ಕಾಸ್ಗಂಜ್ (ಉತ್ತರಪ್ರದೇಶ): ಜಿಲ್ಲೆಯಲ್ಲಿ ಬೊಲೆರೋ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ದರಿಯಾಗಂಜ್ ಬಳಿಯ ಬದೌನ್-ಮೈನ್‌ಪುರಿ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ. ಮೃತ ಕುಟುಂಬಗಳಿಗೆ ಸಿಎಂ ಯೋಗಿ ಸಂತಾಪ ಸೂಚಿಸಿದ್ದಾರೆ.
ವಿವರ: ಫರೂಖಾಬಾದ್ ಪ್ರದೇಶದ 10ಕ್ಕೂ ಹೆಚ್ಚು ಭಕ್ತರು ಆಟೋ ಮೂಲಕ ಭೋಲೆ ಬಾಬಾನ ದರ್ಶನಕ್ಕೆ ತೆರಳುತ್ತಿದ್ದರು. ಬೊಲೆರೋದಲ್ಲಿ ಏಳು ಪ್ರಯಾಣಿಕರು ಫರೂಖಾಬಾದ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಶೋಕಪುರ ಗ್ರಾಮದ ಬಳಿ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿತು. ಬೊಲೆರೋ ಚಾಲಕ ಸೇರಿದಂತೆ ಆಟೋದಲ್ಲಿದ್ದ ಆರು ಭಕ್ತಾದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪಟಿಯಾಲಿ ತಹಸೀಲ್ದಾರ್ ರಾಜೀವ್ ನಿಗಮ್ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಬೈಕ್.. ತೂರಿಬಿದ್ದು ಕಾರ್ಗೆ ಡಿಕ್ಕಿ ಹೊಡೆದ ತಾಯಿ-ಮಗ!
ಎರಡೂ ವಾಹನಗಳಲಿದ್ದ ಪ್ರಯಾಣಿಕರು ಫರೂಕಾಬಾದ್‌ನ ನಿವಾಸಿಗಳು. ಆಟೋ ಮತ್ತು ಬೊಲೆರೋ ವಾಹನಗಳು ಫರೂಕಾಬಾದ್ ನೋಂದಣಿ ಹೊಂದಿವೆ. ಅಪಘಾತವಾದ ತಕ್ಷಣ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯಕ್ಕೆ ಸಾಥ್ ಕೊಟ್ಟರು.