ETV Bharat / bharat

ಮಾಧ್ಯಮಗಳು ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸಬೇಕು: ಮನಮೋಹನ್​ ಸಿಂಗ್​​​

ಭಾರತದ ಹೊಸ ಪೀಳಿಗೆಯ ಜನರ ಆಕಾಂಕ್ಷೆಗಳು ಸರ್ಕಾರವನ್ನು ಉತ್ತಮವಾಗಿ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿದೆ.

ಮಾಧ್ಯಮಗಳು ಸರ್ಕಾರದ ಲೋಪದೋಷಗಳನ್ನು ಎತ್ತಿತೋರಿಸಬೇಕು; ಮನಮೋಹನ್​ ಸಿಂಗ್​​​
media-needs-vigilant-and-flag-shortcoming-of-government-says-manmoha-singh
author img

By

Published : Nov 9, 2022, 12:13 PM IST

ನವದೆಹಲಿ: ಸರ್ಕಾರಗಳ ಆಡಳಿತ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆಯಾ ಎಂಬುದರ ಬಗ್ಗೆ ಮಾಧ್ಯಮಗಳು ಸೂಕ್ಷ್ಮವಾಗಿ ಗಮನಿಸಿ, ಲೋಪದೋಷಗಳನ್ನು ವರದಿ ಮಾಡಬೇಕು ಎಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​ ಸಲಹೆ ನೀಡಿದ್ದಾರೆ.

ಟಿಐಒಎಲ್​ ಹೆರಿಟೇಜ್​ ಅವಾರ್ಡ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಸಂಪ್ರದಾಯ ಮತ್ತು ಆಧುನಿಕತೆಯನ್ನು ಹೊಂದಿದ್ದು, ಇದನ್ನು ಜಗತ್ತಿಗೆ ನಿರಂತರವಾಗಿ ತೋರಿಸಿದೆ ಎಂದರು. ದೇಶದ ಹೊಸ ಪೀಳಿಗೆಯ ಜನರ ಆಕಾಂಕ್ಷೆಗಳು ಸರ್ಕಾರವನ್ನು ಉತ್ತಮವಾಗಿ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿವೆ ಎಂದು ಹೇಳಿದರು. ಇದೇ ವೇಳೆ ತಾವು ಪ್ರಧಾನಿ ಮತ್ತು ಹಣಕಾಸು ಸಚಿವರಾಗಿದ್ದಾಗ ಎದುರಾದ ಕಷ್ಟದ ಸಂದರ್ಭ ಹೇಗೆ ದೇಶವನ್ನು ಕಾಡಿತು ಎಂದೂ ವಿವರಿಸಿದರು.

1991 ಬಾಹ್ಯ ಪಾವತಿ ಬಿಕ್ಕಟ್ಟಿನ ಮಧ್ಯಕಾಲದಲ್ಲಿ ನಾನು ಜಾಗತಿಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದೆ. 1990-91ರಲ್ಲಿ ಬಾಹ್ಯ ಪಾವತಿ ಬಿಕ್ಕಟ್ಟು ದೊಡ್ಡ ಸವಾಲು ತಂದೊಡ್ಡಿತು. ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವುದು, ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಮಾತ್ರವಲ್ಲದೆ ರೂಪಾಯಿಯನ್ನು ಸ್ಥಿರ ಪಡಿಸುವುದು, ವಿದೇಶಿ ವಿನಿಮಯದ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ನಾವು ಚಿಂತಿಸಬೇಕಾಗಿತ್ತು ಎಂದು ತಿಳಿಸಿದರು.

ದೇಶದ ಕಟ್ಟುವ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಪಾತ್ರ ಬಲು ದೊಡ್ಡದು. ಮಾಧ್ಯಮಗಳು ನಮ್ಮನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ನಾವು ಬಯಸುತ್ತೇವೆ. ಆಡಳಿತವನ್ನು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಮಾಡಲು ಇದು ಸಹಾಯಕಾರಿ ಎಂದು ಡಾ.ಸಿಂಗ್‌ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಆರ್ಥಿಕ ಸುಧಾರಣೆಗಳಿಗಾಗಿ ಭಾರತ ಮನಮೋಹನ್ ಸಿಂಗ್ ಅವರಿಗೆ ಋಣಿ: ನಿತಿನ್ ಗಡ್ಕರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.