ETV Bharat / bharat

ಕಾಶ್ಮೀರ ಸಮಸ್ಯೆ ಇತ್ಯರ್ಥಪಡಿಸದೆ ಸೇನೆ ನಿಯೋಜನೆ ಫಲ ನೀಡದು: ಮೆಹಬೂಬಾ ಮುಫ್ತಿ

author img

By

Published : Nov 27, 2022, 6:39 PM IST

ಕಾಶ್ಮೀರದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸದ ಹೊರತು ಎಷ್ಟೇ ಸೈನಿಕರನ್ನು ನಿಯೋಜಿಸಿದರೂ ಏನು ಪ್ರಯೋಜನವಿಲ್ಲ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದಾರೆ.

mehbooba-mufti
ಮೆಹಬೂಬಾ ಮುಫ್ತಿ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು- ಕಾಶ್ಮೀರದಲ್ಲಿ ನೀವು(ಬಿಜೆಪಿ) ಎಷ್ಟೇ ಸೈನಿಕರನ್ನು ನಿಯೋಜಿಸಿದರೂ ಅಷ್ಟೇ, ನೆರೆ ರಾಷ್ಟ್ರದ ಜೊತೆಗಿನ ಕಾಶ್ಮೀರ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವವರೆಗೂ ಯಾವುದೇ ಪ್ರಯೋಜನವಾಗದು ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಶ್ರೀನಗರದಲ್ಲಿ ನಡೆದ ಪೀಪಲ್ಸ್​ ಡೆಮಾಕ್ರೆಟಿಕ್​ ಪಕ್ಷದ ಸಮಾವೇಶದಲ್ಲಿ ಮಾತನಾಡಿ, ಇಲ್ಲಿನ ಜನರಿಗೆ ದಾಳಿಕೋರರನ್ನು ಓಡಿಸುವ ಯುಕ್ತಿ, ಶಕ್ತಿ ಇದೆ. ನೀವು ಸೈನಿಕರನ್ನು ನಿಯೋಜಿಸುವ ಬದಲು, ಇಲ್ಲಿನ ಸಮಸ್ಯೆಯನ್ನು ಇತ್ಯರ್ಥ ಮಾಡಿ. ನೀವೇ ದಾಳಿಕೋರರಾಗಬೇಡಿ ಎಂದು ಕಿಡಿಕಾರಿದರು.

ಪಾಕಿಸ್ತಾನದಿಂದ ಉಗ್ರರು ನಮ್ಮ ಮೇಲೆ ದಾಳಿ ಮಾಡಿದಾಗ ಇಲ್ಲಿ ಮೊದಲು ಸೈನ್ಯ ಇರಲಿಲ್ಲ. ಜನರಲ್ಲಿ ಕೈಯಲ್ಲಿ ಬಂದೂಕು ಇರಲಿಲ್ಲ. ಆಗಲೂ ಜನರು ದಾಳಿಕೋರರನ್ನು ಹಿಮ್ಮೆಟ್ಟಿಸಿದ್ದಾರೆ. ಹೀಗಾಗಿ ಬಿಜೆಪಿಯವರು ದಾಳಿಕೋರರಾಗಬೇಡಿ. ಯಾಕೆಂದರೆ ನಮಗೆ ಇಂತಹ ದಾಳಿಕೋರರ ಸದೆಬಡಿಯುವುದು ಗೊತ್ತಿದೆ ಎಂದು ರೋಷಾವೇಷವಾಗಿ ಮಾತನಾಡಿದರು.

ಕಾಶ್ಮೀರವು ಸಂವಿಧಾನದ ಮೂಲಕ ಭಾರತದೊಂದಿಗೆ ನಂಟು ಹೊಂದಿದೆ. ಬಿಜೆಪಿ ಆ ಸಂವಿಧಾನವನ್ನು ನಾಶ ಮಾಡುತ್ತಿದೆ. ಒಂದು ಪಕ್ಷಕ್ಕೆ ಇಡೀ ದೇಶ ಸೇರಿಲ್ಲ. ದೇಶವನ್ನು ಪಕ್ಷದ ದೇಶವನ್ನಾಗಿ ಮಾಡಲು ಬಿಡುವುದಿಲ್ಲ. ನೀವು ಇಲ್ಲಿಗೆ ಎಷ್ಟೇ ಸೈನಿಕರನ್ನು ಬೇಕಾದರೂ ಕಳುಹಿಸಿ ಎಂದು ಸವಾಲು ಹಾಕಿದರು.

ಓದಿ: 24 ಗಂಟೆಯೊಳಗೆ ಸರ್ಕಾರಿ ವಸತಿ ಗೃಹ ಖಾಲಿ ಮಾಡಿ.. ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸೇರಿ ನಾಲ್ವರಿಗೆ ನೋಟಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.