ETV Bharat / bharat

ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.. ಚಾಲಕನ ಸಮಯ ಪ್ರಜ್ಞೆಯಿಂದ ಉಳಿತು ಪ್ರಾಣ! - Man tried to commit suicide on railway track mumbai

ರೈಲ್ವೆ ಹಳಿ ಮೇಲೆ ಮಲಗಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದ ವ್ಯಕ್ತಿಯ ಪ್ರಾಣ ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಉಳಿದಿದ್ದು, ಘಟನೆಯ ಸಂಪೂರ್ಣ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿವೆ.

Man tried to commit suicide
Man tried to commit suicide
author img

By

Published : Dec 29, 2021, 5:29 PM IST

ಮುಂಬೈ(ಮಹಾರಾಷ್ಟ್ರ): ರೈಲ್ವೆ ಹಳಿ ಮೇಲೆ ಮಲಗಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಶಿವಡಿಯಲ್ಲಿ ನಡೆದಿದ್ದು, ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಮುಂಬೈನ ಶಿವಡಿ ಮೂಲದ 59 ವರ್ಷದ ವ್ಯಕ್ತಿ ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ವೇಳೆ, ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಆತನ ಜೀವ ಉಳಿದಿದೆ. ರೈಲ್ವೆ ಹಳಿ ಮೇಲೆ ವ್ಯಕ್ತಿ ಮಲಗಿರುವುದನ್ನ ನೋಡಿರುವ ರೈಲು ಚಾಲಕ ಬ್ರೇಕ್​ ಹಾಕಿದ್ದಾನೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿರಿ: ಆಂಧ್ರಪ್ರದೇಶದಲ್ಲೂ ಪವರ್​​ ಸ್ಟಾರ್ ಪುನೀತ್​​​​ ಹವಾ.. ನಿರ್ಮಾಣಗೊಂಡಿವೆ 7 ಅಡಿ ಎತ್ತರದ ಹತ್ತಾರು ಕಂಚಿನ ಪ್ರತಿಮೆಗಳು!

ರೈಲ್ವೇ ಪೊಲೀಸರು ತಿಳಿಸಿರುವ ಪ್ರಕಾರ, ಶಿವಡಿ ನಿವಾಸಿ ಮಧುಕರ್​ ಸಾಬಳೆ(59) ರೈಲ್ವೆ ಹಳಿ ಮೇಲೆ ಮಲಗಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಾನೆ. ಇದೇ ವೇಳೆ ಅದೇ ರೈಲ್ವೆ ಟ್ರ್ಯಾಕ್​ ಮೇಲೆ ಸ್ಥಳೀಯ ರೈಲು ಬಂದಿದೆ. ತಕ್ಷಣವೇ ಚಾಲಕ ಬ್ರೇಕ್ ಹಾಕಿದ್ದಾನೆ. ಇದರ ಬೆನ್ನಲ್ಲೇ ಮಹಿಳಾ ಕಾನ್ಸ್​ಟೇಬಲ್​ ಧನಶ್ರೀ ಪಂಡಿತ್​ ಸೇರಿದಂತೆ ಅನೇಕರು ಅಲ್ಲಿಗೆ ಬಂದು ಆತನನ್ನ ಹೊರಗಡೆ ಕರೆತಂದಿದ್ದಾರೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ವ್ಯಕ್ತಿಯನ್ನ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಇದೀಗ ವಿಚಾರಣೆಗೊಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.