ETV Bharat / bharat

ಎಣ್ಣೆ ಗುಂಗಲ್ಲಿ ಮಾಡಬಾರದ್ದನ್ನು ಮಾಡಿದ ವರ; ಮದುವೆಯನ್ನೇ ನಿರಾಕರಿಸಿದ ವಧು! - ಕುಡಿದ ಅಮಲಿನಲ್ಲಿದ್ದ ವರನ ಕೃತ್ಯಕ್ಕೆ ವಧು ಆಕ್ರೋಶ

ಚಂದೌಲಿಯಲ್ಲಿ ಕುಡಿದ ಅಮಲಿನಲ್ಲಿದ್ದ ವರನ ಕೃತ್ಯಕ್ಕೆ ವಧು ಆಕ್ರೋಶ- ಮದುವೆಯಾಗಲು ನಿರಾಕರಿಸಿದ ವಧು- ಮದುವೆ ಮಂಟಪದಲ್ಲಿ ಸೃಷ್ಟಿಯಾದ ಕೋಲಾಹಲ- ಪೊಲೀಸ್​ ಠಾಣೆ ಮೆಟ್ಟಿಲೇರಿದ ಮದುವೆ ವಿಚಾರ

chandauli marriage broken case
ಎಣ್ಣೆ ಏಟಿನಲ್ಲಿ ವರ ಮಾಡಿದ ಎಡವಟ್ಟು; ಮದುವೆಯಾಗಲು ನಿರಾಕರಿಸಿದ ವಧು
author img

By

Published : May 6, 2023, 10:02 PM IST

ಚಂದೌಲಿ (ಉತ್ತರ ಪ್ರದೇಶ): ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಮದುವೆ ಕಾರ್ಯಕ್ರಮ ಸಾಂಗವಾಗಿ ನಡೆಯುತ್ತಿತ್ತು. ಆದ್ರೆ ವರ ಮಾಡಿಕೊಂಡ ಎಡವಿಟ್ಟಿನಿಂದ ವಧು ಮದುವೆಯನ್ನೇ ನಿರಾಕರಿಸಿದ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು, ನೌಘರ್ ಪ್ರದೇಶದಲ್ಲಿ ಗುರುವಾರ ವಿವಾಹ ಕಾರ್ಯಕ್ರಮದಲ್ಲಿ ಕುಡಿದ ಅಮಲಿನಲ್ಲಿದ್ದ ವರನು, ವಧುವಿನ ಹಣೆಗೆ ಸಿಂಧೂರ ಹಚ್ಚಲು ಸಾಧ್ಯವಾಗಿಲ್ಲ. ಕುಡಿದ ನಶೆಯಲ್ಲಿ ವರ ಅವತಾರವನ್ನು ನೋಡಿದ ವಧು ಆಕ್ರೋಶಗೊಂಡು, ಮದುವೆಯಾಗಲು ನಿರಾಕರಿಸಿದ್ದಾಳೆ. ಇದಾದ ನಂತರ ಹುಡುಗಿಯ ಕಡೆಯ ಜನರು ವರನ ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಸುದೀರ್ಘ ಮಾತಿನ ಚಕಮಕಿ ನಡೆಸಿದ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆತಂದು ಸಮಾಧಾನಪಡಿಸಿದರು.

ಇದನ್ನೂ ಓದಿ: ಯಾತ್ರಾರ್ಥಿಗಳ ಕಾರು ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು

ಮದುವೆಯನ್ನು ನಿರಾಕರಿಸಿದ ವಧು: ಮದುವೆ ವಿಚಾರವು ಮಿರ್ಜಾಪುರ ಜಿಲ್ಲೆಯ ಅಹಿರೌರಾ ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿಕ್‌ಪುರ ಗ್ರಾಮದಿಂದ ಚಕರಘಟ್ಟ ಪೊಲೀಸ್ ಠಾಣೆಯ ಮೆಟ್ಟಿಲು ಏರಿತು. ಮದುವೆ ಕಾರ್ಯಕ್ರಮದ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ವೇಳೆ ವಧುವಿಗೆ ಸಿಂಧೂರ ದಾನ ಮಾಡುವ ಅವಕಾಶ ಬಂದಾಗ, ಕುಡಿದ ಅಮಲಿನಲ್ಲಿದ್ದ ವರನು, ವಧುವಿಗೆ ಸರಿಯಾಗಿ ಸಿಂಧೂರ ಹಚ್ಚಲು ಆಗಲಿಲ್ಲ. ನಶೆಯಲ್ಲಿದ್ದ ವರ ಹುಡುಗಿಯ ಹಣೆಗೆ ಸಿಂಧೂರ ಹಚ್ಚುವ ಬದಲು, ಆಕೆಯ ಮುಖಕ್ಕೆ ಸಿಂಧೂರ ಹಚ್ಚಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಧು ಮದುವೆಯನ್ನೇ ನಿರಾಕರಿಸಿದಳು.

