ಮುಂಬೈ, ಮಹಾರಾಷ್ಟ್ರ: ಮನುಕುಲ ಎದುರಿಸುತ್ತಿರುವ ಈ ಮುಂದಿನ ಸವಾಲುಗಳು ಮತ್ತು ವಿಜ್ಞಾನ ತಂತ್ರಜ್ಞಾನ ಎಂಜಿನಿಯರಿಂಗ್ ವಲಯ ಎದುರಿಸುತ್ತಿರುವ ತೊಂದರೆಗಳ ದೃಷ್ಟಿಯಿಂದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ನಡೆಸುವುದು ಅಗತ್ಯವಾಗಿದೆ. ಅದಕ್ಕಾಗಿ ಐಐಟಿಯ ಹೆಸರಾಂತ ವಿದ್ಯಾರ್ಥಿ ನಂದನ್ ನಿಲೇಕಣಿ ಅವರು ಇಂದು 315 ರೂಪಾಯಿ ದೇಣಿಗೆ ನೀಡಿದ್ದು, ಒಟ್ಟು 400 ಕೋಟಿ ದೇಣಿಗೆ ನೀಡಿದಂತಾಗಿದೆ. ಈ ಹಿಂದೆ 85 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು.
-
To mark 50 years of my association with @iitbombay, I am donating ₹315 crores to my alma mater. I am grateful to be able to do this🙏
— Nandan Nilekani (@NandanNilekani) June 20, 2023 " class="align-text-top noRightClick twitterSection" data="
Full release: https://t.co/q6rvuMf2jn pic.twitter.com/f8OEfZ1UTq
">To mark 50 years of my association with @iitbombay, I am donating ₹315 crores to my alma mater. I am grateful to be able to do this🙏
— Nandan Nilekani (@NandanNilekani) June 20, 2023
Full release: https://t.co/q6rvuMf2jn pic.twitter.com/f8OEfZ1UTqTo mark 50 years of my association with @iitbombay, I am donating ₹315 crores to my alma mater. I am grateful to be able to do this🙏
— Nandan Nilekani (@NandanNilekani) June 20, 2023
Full release: https://t.co/q6rvuMf2jn pic.twitter.com/f8OEfZ1UTq
ನಂದನ್ ನಿಲೇಕಣಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಐಐಟಿಯ ಪ್ರತಿಷ್ಠಿತ ವಿದ್ಯಾರ್ಥಿ. ಆಧಾರ್‌ಗೆ ಸಂಬಂಧಿಸಿದ ಮೂಲ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಲ್ಲಿ ನಂದನ್ ನಿಲೇಕಣಿ ಅವರು ದೊಡ್ಡ ಪಾತ್ರ ವಹಿಸಿದ್ದರು.
ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಯುಐಡಿಎಐ ಅಂದರೆ ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಯೋಜನೆಗಳ ಜವಾಬ್ದಾರಿಯನ್ನು ನಿಲೇಕಣಿ ಅವರು ಹಸ್ತಾಂತರಿಸಿದ್ದರು. ಭಾರತ ಸರ್ಕಾರದ ಇಂತಹ ಹಲವು ವಿಭಿನ್ನ ಯೋಜನೆಗಳಲ್ಲಿ ನಿಲೇಕಣಿ ಅವರ ಪಾತ್ರ ಅಪಾರವಾಗಿದೆ. ಅಲ್ಲದೇ ಅವರು ತಮ್ಮ ಕಂಪನಿಯ ಪರವಾಗಿ ಸಿಎಸ್ಆರ್ ಯೋಜನೆ ಅಥವಾ ಇತರ ಯೋಜನೆಯ ಮೂಲಕ ಗಣನೀಯ ದೇಣಿಗೆ ನೀಡಿದ್ದಾರೆ.
