ETV Bharat / bharat

ನಾಲ್ಕು ಮಕ್ಕಳ ಎದುರೇ ಹೆಂಡ್ತಿ ಮೇಲೆ ಅತ್ಯಾಚಾರ: ಖಾಸಗಿ ಅಂಗಕ್ಕೆ ಪ್ಲಾಸ್ಟಿಕ್​ ಪೈಪ್​ ಇಟ್ಟು ವಿಕೃತಿ! - ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ

ವ್ಯಕ್ತಿಯೊಬ್ಬ ತನ್ನ ನಾಲ್ಕು ಜನ ಮಕ್ಕಳ ಮುಂದೆಯೇ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಖಾಸಗಿ ಅಂಗದಿಂದ ವೈದ್ಯರು ಪ್ಲಾಸ್ಟಿಕ್ ಪೈಪ್ ತರಹದ ವಸ್ತುವನ್ನು ಹೊರತೆಗೆದಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ಕಂಡು ಬಂದಿದೆ.

Man rapes his wife  plastic material into private part  Man rapes his wife in Mumbai  ಮಕ್ಕಳೆದುರೇ ಹೆಂಡ್ತಿ ಮೇಲೆ ಅತ್ಯಾಚಾರ  ಖಾಸಗಿ ಅಂಗಕ್ಕೆ ಪ್ಲಾಸ್ಟಿಕ್​ ಪೈಪ್​ ಇಟ್ಟು ವಿಕೃತಿ  ತನ್ನ ಪತ್ನಿಯ ಮೇಲೆ ಅತ್ಯಾಚಾರ  ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ  ಪ್ಲಾಸ್ಟಿಕ್ ಪೈಪ್ ತರಹದ ವಸ್ತು  ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ  ಖಾಸಗಿ ಭಾಗದಲ್ಲಿ ಪ್ಲಾಸ್ಟಿಕ್ ವಸ್ತುವನ್ನಿಟ್ಟು ವಿಕೃತಿ
ನಾಲ್ಕು ಮಕ್ಕಳೆದುರೇ ಹೆಂಡ್ತಿ ಮೇಲೆ ಅತ್ಯಾಚಾರ
author img

By

Published : Dec 6, 2022, 1:37 PM IST

Updated : Dec 6, 2022, 4:58 PM IST

ಮುಂಬೈ, ಮಹಾರಾಷ್ಟ್ರ: ಕುರ್ಲಾದಲ್ಲಿ ಮೂವರು ಹಂತಕರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಾಸುವ ಮುನ್ನವೇ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಸಂಚಲನ ಮೂಡಿಸಿದೆ. ಈ ಘಟನೆ ಮುಲುಂಡ್‌ನಲ್ಲಿ ನಡೆದಿದೆ. ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಖಾಸಗಿ ಭಾಗದಲ್ಲಿ ಪ್ಲಾಸ್ಟಿಕ್ ವಸ್ತುವನ್ನುವಿಟ್ಟು ವಿಕೃತಿ ಮೆರೆದಿದ್ದಾನೆ.

ಆಕೆಯ ಪತಿ ಕುಡಿದು ಮನೆಗೆ ಬಂದು ಮಹಿಳೆಯನ್ನು ಥಳಿಸಲು ಆರಂಭಿಸಿದ್ದನು. ಥಳಿಸಿದ ನಂತರ ಪತ್ನಿಯ ಬಟ್ಟೆಗಳನ್ನು ಹರಿದು ಹಾಕಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಖಾಸಗಿ ಭಾಗದಲ್ಲಿ ಪ್ಲಾಸ್ಟಿಕ್ ವಸ್ತುವನ್ನಿಟ್ಟು ವಿಕೃತಿ ಮೆರೆದಿದ್ದಾನೆ. ಇದರಿಂದ ಮಹಿಳೆಗೆ ತುಂಬಾ ನೋವಾಗಿದ್ದು, ಆಸ್ಪತ್ರೆಗೆ ತೆರಳಿದ್ದಾಳೆ. ಆಸ್ಪತ್ರೆಯ ವೈದ್ಯರು ಆಕೆಯ ಖಾಸಗಿ ಭಾಗಗಳಿಂದ ಪ್ಲಾಸ್ಟಿಕ್ ಪೈಪ್ ತರಹದ ವಸ್ತುವನ್ನು ತೆಗೆದುಹಾಕಿದ್ದಾರೆ ಎಂದು ಮುಲುಂಡ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕಾಂತಿಲಾಲ್ ಕೊತ್ಮೆರೆ ಹೇಳಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿ ಆರೋಪಿ: ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 326, 354ಬಿ, 354, 506(2), 376, 377 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ದೂರುದಾರರ ಹೇಳಿಕೆ ಹಾಗೂ ವೈದ್ಯಕೀಯ ವರದಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ. ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

ಓದಿ: ಇಂಡಿಕೇಟರ್ ಹಾಕಿ ಕ್ರಾಸ್ ಮಾಡು ಎಂದ ಯುವಕರು.. ಕಾರು ಹತ್ತಿಸಿ ಅಪ್ಪ ಮಗನಿಂದ ಕೊಲೆಗೆ ಯತ್ನ

Last Updated : Dec 6, 2022, 4:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.