ಭಿಂಡ್ (ಮಧ್ಯ ಪ್ರದೇಶ): ಮಧ್ಯ ಪ್ರದೇಶದ ಭಿಂಡ್ನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸುಮಾರು 200 ಜನರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಡಿಎಸ್ಪಿ ಮೋತಿಲಾಲ್ ಕುಶ್ವಾಹ ಅವರು ಸ್ಥಳಕ್ಕೆ ತಲುಪಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ವರನ ವಿರುದ್ಧ ಪ್ರಕರಣ ದಾಖಲಿಸಿದರು.
ಪೊಲೀಸರನ್ನು ನೋಡಿದ ಹೆಚ್ಚಿನ ಅತಿಥಿಗಳು ಮದುವೆ ನಡೆಯುತ್ತಿದ್ದ ಸ್ಥಳದಿಂದ ಪಲಾಯನ ಮಾಡುವಲ್ಲಿ ಯಶಸ್ವಿಯಾದರು.
ಆದರೆ, ಪೊಲೀಸರು ಅವರಲ್ಲಿ ಕೆಲವರನ್ನು ಹಿಡಿದು, ಕಪ್ಪೆಜಿಗಿತ ಮಾಡಿಸಿದ್ದಾರೆ.