ನಂದನ್ ನಿಲೇಕಣಿ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್‌ನ ಸಹ ಸಂಸ್ಥಾಪಕರೂ ಹೌದು. ಸಾಫ್ಟ್‌ವೇರ್ ಕಂಪ್ಯೂಟರ್ ಟೆಕ್ನಾಲಜಿ ಕ್ಷೇತ್ರದಲ್ಲಿ ಅವರು ಇಲ್ಲಿಯವರೆಗೆ ಉತ್ತಮ ಕೆಲಸ ಮಾಡಿದ್ದಾರೆ. ಅವರು ಐಐಟಿಯ ಪ್ರತಿಭಾವಂತ ವಿದ್ಯಾರ್ಥಿ. ದೇಣಿಗೆ ನೀಡುವ ಮೂಲಕ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ’’ನಾನು ಐಐಟಿ ಮುಂಬೈನಲ್ಲಿ ಕಲಿತ್ತಿರುವುದನ್ನೇ ಸಣ್ಣ ರೂಪದಲ್ಲಿ ಮರುಪಾವತಿಸುತ್ತಿದ್ದೇನೆ. ನಾನು ಪಡೆದ ಅನುಭವಕ್ಕಿಂತ ನಾನು ಪಡೆದ ಶಿಕ್ಷಣವು ದೊಡ್ಡದಾಗಿದೆ. ಇದು ನನ್ನ ಜೀವನಕ್ಕೆ ಅಡಿಪಾಯ ಹಾಕಿದ ಸಂಸ್ಥೆ. IIT ಮುಂಬೈ ಇಂದಿಗೆ 50 ವರ್ಷ ಪೂರ್ಣಗೊಳ್ಳುತ್ತಿರುವುದಕ್ಕೆ ಸಂತಸವಾಗಿದೆ‘‘ ಎಂದರು.
ಐಐಟಿ ಮುಂಬೈ ನಿರ್ದೇಶಕ ಸುಭಾಶಿಸ್ ಚೌಧರಿ ಅವರು ಮಾತನಾಡಿ, ’’ನಂದನ್ ನಿಲೇಕಣಿ ಐಐಟಿ ಮುಂಬೈನ ಹಳೆಯ ವಿದ್ಯಾರ್ಥಿ. ಭಾರತದಲ್ಲಿ ಸಾಫ್ಟ್‌ವೇರ್ ತಂತ್ರಜ್ಞಾನಕ್ಕೆ ಅವರ ಕೊಡುಗೆ ಪ್ರಸಿದ್ಧವಾಗಿದೆ. ಅವರ ಇಂದಿನ ಕೊಡುಗೆಯು ಐಐಟಿಯ ಭವಿಷ್ಯದ ವಿದ್ಯಾರ್ಥಿಗಳಿಗೆ ಮುಂಬರುವ ಸವಾಲುಗಳನ್ನು ಎದುರಿಸಲು ಮತ್ತು ಮಾನವೀಯತೆಗೆ ಸಹಾಯ ಮಾಡುತ್ತದೆ‘‘ ಎಂದರು.
ಓದಿ: ಹೊಸ IT ಇ-ಫೈಲಿಂಗ್ ಪೋರ್ಟಲ್ನಲ್ಲಿ ದೋಷ: ನಿರ್ಮಲಾ ಹೇಳಿಕೆಗೆ ನಿಲೇಕಣಿ ವಿವರಣೆ
ನಿಲೇಕಣಿಗೆ ಬಾಂಬೆ ಐಐಟಿಯ ಗೌರವ ಡಾಕ್ಟರೇಟ್: 2019ರಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಮಾಜಿ ಮುಖ್ಯಸ್ಥ ಕನ್ನಡಿಗ ನಂದನ್ ನಿಲೇಕಣಿ ಅವರಿಗೆ ಬಾಂಬೆ ಐಐಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು ಗಮನಾರ್ಹ.
ಆ ಸಮಯದಲ್ಲಿ ಮಾತನಾಡಿದ ಅವರು, ಶಿಕ್ಷಣ ವಿದ್ಯಾರ್ಥಿಗಳು, ಅವರ ಕುಟುಂಬಸ್ಥರು ಹಾಗೂ ಸಮಾಜದಲ್ಲಿನ ಜನಜೀವನ ಪರಿವರ್ತಿಸಬಲ್ಲ ಒಂದು 'ಆಯುಧ'ವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತ ಶೈಕ್ಷಣಿಕ ರಂಗದ ವಿಶ್ವ ನಾಯಕನಾಗಿಸುವಲ್ಲಿ ಐಐಟಿಗಳ ಪಾತ್ರ ಪ್ರಮುಖವಾಗಿದೆ ಎಂದು ನಂದನ್ ನಿಲೇಕಣಿ ಅಭಿಪ್ರಾಯಪಟ್ಟಿದ್ದರು.