ದಂತೇವಾಡ (ಛತ್ತೀಸ್ಗಢ): ನಕ್ಸಲರು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವನನ್ನು ಹೊಡೆದುರುಳಿಸಲಾಗಿದೆ. ಇಲ್ಲಿನ ಇಂದ್ರಾವತಿ ಪ್ರದೇಶದಲ್ಲಿ ನಿನ್ನೆ ನಕ್ಸಲರು ಹಾಗೂ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ನಡುವೆ ಗುಂಡಿನ ಚಕಮಕಿ ನಡೆದಿತ್ತು.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್, ‘ದಂತೇವಾಡ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. 5 ಲಕ್ಷ ಬಹುಮಾನ ಘೋಷಿಸಲಾಗಿದ್ದ ನಕ್ಸಲ್ ಕಾರ್ಯಕರ್ತನನ್ನು ಕಾರ್ಯಾಚರಣೆಯಲ್ಲಿ ಡಿಆರ್‌ಜಿ ಪಡೆ ಹೊಡೆದುರುಳಿಸಿದೆ' ಎಂದಿದ್ದಾರೆ.
ನಕ್ಸಲ್ ಹೊಡೆದುರುಳಿಸಿದ ಸ್ಥಳದಿಂದ ಶಸ್ತ್ರಾಸ್ತ್ರ ಸೇರಿದಂತೆ 5 ಕೆ.ಜಿ ಸುಧಾರಿಕ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಗುಂಡಿನ ಚಕಮಕಿಯಲ್ಲಿ ಹತನಾದ ನಕ್ಸಲ್ನನ್ನು ರಾಮ್ಸು ಎಂದು ಗುರುತಿಸಲಾಗಿದೆ.
ಓದಿ: 'ಬಂದಿ ಛೋರ್ ದಿವಸ್': ಕುದುರೆ ಸವಾರಿ ಸಾಹಸ ಪ್ರದರ್ಶಿಸಿದ ಸಿಹಾಂಗ್ ಸಿಖ್ಖರು