ETV Bharat / bharat

ಹೆತ್ತ ಮಕ್ಕಳನ್ನೇ ಕತ್ತು ಹಿಸುಕಿ ಕೊಂದ ಮಾನಸಿಕ ಅಸ್ವಸ್ಥ ತಾಯಿ.. ಕರುಳ ಕುಡಿಗಳನ್ನು ಬಿಡದ ನಿರ್ದಯಿ - ಅಲಿ ಬಿನ್ ಫಹಾದ್ ಬಸ್ರಾವಿ

ಔರಂಗಾಬಾದ್​ನಲ್ಲಿ ತಾಯಿಯೊಬ್ಬಳು ಮಕ್ಕಳನ್ನು ಕತ್ತು ಹಿಸುಕಿ ಕೊಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

A mother who strangled her own children
ಹೆತ್ತ ಮಕ್ಕಳನ್ನೇ ಕತ್ತು ಹಸುಕಿ ಕೊಂದ ತಾಯಿ
author img

By

Published : Feb 7, 2023, 12:37 PM IST

ಔರಂಗಾಬಾದ್(ಮಹಾರಾಷ್ಟ್ರ): ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರಿಯಸಿ.. ಅಂದ್ರೆ ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲು ಮಿಗಿಲು ಎಂಬ ಮಾತಿದೆ. ಆದ್ರೆ ತಾಯಿಯೊಬ್ಬಳು ತನ್ನ ಹೆತ್ತ ಕರುಗಳನ್ನು ಕೊಂದಿರುವ ಹೃದಯ ವಿದ್ರಾವಕ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಹೌದು, ಮಾನಸಿಕ ಅಸ್ವಸ್ಥ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಔರಂಗಾಬಾದ್​ನ ಸತಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸತಾರಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆ ನಂತರ ತಾಯಿಯೇ ಕೊಲೆಗೈದಿರುವ ವಿಷಯ ಹೊರಬಿದ್ದಿದೆ. ಅಲ್ಲದೆ, ಆಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದು ತಿಳಿದುಬಂದಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ ಕಂದಮ್ಮಗಳು.. ಔರಂಗಾಬಾದ್ ನಗರದ ಸಾದತ್ ನಗರ ಪ್ರದೇಶದ ವಸತಿ ಗೃಹದಲ್ಲಿ ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮೃತ ಮಕ್ಕಳ ಪೋಷಕರ ದೂರಿನ ಪ್ರಕಾರ, ರಾತ್ರಿ ತಂದೆ-ತಾಯಿಯೊಂದಿಗೆ ಊಟ ಮುಗಿಸಿ, ಇಬ್ಬರು ಮಕ್ಕಳು ಮಲಗಿದ್ದರು. ಬೆಳಗ್ಗೆ ಆದರೂ ಮಕ್ಕಳು ಎದ್ದೇಳದೆ ಇದ್ದುದನ್ನು ಕಂಡ ಕುಟುಂಬಸ್ಥರು ಕೋಣೆಗೆ ಹೋಗಿ ನೋಡಿದಾಗ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ಕಂಡು ಕೂಡಲೇ ಇಬ್ಬರನ್ನೂ ಔರಂಗಾಬಾದ್‌ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಾಯಿಯೇ ಆರೋಪಿ.. ಅಲ್ಲಿ ವೈದರು ಪರೀಶಿಲಿಸಿದ ನಂತರ ಮಕ್ಕಳಿಬ್ಬರು ಸಾವನ್ನಪ್ಪಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಆದಿಬಾ ಫಹಾದ್ ಬಸ್ರಾವಿ (8), ಅಲಿ ಬಿನ್ ಫಹಾದ್ ಬಸ್ರಾವಿ (4) ಮೃತಪಟ್ಟ ಮಕ್ಕಳು. ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಈ ಕುರಿತು ಮಾಹಿತಿ ನೀಡಿದ್ದಾರೆ. 'ಭಾನುವಾರ ರಾತ್ರಿ ಕುಟುಂಬ ಸದಸ್ಯರೊಂದಿಗೆ ಊಟ ಮಾಡಿದ ಆದಿಬಾ ಮತ್ತು ಮಗ ಅಲಿ ತಮ್ಮ ಕೊಠಡಿಯಲ್ಲಿ ಮಲಗಿದ್ದರು. ಮರುದಿನ ಮಧ್ಯಾಹ್ನ 12 ಗಂಟೆಯಾದರೂ ಇಬ್ಬರೂ ರೂಮಿನಿಂದ ಹೊರಗೆ ಬರಲಿಲ್ಲ. ಅವರ ತಾಯಿ ಅವರನ್ನು ಎಬ್ಬಿಸಲು ಹೋದಾಗ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಇಬ್ಬರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಾವಿನ ಕುರಿತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಅಂತಿಮವಾಗಿ, ಪೊಲೀಸರು ತನಿಖಾ ಸೂತ್ರವನ್ನು ತ್ವರಿತವಾಗಿ ನಡೆಸಿದಾಗ, ತಾಯಿಯೇ ರಾತ್ರಿ ತನ್ನ ಮಕ್ಕಳಿಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಸ್ಪಷ್ಟವಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಆಕೆ ಮಾನಸಿಕ ಅಸ್ವಸ್ಥಳೆಂದು ತಿಳಿದು ಬಂದಿದೆ. ಆದರೆ ಆಕೆ ಯಾವ ಕಾರಣಕ್ಕೆ ಮಕ್ಕಳಿಬ್ಬರನ್ನು ಕೊಂದಿದ್ದು ಎಂಬುದು ಹೊರಬೀಳಬೇಕಿದೆ. ಕೌಟುಂಬಿಕ ಕಲಹ ಅಥವಾ ಕೋಪದಲ್ಲಿ ಆಕೆ ಈ ನಿರ್ಧಾರವನ್ನು ತೆಗೆದುಕೊಂಡಳಾ? ಈ ನಿಟ್ಟಿನಲ್ಲಿ ಸತಾರಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 6 ವರ್ಷದ ಬಾಲಕನ ಕಿಡ್ನ್ಯಾಪ್, ಹತ್ಯೆ: 4 ಕೋಟಿಗೆ ಬೇಡಿಕೆ ಇಟ್ಟಿದ್ದ ದುರುಳರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.