ಕನೌಜ್(ಉತ್ತರ ಪ್ರದೇಶ): ಕ್ರೈಂ ಬ್ರಾಂಚ್ ಪೊಲೀಸ್ ಇನ್ಸ್ಪೆಕ್ಟರ್ವೋರ್ವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅವರು ಪ್ರಯಾಣಿಸುತ್ತಿದ್ದ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಕನೌಜ್‌ನ ಸದರ್ ಕೊತ್ವಾಲಿಯ ಪನ್ವಾರ ಬಳಿ ನಡೆದಿದೆ.
ಅಧಿಕಾರಿ ಅವಧೇಶ್ ಕುಮಾರ್ ಅವರನ್ನು ಕ್ರೈಂ ಬ್ರಾಂಚ್ನ ಇನ್ಸ್ಪೆಕ್ಟರ್ ಆಗಿ ನಿಯೋಜಿಸಲಾಗಿತ್ತು. ಪ್ರಕರಣವೊಂದರಲ್ಲಿ ಸಾಕ್ಷ್ಯ ಸಂಗ್ರಹಿಸಲು ಒರೈ ಎಂಬಲ್ಲಿಂದ ಬದೌನ್ಗೆ ತೆರಳುತ್ತಿದ್ದರು. ಸದರ್ ಕೊತ್ವಾಲಿಯ ಜಲಾಲ್ಪುರ್ ಪನ್ವಾರದ ಮೇಲ್ಸೇತುವೆಯ ಬಳಿ ಕಾರು ನಿಲ್ಲಿಸಿ ಶೌಚಕ್ಕಾಗಿ ತೆರಳಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ, ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಇನ್ಸ್ಪೆಕ್ಟರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಭಾರತದೊಳಗೆ ನುಗ್ಗಲು ಯತ್ನ: ಪಾಕ್ ನುಸುಳುಕೋರನ ಹತ್ಯೆ, ಮತ್ತೋರ್ವನ ಬಂಧನ