ನವದೆಹಲಿ: ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಿಬ್ಬಂದಿಯನ್ನು ಒಳಗೊಂಡಿರುವ 'ಝೆಡ್' ಶ್ರೇಣಿಯ ಭದ್ರತೆ ಕಲ್ಪಿಸಿ ಕೇಂದ್ರ ಗೃಹ ಸಚಿವಾಲಯ ಗುರುವಾರ ಆದೇಶಿಸಿದೆ. ಕರ್ನಾಟಕದಲ್ಲಿ ಮಾತ್ರವೇ ಉನ್ನತ ಭದ್ರತೆಯ ಸೌಲಭ್ಯವನ್ನು ಬಿಎಸ್ವೈ ಹೊಂದಿರಲಿದ್ದು, ಸಿಆರ್ಪಿಎಫ್ ಸಿಬ್ಬಂದಿ ಶೀಘ್ರವೇ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರಿಗೆ ಬೆದರಿಕೆ ಇರುವ ಕುರಿತ ಮಾಹಿತಿಯನ್ನು ಗುಪ್ತಚರ ವಿಭಾಗವು ಕೇಂದ್ರ ಗೃಹ ಇಲಾಖೆಯೊಂದಿಗೆ ಹಂಚಿಕೊಂಡಿದೆ. ಇದರ ಆಧಾರದ ಮೇಲೆ ಕೇಂದ್ರದ ಭದ್ರತೆ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ. ''ಕರ್ನಾಟಕದಲ್ಲಿ ಮೂಲಭೂತವಾದಿ ಗುಂಪುಗಳಿಂದ ಯಡಿಯೂರಪ್ಪ ಅಪಾಯ ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಅವರು ಸಂಚರಿಸುವ ಎಲ್ಲೆಡೆಯೂ ಸಿಆರ್ಪಿಎಫ್ ಕಮಾಂಡೋಗಳು ಭದ್ರತೆ ಒದಗಿಸಲಿದ್ದಾರೆ'' ಎಂದು ಮೂಲಗಳು ತಿಳಿಸಿದೆ.
-
Ministry of Home Affairs (MHA) has provided Z category CRPF security cover to BJP leader and former Karnataka Chief Minister BS Yediyurappa. The security will be provided only in Karnataka. The CRPF will soon take charge of security: Sources
— ANI (@ANI) October 26, 2023 " class="align-text-top noRightClick twitterSection" data="
(File photo) pic.twitter.com/bC9y979SSp
">Ministry of Home Affairs (MHA) has provided Z category CRPF security cover to BJP leader and former Karnataka Chief Minister BS Yediyurappa. The security will be provided only in Karnataka. The CRPF will soon take charge of security: Sources
— ANI (@ANI) October 26, 2023
(File photo) pic.twitter.com/bC9y979SSpMinistry of Home Affairs (MHA) has provided Z category CRPF security cover to BJP leader and former Karnataka Chief Minister BS Yediyurappa. The security will be provided only in Karnataka. The CRPF will soon take charge of security: Sources
— ANI (@ANI) October 26, 2023
(File photo) pic.twitter.com/bC9y979SSp
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನತೆಯೆದುರು ಎತ್ತಿ ತೋರಿಸಲು ಹಾಗೂ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶೀಘ್ರವೇ ಪಕ್ಷದ ಇತರೆ ನಾಯಕರೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಇತ್ತೀಚೆಗೆ ಬಿಎಸ್ವೈ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ, ಭದ್ರತೆ ಹಚ್ಚಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ಕಳೆದ ಐದು ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಅವರು, ಮೇನಲ್ಲಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ನಿವೃತ್ತಿ ಪ್ರಕಟಿಸಿದ್ದರು. ಆದರೆ, ಬಿಜೆಪಿ ಹಾಗೂ ರಾಜ್ಯ ರಾಜಕಾಣರಣದಲ್ಲಿ ಸಕ್ರಿಯವಾಗಿ ತೊಡಿಸಿಕೊಂಡು, ಸದ್ಯ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿ ರಾಷ್ಟ್ರ ರಾಜಕಾರಣಕ್ಕೂ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಮನೆಯಲ್ಲಿ ಕೂರಲ್ಲ, ಮತ್ತೆ ರಾಜ್ಯದ ಉದ್ದಗಲ ಪ್ರವಾಸ, ಹೋರಾಟ ಆರಂಭಿಸುತ್ತೇನೆ: ಯಡಿಯೂರಪ್ಪ ಘೋಷಣೆ