ಕನೌಜ್(ಉತ್ತರ ಪ್ರದೇಶ): ವಿವಿಧ ಕಾರಣಗಳಿಂದಾಗಿ ಮದುವೆ ಮುರಿದು ಬೀಳುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಂದು ಮದುವೆ ಮಂಗಳಸೂತ್ರದ ವಿಚಾರಕ್ಕಾಗಿ ಕ್ಯಾನ್ಸಲ್ ಆಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕನೌಜ್ನಲ್ಲಿ ಈ ಘಟನೆ ನಡೆದಿದೆ. ಮಂಗಳಸೂತ್ರ ಇಲ್ಲದ ಕಾರಣ ವಧು ಕೋಪಗೊಂಡು ಮದುವೆ ನಿರಾಕರಿಸಿದ್ದಾಳೆ. ಈ ವೇಳೆ, ಮನವೊಲಿಕೆ ಮಾಡಿದ್ರೂ ಆಕೆ ಒಪ್ಪಿಕೊಂಡಿಲ್ಲ.
ಸೌರಿಕ್ ಪೊಲೀಸ್ ಠಾಣೆಯ ಸುಭಾಷ್ ನಗರ ಮೊಹಲ್ಲಾ ನಿವಾಸಿ ಸುನಿಲ್ ಕುಮಾರ್ ಗುಪ್ತಾ ಅವರ ಪುತ್ರ ಸಚಿನ್ ಜೊತೆ ಫಾರೂಕಾಬಾದ್ನ ಯುವತಿ ಮದುವೆ ನಿಶ್ಚಿಯವಾಗಿತ್ತು. ಎರಡು ಕುಟುಂಬದ ಒಪ್ಪಿಗೆ ನಂತರ ಮೇ 8ರಂದು ಮದುವೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಲಾಕ್ಡೌನ್ ಘೋಷಣೆ ಮಾಡಿರುವ ಕಾರಣ ಮಂಗಳಸೂತ್ರ ತೆಗೆದುಕೊಂಡು ಬರಲು ಸಾಧ್ಯವಾಗಿರಲಿಲ್ಲ. ಇದರ ಮಧ್ಯೆ ಕೂಡ ಮದುವೆ ನಡೆಸಲು ನಿರ್ಧರಿಸಿ, ಆಚರಣೆ ನಡೆಯುತ್ತಿದ್ದವು. ಈ ವೇಳೆ, ಮದುಮಗಳು ಹಾಕಿಕೊಳ್ಳುವ ಮಂಗಳಸೂತ್ರ ಇಲ್ಲ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಮದುವೆ ವೇಳೆ ವಧು ಕೇಳಿದ ಲೆಕ್ಕಕ್ಕೆ ಉತ್ತರ ನೀಡದ ವರ.. ಮದುವೆ ಕ್ಯಾನ್ಸಲ್ ಮಾಡಿಕೊಂಡ ಯುವತಿ!
ಸಪ್ತಪದಿ ತುಳಿಯಲು ನಿರಾಕರಿಸಿದ ವಧು
ಮಂಗಳಸೂತ್ರ ತರದಿದ್ದಕ್ಕೆ ಕೋಪಗೊಂಡ ವಧು ಸಪ್ತಪದಿ ತುಳಿಯಲು ಹಿಂದೇಟು ಹಾಕಿದ್ದಾಳೆ. ಮದುವೆ ಕ್ಯಾನ್ಸಲ್ ಮಾಡಿಕೊಂಡು ಕುಟುಂಬದೊಂದಿಗೆ ಮನೆ ಕಡೆ ಹೆಜ್ಜೆ ಹಾಕಿದ್ದಾಳೆ. ಈ ವೇಳೆ ಎರಡು ಕಡೆಯವರು ರಾಜಿ ಮಾಡಿಕೊಳ್ಳಲು ಮುಂದಾದರೂ ಪ್ರಯೋಜನವಾಗಿಲ್ಲ.