ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಸ್ನೇಹ ಕೊನೆಗೆ ಬಾಲಕಿಯನ್ನು ಹೆದರಿಸಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನವದೆಹಲಿಯ ಪ್ರಶಾಂತ ವಿಹಾರ ಠಾಣೆಯಲ್ಲಿ ದಾಖಲಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಸ್ನೇಹಿತನು ತನ್ನೊಂದಿಗೆ ಸ್ನೇಹ ಬೆಳೆಸಿ, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತ ಬಾಲಕಿ ದೂರು ನೀಡಿದ್ದಾಳೆ.
ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ವಿವಿಧ ಸೆಕ್ಸನ್ದಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 2022ರ ಸೆಪ್ಟೆಂಬರ್ ತಿಂಗಳಲ್ಲಿ ಆರೋಪಿ ಸ್ನೇಹಿತ ಹಾಗೂ ಬಾಲಕಿಗೆ ಪರಿಚಯವಾಗಿದೆ. ನಂತರ ಮೊಬೈಲ್ ನಂಬರ್ ವಿನಿಮಯಗೊಂಡು ಬಳಿಕ ಇಬ್ಬರ ಸ್ನೇಹ ಬೆಳೆದು ಖಾಸಗಿ ಚಾಟ್ ಪ್ರಕ್ರಿಯ ಶುರುವಾಗಿದೆ. ನಂತರ ಆರೋಪಿಯು ಬಾಲಕಿ ಖಾಸಗಿ ಚಾಟ್ಗಳನ್ನು ಆಕೆಯ ಪೋಷಕರಿಗೆ ತೋರಿಸುವುದಾಗಿ ಬೆದರಿಸಿ ಮನೆಗೆ ಕರೆಯಿಸಿ ಅತ್ಯಾಚಾರ ಎಸಗಿದ್ದಾನೆ.
ನಂತರ ಆರೋಪಿ ಇನ್‌ಸ್ಟಾಗ್ರಾಮ್ ಸ್ನೇಹಿತ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆಯನ್ನು ಸೆರೆಹಿಡಿದು ಫೋಟೋ, ವಿಡಿಯೊಗಳನ್ನು ಸಹ ಸೆರೆ ಹಿಡಿದಿದ್ದಾನೆ. ಸಂತ್ರಸ್ತೆ ಬಾಲಕಿಗೆ ಫೋಟೋ, ವಿಡಿಯೋ ತೋರಿಸಿ ಪದೇ ಪದೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು. ಆಕೆಗೆ ತನ್ನ ಸ್ನೇಹಿತರೊಂದಿಗೂ ಆರೋಪಿ ದೈಹಿಕ ಸಂಬಂಧವನ್ನು ಹೊಂದುವಂತೆ ಪೀಡಿಸುತ್ತಿದ್ದನು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ಇನ್‌ಸ್ಟಾಗ್ರಾಮ್ ಸ್ನೇಹಿತನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಫೋಟೋ, ವಿಡಿಯೋ ತೋರಿಸಿ ಸ್ನೇಹಿತರೊಂದಿಗೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿರುವ ಘಟನೆಯನ್ನು ಪೋಷಕರ ಎದುರು ಬಾಲಕಿ ಹೇಳಿಕೊಂಡಿದ್ದಾಳೆ. ಕೂಡಲೇ ಪೋಷಕರು ಎಚ್ಚೆತ್ತುಕೊಂಡು ಪ್ರಶಾಂತ ವಿಹಾರ ಠಾಣೆಯಲ್ಲಿ ಬಾಲಕಿಯ ಹೆಸರಿನಲ್ಲಿ ದೂರು ದಾಖಲಿಸಿದ್ದಾರೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ, ಕಲಿಯಾಗಂಜ್ದಲ್ಲಿ ಉದ್ವಿಗ್ನ ಪರಿಸ್ಥಿತಿ: ಕಲಿಯಾಗಂಜ್: ಪಶ್ಚಿಮ ಬಂಗಾಳದ ಕಲಿಯಾಗಂಜ್ನಲ್ಲಿ ಬುಡಕಟ್ಟು ಸಮುದಾಯದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪ್ರತಿಭಟನಾನಿರತರು ಕಲ್ಲು ತೂರಾಟ ನಡೆಸಿದ್ದರು. ಆಕ್ರೋಶಗೊಂಡ ಗುಂಪು ಹಲವಾರು ಅಂಗಡಿ ಧ್ವಂಸಗೊಳಿಸಿ, ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿತ್ತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಸಿಡಿಸಿದ್ದರು.
ಪೊಲೀಸ್ ಸಿಬ್ಬಂದಿ ಸಂತ್ರಸ್ತೆಯ ಮೃತ ದೇಹವನ್ನು ಬೀದಿಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆದ ಬಳಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ದೆಹಲಿ ಮಹಿಳಾ ಆಯೋಗವು ಪಶ್ಚಿಮ್ ಬಂಗಾಳ ಪೊಲೀಸರಿಗೆ ಎರಡು ದಿನದೊಳಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಪೊಲೀಸರ ಪ್ರಕಾರ, ಉತ್ತರ ದಿನಾಜ್‌ಪುರ ಜಿಲ್ಲೆಯ ಬಾಲಕಿ ಗುರುವಾರ ಸಂಜೆ ಟ್ಯೂಷನ್‌ಗೆ ಹೋದ ನಂತರ ನಾಪತ್ತೆಯಾಗಿದ್ದಳು. ಬಳಿಕ ಬಾಲಕಿ ಶವವಾಗಿ ಪತ್ತೆಯಾಗಿದ್ದಳು. ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.