ಇದನ್ನೂ ಓದಿ: ನಡು ರಸ್ತೆಯಲ್ಲಿ ಯುವಕನಿಗೆ ಅಮಾನುಷವಾಗಿ ಥಳಿಸಿದ ದುಷ್ಕರ್ಮಿಗಳು: ವೈರಲ್​ ವಿಡಿಯೋ

ಎರಡು ಕುಟುಂಬಗಳ ಮಧ್ಯೆ ಗಲಾಟೆ: ತಕ್ಷಣವೇ ವಧು ಮಂಟಪದಿಂದ ಮನೆಯೊಳಗೆ ಹೋದಳು. ಆಗ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದಿದೆ. ಪರಿಸ್ಥಿತಿ ಹದಗೆಡುವುದನ್ನು ಕಂಡು ಬಹುತೇಕ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಸ್ಥಳದಿಂದ ಕಾಲ್ಕಿತ್ತರು. ವಧುವಿನ ಸಂಬಂಧಿಕರು ವರ ಮತ್ತು ಅವನ ತಂದೆಯನ್ನು ತಡೆದರು. ಜೊತೆಗೆ ಅವರ ಕಡೆಯವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.

ಇದನ್ನೂ ಓದಿ: ಚುನಾವಣಾ ಅಕ್ರಮ: 20 ಕೋಟಿ ಮೌಲ್ಯದ ವಜ್ರಾಭರಣ, ನಗದು ಜಪ್ತಿ

ಎರಡೂ ಕುಟುಂಬಗಳಿಂದ ಪರಸ್ಪರ ಒಪ್ಪಂದ: 112ಕ್ಕೆ ಮಾಹಿತಿ ಬಂದ ತಕ್ಷಣವೇ ಚಾಕರಘಟ್ಟ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಎರಡೂ ಕಡೆಯ ಜನರನ್ನು ಠಾಣೆಗೆ ಕರೆತರಲಾಯಿತು. ಇದಾದ ಬಳಿಕ ಶುಕ್ರವಾರ ಠಾಣೆಯಲ್ಲೇ ಬಹಳ ಹೊತ್ತು ಪಂಚಾಯ್ತಿ ನಡೆಯಿತು. ಎರಡೂ ಕಡೆಯವರು ಮದುವೆಯನ್ನು ಆಯೋಜಿಸಲು ಖರ್ಚು ಮಾಡಿದ ಹಣವನ್ನು ಹಿಂದಿರುಗಿಸಲು ಒಪ್ಪಿಕೊಂಡರು. ಮದುವೆಯ ಬಂಧವನ್ನು ಉಳಿಸಿಕೊಳ್ಳುವುದಿಲ್ಲ ಎಂದು ಎರಡೂ ಕುಟುಂಬಗಳು ಒಪ್ಪಂದವನ್ನು ಮಾಡಿಕೊಂಡವು. ಆಗ ಮಾತ್ರ ವರನ ಕಡೆಯವರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಯಿತು. ವಧು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ಠಾಣೆಯ ಪ್ರಭಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ಮದುವೆ ವಿಚಾರದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಪರಸ್ಪರ ಮಾತುಕತೆಯ ಆಧಾರದ ಮೇಲೆ ಎರಡೂ ಕುಟುಂಬಗಳು ಒಪ್ಪಂದಕ್ಕೆ ಬಂದಿವೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ಕಬಡ್ಡಿ ಪ್ರವರ್ತಕ 'ಕಮಲಜಿತ್ ಕಾಂಗ್‌' ಮೇಲೆ ಗುಂಡಿನ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.