ETV Bharat / bharat

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಐವರ ಸ್ಥಿತಿ ಗಂಭೀರ - ಮಹಾರಾಷ್ಟ್ರದ ಪಾಲ್ಗರ್​

ಪಟಾಕಿ ತಯಾರಿಕೆ ಮಾಡ್ತಿದ್ದ ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟಗೊಂಡಿರುವ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Fire
Fire
author img

By

Published : Jun 17, 2021, 5:39 PM IST

ಪಾಲ್ಗರ್​​(ಮಹಾರಾಷ್ಟ್ರ): ಪಟಾಕಿ ತಯಾರಿಕೆ ಮಾಡ್ತಿದ್ದ ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟಗೊಂಡಿರುವ ಪರಿಣಾಮ ಐವರು ಸಿಬ್ಬಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್​ನಲ್ಲಿ ನಡೆದಿದೆ. ಪಾಲ್ಗರ್​ ಜಿಲ್ಲೆಯ ದಹನು ಪ್ರದೇಶದಲ್ಲಿ ಈ ಅವಘಡ ನಡೆದಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಈಗಾಗಲೇ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ

ಘಟನೆಯಲ್ಲಿ ಗಾಯಗೊಂಡಿರುವವರನ್ನ ನವಿನೀತ್​​(32), ಮಹೇಶ್​ ಮೊರೆ(40), ಆಸೀಫ್​ ಖಾನ್​(32), ಪ್ರೇಮಚಂದ ಚೌಹಾಣ್​(25), ಸುಖದೇವ್​ ಸಿಂಗ್​(50) ಎಂದು ಗುರುತಿಸಲಾಗಿದೆ. ಈಗಾಗಲೇ ಇವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಾಥಮಿಕ ವರದಿ ಪ್ರಕಾರ ಗಾಯಗೊಂಡಿರುವ ಐವರಲ್ಲಿ ನಾಲ್ವರನ್ನ ದಹನು ಆಸ್ಪತ್ರೆಗೆ ಹಾಗೂ ಮತ್ತೋರ್ವನನ್ನ ಗುಜರಾತ್​ನ ವಾಪಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಪಿಎಂ ತಮ್ಮ ತಪ್ಪು ಒಪ್ಪಿಕೊಂಡು, ಭಾರತ ಮರು ನಿರ್ಮಾಣಕ್ಕಾಗಿ ತಜ್ಞರ ಸಹಾಯ ಪಡೆಯಲಿ: ರಾಗಾ

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನವಾಗಿದೆ ಎಂದು ಪಾಲ್ಗರ್​ ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ. ಕಾರ್ಖಾನೆಯಲ್ಲಿ ಸುಮಾರು 7-8 ಸಲ ಸ್ಫೋಟಗೊಂಡಿರುವ ಕಾರಣ 10 ರಿಂದ 15 ಕಿಲೋ ಮೀಟರ್​ ವ್ಯಾಪ್ತಿಯವರೆಗೆ ಆತಂಕ ಸೃಷ್ಟಿಯಾಗಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.