ವಾರಣಾಸಿ: ಎಂಟು ದಿನಗಳ ಕಾಲ ಭಾರತದ ಪ್ರವಾಸದಲ್ಲಿರುವ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ನಿನ್ನೆಯಿಂದ ಉತ್ತರಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದಾರೆ. ಉತ್ತರ ಪ್ರದೇಶಕ್ಕೆ ಮೂರು ದಿನಗಳ ಭೇಟಿ ನೀಡಿದ್ದು, ಎರಡನೇ ದಿನವಾದ ಇಂದು ವಾರಣಾಸಿಯ ದಶಾಶ್ವಮೇಧ ಘಾಟ್ಗೆ ಆಗಮಿಸಿದ್ದಾರೆ. ಅಲ್ಲಿ ಶಿವನ ದರ್ಶನ ಮತ್ತು ಪೂಜೆಯ ಬಳಿಕ ತಮ್ಮ ತಂದೆ ಅನಿರುದ್ಧ ಜುಗನ್ನಾಥನ ಚಿತಾಭಸ್ಮವನ್ನು ಗಂಗೆಯಲ್ಲಿ ಬಿಟ್ಟರು.
ಓದಿ: ನಾಳೆಯಿಂದ 8 ದಿನಗಳ ಕಾಲ ಮಾರಿಷಸ್ ಪ್ರಧಾನಿಯ ಭಾರತ ಪ್ರವಾಸ
ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರನ್ನು ಭೇಟಿ ಮಾಡಲು ಸಿಎಂ ಯೋಗಿ ಆದಿತ್ಯನಾಥ್ ಅವರು ಇಂದು ವಾರಣಾಸಿಗೆ ತಲುಪಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೋಟೆಲ್ ತಾಜ್‌ನಲ್ಲಿ ಮಾರಿಷಸ್ ಪ್ರಧಾನಿಯನ್ನು ಭೇಟಿಯಾಗಲಿದ್ದಾರೆ.
ಯುಪಿ ಗವರ್ನರ್ ಆನಂದಿಬೆನ್ ಪಟೇಲ್ ಸಹ ಶುಕ್ರವಾರ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ರನ್ನು ಭೇಟಿಯಾಗಲಿದ್ದಾರೆ. ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಬುಧವಾರ ವಾರಣಾಸಿ ತಲುಪಿದ್ದಾರೆ. ಇಂದು ಸಂಜೆ ಶ್ರೀಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ದರ್ಶನದ ನಂತರ ಗಂಗಾ ಆರತಿ ಪಡೆಯಲಿದ್ದಾರೆ.
ಓದಿ: ಮಾರಿಷಸ್ಗೆ ಸುಧಾರಿತ ಲಘು ಹೆಲಿಕಾಪ್ಟರ್ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದ ಹೆಚ್ಎಎಲ್
ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ತಮ್ಮ ಪತ್ನಿ ಕೊಬಿತಾ ಜುಗ್ನಾಥ್ ಮತ್ತು ಉನ್ನತ ಮಟ್ಟದ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಸುಮಾರು 8 ದಿನಗಳ ಪ್ರವಾಸ ಇದಾಗಿದ್ದು, ಮುಂದಿನ ಮಂಗಳವಾರ ಗುಜರಾತ್ನ ಜಾಮ್‌ನಗರದಲ್ಲಿ ನಡೆಯಲಿರುವ ವಿಶ್ವ ಆರೋಗ್ಯ ಸಂಘಟನೆಯ ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.