ETV Bharat / bharat

ಬೆಂಗಳೂರಿನಲ್ಲಿ ನಡೆಯುತ್ತಿರುವುದು 'ಕಡು ಭ್ರಷ್ಟರ ಸಭೆ': ಪ್ರಧಾನಿ ಮೋದಿ ವಾಗ್ದಾಳಿ

author img

By

Published : Jul 18, 2023, 1:41 PM IST

ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ಅಲ್ಲಿ ನಡೆಯುತ್ತಿರುವುದು ಕಡು ಭ್ರಷ್ಟಾಚಾರಿಗಳ ಸಭೆ ಎಂದಿದ್ದಾರೆ.

Kattar Bhrashtachari Sammelan PM Modi
Kattar Bhrashtachari Sammelan PM Modi

ನವದೆಹಲಿ : ಬೆಂಗಳೂರಿನಲ್ಲಿ ಸಭೆ ನಡೆಸುತ್ತಿರುವ ವಿರೋಧ ಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಭ್ರಷ್ಟರ ಸಭೆ ಎಂಬುದು ಜನರಿಗೆ ಗೊತ್ತಾಗುತ್ತಿದೆ ಮತ್ತು ತಮ್ಮ ಭ್ರಷ್ಟಾಚಾರ ಬಯಲಿಗೆ ಬಂದಾಗ ಈ ಪಕ್ಷಗಳು ಪರಸ್ಪರ ರಕ್ಷಣೆಗೆ ಮುಂದಾಗುತ್ತವೆ ಎಂದಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್‌ನಲ್ಲಿರುವ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ ನಂತರ ಪ್ರಧಾನಮಂತ್ರಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

'ಜಮಾತ್' ಮತ್ತು 'ಕುಂಬಾ' ನಂಥ ಪದಗಳನ್ನು ಬಳಸಿ ವಿರೋಧ ಪಕ್ಷಗಳನ್ನು ಗೇಲಿ ಮಾಡಿದ ಪ್ರಧಾನಿ, ಜನ ಅಂಥವರಿಂದ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ‘‘ಇದು ಕಡು ಭ್ರಷ್ಟರ ಸಮ್ಮೇಳನವೆಂದು ಜನರೇ ಹೇಳುತ್ತಿದ್ದಾರೆ... ಈ ಸಭೆಯ ಇನ್ನೊಂದು ವಿಶೇಷತೆ ಎಂದರೆ, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಜಾಮೀನಿನ ಮೇಲೆ ಯಾರಾದರೂ ಹೊರಗಿದ್ದರೆ ಅವರನ್ನು ಇವರೆಲ್ಲ ಬಹಳ ಗೌರವದಿಂದ ಕಾಣುತ್ತಾರೆ. ಇಡೀ ಕುಟುಂಬದವೇ ಜಾಮೀನಿನ ಮೇಲೆ ಹೊರಗಿದ್ದರೆ ಅಂಥವರಿಗೆ ಗೌರವ ಇನ್ನೂ ಜಾಸ್ತಿ... ಯಾರಾದರೂ ಒಂದು ಸಮುದಾಯವನ್ನು ಅವಮಾನಿಸಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದರೆ ಅಂಥವರನ್ನೇ ಇವರು ಗೌರವಿಸುತ್ತಾರೆ” ಎಂದು ಪ್ರಧಾನಿ ಟೀಕಾ ಪ್ರಹಾರ ನಡೆಸಿದರು.

ಬಾಲಿವುಡ್ ಹಾಡನ್ನು ಉಲ್ಲೇಖಿಸಿದ ಮೋದಿ, ಜನ ಹಲವಾರು ಮುಖವಾಡ ಧರಿಸುತ್ತಾರೆ ಎಂದರು. "ಈ ಜನ ಎಷ್ಟು ಮುಖವಾಡಗಳನ್ನು ಹಾಕಿದ್ದಾರೆ ಎಂಬುದನ್ನು ನೀವು ನೋಡಬಹುದು. ಈ ಜನರೆಲ್ಲ ಒಟ್ಟಾದಾಗ ಜನರ ಮನಸ್ಸಿನಲ್ಲಿ ಬರುವುದು ಇವರು ಮಾಡಿದ ಸಾವಿರಾರು ಕೋಟಿಗಳ ಭ್ರಷ್ಟಾಚಾರದ ಆಲೋಚನೆ. ಕಡು ಭ್ರಷ್ಟರ ಸಭೆ ಇಲ್ಲಿ ನಡೆಯುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ’’ ಎಂದು ಅವರು ಜರಿದರು.

"ಪ್ರಜಾಪ್ರಭುತ್ವ ಎಂಬುದು ಜನರಿಂದ ಮತ್ತು ಜನರಿಗಾಗಿ ಇರುವ ವ್ಯವಸ್ಥೆ. ಆದರೆ ವಂಶಾಡಳಿತ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳಿಗೆ ಇದು ಕುಟುಂಬ ಮತ್ತು ಕುಟುಂಬಕ್ಕಾಗಿ, ಕುಟುಂಬ ಮೊದಲು, ದೇಶ ನಗಣ್ಯ. ಇದು ಅವರ ಧ್ಯೇಯವಾಕ್ಯವಾಗಿದೆ... ದ್ವೇಷ, ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ. ದೇಶವು ವಂಶಾಡಳಿತ ರಾಜಕಾರಣದ ಬೆಂಕಿಗೆ ಬಲಿಯಾಗಿದೆ. ಅವರಿಗೆ ಅವರ ಕುಟುಂಬದ ಬೆಳವಣಿಗೆ ಮಾತ್ರ ಮುಖ್ಯ, ದೇಶದ ಬಡವರ ಬೆಳವಣಿಗೆ ಅಲ್ಲ" ಎಂದು ಅವರು ಹೇಳಿದರು.

