ETV Bharat / bharat

ಜಾಮೀನಿನ ಮೇಲೆ ಹೊರಬಂದು ಹೊಟೇಲ್‌ ರೂಂನಲ್ಲಿ ಗೆಳತಿಗೆ ಗುಂಡಿಕ್ಕಿ ಕೊಂದ ವಿವಾಹಿತ - ಆತ್ಮಹತ್ಯೆಗೆ ಯತ್ನಿಸಿರುವ ಘಟನೆ

ಓಯೋ ಹೋಟೆಲ್​ನಲ್ಲಿ ಗೆಳತಿಯನ್ನು ಗುಂಡಿಕ್ಕಿ ಕೊಲೆಗೈದ ವಿವಾಹಿತನೊಬ್ಬ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನವ ದೆಹಲಿಯಲ್ಲಿ ನಡೆದಿದೆ.

man shoots girlfriend at Oyo hotel  Married man shoots girlfriend  shoots girlfriend at Oyo hotel in Delhi  ಗೆಳತಿಗೆ ಗುಂಡು ಹಾರಿಸಿ ಕೊಲೆ ಮಾಡಿದ ವಿವಾಹಿತ  ಜಾಮೀನಿನ ಮೇಲೆ ಹೊರ ಬಂದಿದ್ದ ಕೊಲೆ ಆರೋಪಿ  ಕೊಲೆ ಆರೋಪಿಯಿಂದ ಮತ್ತೊಂದು ಹೇಯ ಕೃತ್ಯ  ಓಯೋ ಹೋಟೆಲ್​ನಲ್ಲಿ ಗೆಳತಿಯನ್ನು ಗುಂಡಿಕ್ಕಿ ಕೊಲೆ  ವಿವಾಹಿತ ತನ್ನ ಗೆಳತಿಯನ್ನು ಗುಂಡಿಕ್ಕಿ ಕೊಲೆ  ಆತ್ಮಹತ್ಯೆಗೆ ಯತ್ನಿಸಿರುವ ಘಟನೆ  ಗುಂಡು ಹಾರಿಸಿದ ಬಳಿಕ ಪ್ರವೀಣ್​ ಆತ್ಮಹತ್ಯೆಗೆ ಯತ್ನ
ಗೆಳತಿಗೆ ಗುಂಡು ಹಾರಿಸಿ ಕೊಲೆ ಮಾಡಿದ ವಿವಾಹಿತ
author img

By

Published : Nov 24, 2022, 8:35 AM IST

ನವ ದೆಹಲಿ: ಓಯೋ ಹೋಟೆಲ್​ ಕೊಠಡಿಗೆ ತೆರಳಿದ್ದ ಓರ್ವ ಪುರುಷ ಮತ್ತು ಮಹಿಳೆ ಯಾವುದೋ ವಿಷಯಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈ ಗಲಾಟೆ ವಿಕೋಪಕ್ಕೆ ತೆರಳಿ 38 ವರ್ಷದ ವಿವಾಹಿತ ವ್ಯಕ್ತಿ ತನ್ನ ಗೆಳತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ನರೇಲಾ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಗೀತಾ (39) ಎಂದು ಗುರುತಿಸಲಾಗಿದೆ. ಪ್ರವೀಣ್ ಅಲಿಯಾಸ್ ಸಿತು ಆರೋಪಿಯಾಗಿದ್ದಾನೆ. ಮಂಗಳವಾರ ತನ್ನ ಗೆಳತಿಗೆ ಗುಂಡಿಕ್ಕಿದ ಬಳಿಕ ತಾನೂ​ ಆತ್ಮಹತ್ಯೆಗೆ ಯತ್ನಿಸಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತ​ನನ್ನು ಹೋಟೆಲ್​ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರವೀಣನ ಪತ್ನಿ ಮತ್ತು ಇಬ್ಬರು ಮಕ್ಕಳು ದೆಹಲಿ ಸಮೀಪದ ಹಳ್ಳಿಯೊಂದರಲ್ಲಿ ನೆಲೆಸಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದರು.

ಇಬ್ಬರು ರಾತ್ರಿ ಹೋಟೆಲ್​ ರೂಂ ಕಾಯ್ದಿರಿಸಿದ್ದರು. ಇದ್ದಕ್ಕಿದ್ದಂತೆ ರೂಂನಿಂದ ದೊಡ್ಡ ಶಬ್ಧ ಕೇಳಿಬಂತು. ಕೂಡಲೇ ಓಡಿ ಹೋಗಿ ನೋಡಿದಾಗ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗೀತಾ ಮೃತಪಟ್ಟರು ಎಂದು ವೈದ್ಯರು ಘೋಷಿಸಿದ್ದಾಗಿ ಹೋಟೆಲ್​ ಸಿಬ್ಬಂದಿ ಮಾಹಿತಿ ನೀಡಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಪ್ರವೀಣ್‌ ಸ್ಥಿತಿ ಗಂಭೀರವಾಗಿದೆ. ಈತ ಕೊಲೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು ಹೊರಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಲೇಜ್​ನಿಂದ ಡ್ರಾಪ್​ಔಟ್​ ಆಗಿ ಜಗತ್ತಿನ ನಂ.2 ಸೆಲ್ಫ್ ಮೇಡ್​ ಬಿಲಿಯನೇರ್​ ಆದ ಭಾರತೀಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.