ಹೈದರಾಬಾದ್: ಅಪರೂಪದಲ್ಲಿ ಅಪರೂಪ ಎಂಬಂತೆ ತೆಲಂಗಾಣದ ಹೈದರಾಬಾದ್ನಲ್ಲಿ ಮತ್ಸ್ಯರೂಪದ ಮಗುವೊಂದು ಜನಿಸಿದೆ. ಆದರೆ ಹುಟ್ಟಿದ ಎರಡೇ ಗಂಟೆಯಲ್ಲಿ ಕೊನೆಯುಸಿರೆಳೆದಿದೆ.
ಹೈದರಾಬಾದ್ನ ಪೆಟ್ಲಾಬುರ್ಜ್ನಲ್ಲಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೀನಿನಾಕಾರದ ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಎರಡು ತಾಸುಗಳಲ್ಲೇ ಮೃತಪಟ್ಟಿದೆ. ಇನ್ನು ತಾಯಿ ಕ್ಷೇಮವಾಗಿದ್ದಾರೆ.
ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ.. ಮಕ್ಕಳ ಮೃತದೇಹ ಒಯ್ಯಲು ಹಣವಿಲ್ಲದೆ ಪೋಷಕರು ವಿಲ ವಿಲ!
ಇಂತಹ ಶಿಶು ಜನಿಸುವುದು ಬಹಳ ಅಪರೂಪ ಹಾಗೂ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತವೆ. ಈ ವಿಚಿತ್ರ ಕಾಯಿಲೆಯನ್ನು 'ಮರ್ಮೇಡ್ ಸಿಂಡ್ರೋಮ್' ಅಥವಾ 'ಸೈರೆನೋಮೆಲಿಯಾ' ಎಂದು ಕರೆಯುತ್ತಾರೆ. ಈ ಮಕ್ಕಳಲ್ಲಿ ಜಠರ, ಕರುಳು, ಬೆನ್ನುಮೂಳೆ, ಮೂತ್ರಪಿಂಡ ಸೇರಿದಂತೆ ದೇಹದ ಕೆಲ ಅಂಗಾಂಗಗಳು ಒಂದಕ್ಕೊಂದು ಅಂಟಿಕೊಂಡು, ಕಾಲುಗಳು ಕೂಡಿಕೊಂಡಿರುತ್ತವೆ ಎಂದು ವೈದ್ಯರು ಹೇಳುತ್ತಾರೆ.