ಎರ್ನಾಕುಲಂ (ಕೇಳರ): ಕೂತಟ್ಟುಕುಲಂ ಎರ್ನಾಕುಲಂನಲ್ಲಿ ಮಾಂಸದ ಅಂಗಡಿಯ ಕೆಲಸಗಾರನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ತಿರುವನಂತಪುರದ ಅಂಬೂರಿ ನಿವಾಸಿ, ಮಾಂಸದಂಗಡಿ ಕಾರ್ಮಿಕ ರಾಧಾಕೃಷ್ಣನ್ (48) ಅಲಿಯಾಸ್ ಬಿನು ಕೊಲೆಯಾದವರು. ಘಟನೆಗೆ ಸಂಬಂಧಿಸಿದಂತೆ ಆತನೊಂದಿಗೆ ವಾಸವಿದ್ದ ತಮಿಳುನಾಡು ಮೂಲದ ಅರ್ಜುನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರ ನಡುವೆ ನಡೆದ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮಂಗಳವಾರ (30.05.2023) ಬೆಳಿಗ್ಗೆ, ಅಂಗಡಿ ತೆರೆಯದಿರುವುದನ್ನು ಗಮನಿಸಿದ ಮಾಲೀಕ ರಾಧಾಕೃಷ್ಣನ್ ಅವರ ಮೆನೆಗೆ ತೆರಳಿದ್ದಾರೆ. ಆ ವೇಳೆ ರಾಧಾಕೃಷ್ಣನ್ ಅವರು ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಅವರ ಮೃತದೇಹದ ತಲೆಗೆ ಜೋರಾಗಿ ಪೆಟ್ಟು ಬಿದ್ದಿದ್ದು, ಕುತ್ತಿಗೆಗೆ ಗಾಯವಾಗಿತ್ತು. ಇದನ್ನು ಕಂಡ ಅಂಗಡಿ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ರಾಧಾಕೃಷ್ಣನ್ ಜೊತೆಗೆ ವಾಸವಾಗಿದ್ದ ಅರ್ಜುನ್ ಮನೆಯಲ್ಲಿ ಕಂಡು ಬರದ ಹಿನ್ನಲೆ ಪೊಲೀಸರಿಗೆ ಅನುಮಾನ ಹುಟ್ಟಿದ್ದು, ಅವನ್ನು ಪೊಲೀಸರು ಹುಡುಕಲು ಪ್ರಾರಂಭಿಸಿದರು. ಘಟನೆಯ ನಂತರ ಅರ್ಜುನ್ ನಾಪತ್ತೆಯಾಗಿದ್ದ. ಪ್ರಾಥಮಿಕ ತನಿಖೆಯಲ್ಲಿ ಅರ್ಜುನ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತೀರ್ಮಾನಿಸಿದ್ದರು.
ಆತನ ಮೊಬೈಲ್ ಫೋನ್ ಇರುವ ಸ್ಥಳವನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಆರೋಪಿಗಳು ತೆಂಕಶಿಗೆ ಪರಾರಿಯಾಗಿರುವುದು ತಿಳಿದು ತಮಿಳುನಾಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಮಿಳುನಾಡು ಪೊಲೀಸರ ತಂಡ ಅರ್ಜುನ್ನನ್ನು ಬಂಧಿಸಿತ್ತು. ಇಂದು ಅರ್ಜುನ್ನನ್ನು ಕೊಚ್ಚಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೋಲಿಸರ ತನಿಖೆಯ ನಂತರ ಕೊಲೆ ಮಾಡಲು ಕಾರಣ ಏನು ತಿಳಿದು ಬರಬೇಕಿದೆ. ಪ್ರಾಥಮಿಕ ತನಿಖೆಯ ಆಧಾರದಲ್ಲಿ ಈಗ ಅರ್ಜುನ್ ಪೊಲೀಸರ ವಶದಲ್ಲಿದ್ದನೆ.
ಬಿಹಾರದಲ್ಲಿ ಯುವತಿಯ ಮೇಲೆ ಹಲ್ಲೆ: ಇಲ್ಲಿನ ಸೀತಾಮರ್ಹಿ ಎಂಬಲ್ಲಿ ಪ್ರೇಮಿಯೊಬ್ಬ ಮದುವೆಗೆ ನಿರಾಕರಿಸಿದ ಪ್ರೇಯಸಿಗೆ 12 ಬಾರಿ ಚಾಕುವಿನಿಂದ ಚುಚ್ಚಿ ಕೊಲೆಯ ಯತ್ನ ಮಾಡಿದ್ದಾನೆ. ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ಯುವತಿಯನ್ನು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿ ದಿಗ್ಗಿ ಪಂಚಾಯತ್‌ನ ಹರಿಬೆಳ ಗ್ರಾಮದ ರಮೇಶ್ ಶಾ ಎಂಬವರ ಪುತ್ರ ಚಂದನ್ ಕುಮಾರ್ (22) ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಯುವಕ ಕೊಟ್ಟ ಮಾಹಿತಿಯಂತೆ ಇಬ್ಬರು 4 ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ಮನೆಯವರ ಒತ್ತಡದಿಂದ ಆಕೆ ಮಾತು ಬಿಟ್ಟಿದ್ದಳು. ಇದೇಕ್ಕೆ ಮುನಿಸಿಕೊಂಡ ಚಂದನ್ ಕುಮಾರ್ ಆಕೆಯೊಂದಿಗಿನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದಾದ ನಂತರ ಇಬ್ಬರ ಹುಡುಗಿಯ ಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಪೊಲೀಸರು ಇಬ್ಬರ ಜೊತೆ ಮಾತುಕತೆ ನಡೆಸಿ ಬೇರ್ಪಡಿಸಿದ್ದರು. ಆದರೆ ಸೋಮವಾರ ಯುವತಿ ಮಾರುಕಟ್ಟೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಡ್ಡಗಟ್ಟಿ ಚಂದನ್ ಮಾತನಾಡಿಸಿದ್ದ ಈ ವೇಳೆ ಹುಡುಗಿ ಮಾತನಾಡಲು ನಿರಾಕಣೆ ಮಾಡಿದಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಹೆಚ್ಚಿನ ಓದಿಗೆ ಲಿಂಕ್ ಬಳಸಿ: ಮದುವೆಯಾಗಲು ನಿರಾಕರಿಸಿದ ಯುವತಿಗೆ 12 ಬಾರಿ ಚಾಕುವಿನಿಂದ ಇರಿದ ಕಿಡಿಗೇಡಿ ಪ್ರೇಮಿ!