"ಇಂದು ದೇಶದ ಜನರು 2024 ರಲ್ಲಿ ನಮ್ಮನ್ನು ಮರಳಿ ಅಧಿಕಾರಕ್ಕೆ ಕರೆತರಲು ಈಗಾಗಲೇ ನಿರ್ಧರಿಸಿದ್ದಾರೆ. ಆದ್ದರಿಂದ, ಭಾರತದ ದುಸ್ಥಿತಿಗೆ ಕಾರಣವಾದ ಜನರು ತಮ್ಮ ಅಂಗಡಿಗಳನ್ನು ತೆರೆದಿದ್ದಾರೆ... ಚೌಬೀಸ್ ಕೆ ಲಿಯೆ ಛಬ್ಬೀಸ್ ಹೋನೆವಾಲೆ ರಾಜನೀತಿಕ್ ದಲೋಂ ಪರ್ ಯೆ ಬಡಾ ಫಿಟ್ ಬೈಠ್ತಾ ಹೈ. ಅವರು ಯಾವುದೋ ಹಾಡು ಹಾಡುತ್ತಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ. ಯಾವುದೋ ಲೇಬಲ್ ಹಾಕಲಾಗಿದೆ, ಆದರೆ ಉತ್ಪನ್ನ ಮಾತ್ರ ಬೇರೆಯವರದಾಗಿದೆ. ಅವರ ಅಂಗಡಿಗಳಲ್ಲಿ ಜಾತೀಯತೆಯ ವಿಷ ಮತ್ತು ಅಪಾರ ಭ್ರಷ್ಟಾಚಾರದ ಗ್ಯಾರಂಟಿ ಇದೆ. ಈಗ ಅವರೆಲ್ಲರೂ ಬೆಂಗಳೂರಿನಲ್ಲಿದ್ದಾರೆ” ಎಂದು ಅವರು ಹೇಳಿದರು.

2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 24ರ ಚುನಾವಣೆಗೆ 26 ಪಕ್ಷಗಳು ಒಂದಾಗುತ್ತಿವೆ ಎಂಬುದು ಚೌಬೀಸ್ ಕೆ ಲಿಯೆ ಛಬ್ಬೀಸ್ ಹೋನೆವಾಲೆ ಮಾತಿನ ಅರ್ಥವಾಗಿದೆ.

“ಎಲ್ಲೋ ಪ್ರವಾಹಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆಯುತ್ತಿದೆ, ಇನ್ನೆಲ್ಲೋ ಅಪಹರಣಗಳಾಗುತ್ತಿದ್ದರೂ ಕುನ್​ಬಾ (ಕುಟುಂಬ) ಮೌನವಾಗಿದೆ. ಕೆಲ ದಿನಗಳ ಹಿಂದೆ ಬಂಗಾಳದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ ನಡೆದಿತ್ತು, ಹತ್ಯೆಗಳು ನಡೆದಿವೆ. ಆದರೆ ಅವರು ಈ ಬಗ್ಗೆ ಮೌನವಾಗಿದ್ದಾರೆ” ಎಂದು ಅವರು ಹೇಳಿದರು.

ಆಮ್ ಆದ್ಮಿ ಪಕ್ಷದ ಸರ್ಕಾರದ ಆಡಳಿತದಲ್ಲಿ ದೆಹಲಿಯಲ್ಲಿ ನಡೆದ ‘ಮದ್ಯ ಹಗರಣ’ವನ್ನೂ ಅವರು ಉಲ್ಲೇಖಿಸಿದರು. ತನಿಖಾ ಸಂಸ್ಥೆಗಳು ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಹೊರತಂದಾಗ ವಿರೋಧ ಪಕ್ಷಗಳು ಏನೂ ಸಿಕ್ಕಿಲ್ಲ ಎನ್ನುತ್ತವೆ ಮತ್ತು ಅವರಿಗೆ ಈ ಕುನ್​ಬಾಗಳು ಕ್ಲೀನ್ ಚಿಟ್ ನೀಡುತ್ತವೆ. ಅಂತಹ ಜನರನ್ನು ಗುರುತಿಸಿ ಮತ್ತು ಜಾಗರೂಕರಾಗಿರಿ ಎಂದು ಪ್ರಧಾನಿ ಜನರಿಗೆ ಕರೆ ನೀಡಿದರು.

ಇದನ್ನೂ ಓದಿ : ಸ್ಟಾರ್ಟಪ್ ಫಂಡಿಂಗ್ ಶೇ 70ರಷ್ಟು ಕುಸಿತ; 2023ರಲ್ಲಿ ಕೇವಲ $15 ಶತಕೋಟಿ ಹೂಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.