ಪ್ರಕಾಶಂ ಜಿಲ್ಲೆ(ಆಂಧ್ರಪ್ರದೇಶ): ಪ್ರಕಾಶಂ ಜಿಲ್ಲೆಯ ಒಂಗೋಲೆಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಗಳಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ಅವು ಸಂಪೂರ್ಣ ಹೊತ್ತಿ ಉರಿದಿವೆ.
ಕೋವಿಡ್ನಿಂದಾಗಿ ಬಸ್ಗಳನ್ನ ವುಡ್ ಕಾಂಪ್ಲೆಕ್ಸ್ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಬಸ್ಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದಿವೆ. ಇದರಿಂದ ಸುಮಾರು 8 ಕೋಟಿ ರೂ. ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಹೊತ್ತಿ ಉರಿದಿರುವ ಬಸ್ಗಳು ಕಾವೇರಿ ಟ್ರಾವೆಲ್ಸ್ಗೆ ಸೇರಿದ್ದವು ಎಂದು ಹೇಳಲಾಗುತ್ತಿದೆ.
ಬೆಂಕಿಗಾಹುತಿಯಾಗಿರುವ ಎಲ್ಲ ಬಸ್ಗಳು ಎಸಿಯಿಂದ ಕೂಡಿದ್ದು, ಸ್ಥಳದಲ್ಲಿ ಒಟ್ಟು 20 ಬಸ್ಗಳನ್ನ ನಿಲ್ಲಿಸಲಾಗುತ್ತು ಎಂದು ತಿಳಿದು ಬಂದಿದೆ. ಬಸ್ಗಳಿಗೆ ಬೆಂಕಿ ತಗುಲುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಈಗಾಗಲೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿದು ಬಂದಿದೆ.