ಪೂಂಚ್(ಜಮ್ಮು- ಕಾಶ್ಮೀರ): ಹಲವು ದಿನಗಳಿಂದ ತಣ್ಣಗಿದ್ದ ಭಯೋತ್ಪಾದಕರು ಮತ್ತೆ ಗಡಿಯಲ್ಲಿ ಉಪಟಳ ಶುರು ಮಾಡಿದ್ದಾರೆ. ಶುಕ್ರವಾರ ತಡರಾತ್ರಿ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟಲು ಯತ್ನಿಸುತ್ತಿದ್ದ ಭಯೋತ್ಪಾದಕರ ಮೇಲೆ ಭಾರತೀಯ ಸೇನಾ ಪಡೆ ಗುಂಡಿನ ದಾಳಿ ಮಾಡಿದೆ. ಚಕಮಕಿಯಲ್ಲಿ ಒಬ್ಬ ಯೋಧ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.
ಜಿಲ್ಲೆಯ ಗುಲ್ಪುರ್ ಸೆಕ್ಟರ್‌ನ ಎಲ್‌ಒಸಿ ಬಳಿ ಕಣಿವೆಯೊಳಗೆ ಮೂವರು ಶಸ್ತ್ರಸಜ್ಜಿತ ಉಗ್ರರು ನುಸುಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ. ಉಗ್ರರುದಟ್ಟವಾದ ಎಲೆಗಳು ಮತ್ತು ಕಪ್ಪು ಹೊದಿಕೆಯಲ್ಲಿ ಗಡಿಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಳನುಸುಳುವಿಕೆ ಗಮನಿಸಿದ ಯೋಧರು, ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರೂ ಪ್ರತಿದಾಳಿ ನಡೆಸಿದ್ದಾರೆ. ಚಕಮಕಿಯಲ್ಲಿ ಓರ್ವ ಭಾರತೀಯ ಯೋಧನಿಗೆ ಬುಲೆಟ್ ತಾಕಿ ಗಾಯಗೊಂಡಿದ್ದಾನೆ. ಭಯೋತ್ಪಾದಕರು ಸಮೀಪದ ದಟ್ಟ ಅರಣ್ಯದೊಳಗೆ ನುಸುಳಿ ತಪ್ಪಿಸಿಕೊಂಡಿದ್ದಾರೆ. ಈ ಪ್ರದೇಶದ ಸುತ್ತಲೂ ಹೆಚ್ಚಿನ ಪಡೆಗಳನ್ನು ಕರೆಸಿಕೊಳ್ಳಲಾಗಿದ್ದು, ಉಗ್ರರನ್ನು ಹೆಡೆಮುರಿಕಟ್ಟಲು ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಪ್ವಾರದ ಮಚ್ಚಲ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ನುಸುಳಲು ಯತ್ನಿಸುತ್ತಿದ್ದ ಐವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ ಕೆಲ ನಂತರ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಗಡಿಯಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಕುಪ್ವಾರದಲ್ಲಿ ಐವರು ಎನ್ಕೌಂಟರ್: ಭಾರತ- ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಪಕ್ಕದಲ್ಲಿರುವ ಕುಪ್ವಾರ ಜಿಲ್ಲೆಯ ಬಳಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಐವರು ಉಗ್ರರು ಹತರಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಹೈಬ್ರಿಡ್ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ತಿಳಿಸಿತ್ತು.
ಕುಪ್ವಾರದ ಗಡಿಯಲ್ಲಿ ಉಗ್ರರು ಒಳನುಸುಳಲು ಯತ್ನಿಸುತ್ತಿದ್ದಾಗ ಪತ್ತೆ ಹಚ್ಚಿದ ಸೇನಾಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಗುಂಡಿನ ದಾಳಿಯೂ ನಡೆಸಲಾಯಿತು. ಗುಂಡಿನ ಚಕಮಕಿಯಲ್ಲಿ ಐವರು ಭಯೋತ್ಪಾದಕರು ಹೊಡೆದುರುಳಿಸಲಾಗಿತ್ತು.
ಭದ್ರತಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಜಂಟಿ ತಂಡವು ತಡರಾತ್ರಿ ಗಡಿ ನಿಯಂತ್ರಣ ರೇಖೆಯ ಪ್ರದೇಶವಾದ ಜಾಮಗುಂಡ್‌ನಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಾಗ ಈ ಗುಂಡಿನ ದಾಳಿ ನಡೆದಿದೆ ಎಂದು ಸೇನೆ ತಿಳಿಸಿದೆ.
ಒಳನುಸುಳುವಿಕೆ ವಿಫಲ: ಜೂನ್ 15 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ಒಳನುಸುಳುವ ಯತ್ನವನ್ನು ಸೇನೆ ವಿಫಲಗೊಳಿಸಿತ್ತು. ಮೂವರು ನುಸುಳುಕೋರರು ಗಡಿ ನಿಯಂತ್ರಣ ರೇಖೆಯ ಬಳಿಯಿಂದ ಭಾರತದ ಗಡಿ ಪ್ರವೇಶಿಸುತ್ತಿದ್ದಾಗ ದಾಳಿ ನಡೆಸಲಾಗಿತ್ತು. ಸ್ಥಳದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಿಕ್ಕಿದ್ದವು. ಇದರಲ್ಲಿ ಪಾಕಿಸ್ತಾನ ತಯಾರಿಸಿದ ಸ್ಟೀಲ್ ಕೋರ್ ಕಾರ್ಟ್ರಿಡ್ಜ್‌ಗಳು ಮತ್ತು ಔಷಧಿಗಳೂ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: Encounter: ಕಣಿವೆ ನಾಡಿನಲ್ಲಿ ಐವರು ವಿದೇಶಿ ಉಗ್ರರನ್ನು ಹೊಡೆದುರುಳಿಸಿದ ಸೇನೆ!