ETV Bharat / bharat

ಪೊಲೀಸರ ದೌರ್ಜನ್ಯ: ಕ್ರಮಕ್ಕೆ ಸಂತ್ರಸ್ತ ವ್ಯಕ್ತಿಯ ಪತ್ನಿ ಸರ್ಕಾರಕ್ಕೆ ಆಗ್ರಹ - ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಪೊಲೀಸರು

ಆಸ್ಪತ್ರೆಯೊಂದರ ಮುಂಭಾಗ ನಡೆದ ಗಲಾಟೆಯಲ್ಲಿ ಪೊಲೀಸರು ಮಗುವನ್ನು ಎತ್ತಿಕೊಂಡಿದ್ದ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವ್ಯಕ್ತಿಯ ಪತ್ನಿ ಮತ್ತು ಮಗಳು ಆಗ್ರಹಿಸಿದ್ದಾರೆ.

police beaten
ಯುಪಿಯಲ್ಲಿ ಪೊಲೀಸರ ದೌರ್ಜನ್ಯ
author img

By

Published : Dec 10, 2021, 10:56 PM IST

ಕಾನ್ಪುರ ದೇಹತ್(ಉತ್ತರಪ್ರದೇಶ): ಆಸ್ಪತ್ರೆಯೊಂದರ ಮುಂಭಾಗ ನಡೆದ ಗಲಾಟೆಯಲ್ಲಿ ಪೊಲೀಸರು ಮಗುವನ್ನು ಎತ್ತಿಕೊಂಡಿದ್ದ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವ್ಯಕ್ತಿಯ ಪತ್ನಿ ಮತ್ತು ಮಗಳು ಆಗ್ರಹಿಸಿದ್ದಾರೆ.

ನಿನ್ನೆ ನಡೆದ ಗಲಾಟೆಯ ವೇಳೆ ಮಗುವನ್ನು ಎತ್ತಿಕೊಂಡು ಬರುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದರು. ಈ ವೇಳೆ, ಆ ವ್ಯಕ್ತಿ ಮಗು ತನ್ನದೇ, ಮಗುವಿಗೆ ಪೆಟ್ಟು ಬೀಳುತ್ತೆ ಹೊಡೆಯಬೇಡಿ ಎಂದು ಕೇಳಿಕೊಂಡಿದ್ದಾನೆ. ಆದರೂ ಬಿಡದ ಪೊಲೀಸರು ಆ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಇದನ್ನು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ದೌರ್ಜನ್ಯದ ವಿಡಿಯೋ ವೈರಲ್​ ಆಗಿದ್ದು, ಎಲ್ಲೆಡೆ ಭಾರೀ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ.. CCTVಯಲ್ಲಿ ದೃಶ್ಯ ಸೆರೆ

ಪೊಲೀಸರು ಹಲ್ಲೆ ಮಾಡಿದ್ದನ್ನು ಕಂಡು ನನ್ನ ಮಗಳು ತುಂಬಾ ಹೆದರಿಕೊಂಡಿದ್ದಾಳೆ. ನನ್ನ ಗಂಡನ ಮೇಲೆ ವಿನಾಕಾರಣ ಹಲ್ಲೆ ಪೊಲೀಸರು ಮಾಡಿದ್ದಾರೆ. ಇದರಿಂದ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ವ್ಯಕ್ತಿಯ ಪತ್ನಿ ಯುಪಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪೊಲೀಸರ ದೌರ್ಜನ್ಯದ ವಿರುದ್ಧ ವಿಡಿಯೋ ವೈರಲ್​ ಆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸ್​ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.