ್ರೀಡೆ ಕೋಳಿ ಕಾಳಗ ಆಯೋಜಿಸಲಾಗುತ್ತದೆ. ಇದಕ್ಕಾಗಿ ಅನೇಕರು ಕೋಟ್ಯಂತರ ರೂಪಾಯಿ ಲೆಕ್ಕದಲ್ಲಿ ಜೂಜು ಕಟ್ಟುತ್ತಾರೆ. ಇಂಥ ಜೂಜುಗಾರರಿಗೆ ಅನುಕೂಲವಾಗುವಂತೆ ಬ್ಯಾಂಕ್‌ವೊಂದು ಸ್ಪರ್ಧೆ ನಡೆಯುವ ಸ್ಥಳದಲ್ಲಿ ಮೊಬೈಲ್ ಎಟಿಎಂ ಸ್ಥಾಪಿಸಿದೆ.
ಕೋಳಿ ಕಾಳಗದಲ್ಲಿ ಭಾಗವಹಿಸುವವರು ಹಣಕ್ಕಾಗಿ ದೂರದ ಪ್ರದೇಶಗಳಲ್ಲಿರುವ ಎಟಿಎಂ ಕೇಂದ್ರಗಳಿಗೆ ಹೋಗುವುದನ್ನು ತಪ್ಪಿಸಲು ಬ್ಯಾಂಕ್ ಮೊಬೈಲ್ ಎಟಿಎಂ ಕಲ್ಪಿಸಿವೆ. ಇದರಿಂದ ಜೂಜುಕೋರರು ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿ ಅಪಹರಿಸಿ ಟ್ರಕ್‌ನಲ್ಲಿ ಸಾಮಾಹಿಕ ಅತ್ಯಾಚಾರ; ಕೊಲೆಗೈದು ಚಂಬಲ್ ನದಿಗೆಸೆದ ಕ್ರೂರಿಗಳು!
ಕೃಷ್ಣ ಜಿಲ್ಲೆಯ ಮುಸುನೂರು ಮಂಡಲದ ಪುಡಿ ಗ್ರಾಮದಲ್ಲಿ ಕೆಡಿಸಿಸಿ ಬ್ಯಾಂಕ್ ಎಟಿಎಂ ಸೇವೆ ಸೌಕರ್ಯ ಒದಗಿಸಿಕೊಟ್ಟಿದೆ. ಜೂಜುಕೋರರು ಎಟಿಎಂಗಳಿಂದ ಹಣ ಪಡೆದು ಕೋಳಿ ಕಾಳಗದಲ್ಲಿ ಬೆಟ್ಟಿಂಗ್ ಆಡ್ತಿದ್ದಾರೆ.