ಬರೇಲಿ: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದ್ದ ಭಾರತ ಮೂಲದ ಚಾಲಕನೋರ್ವ ತನ್ನ ತಾಯ್ನಾಡಿಗೆ ಮರಳಲು ಪಾಸ್‌ಪೋರ್ಟ್ ಹಾಗೂ ಹಣವಿಲ್ಲದೆ ಪರದಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಿಡಿಯೋ ಮಾಡಿರುವ ಉತ್ತರ ಪ್ರದೇಶದ ಪಾದಾರ್ಥ್‌ಪುರ್ ಗ್ರಾಮದ ರುಖ್ಸಾನ್ ಖಾನ್, ಕೆಲಸಕ್ಕೆ ಕರೆತಂದಿದ್ದ ವ್ಯಕ್ತಿ ವೇತನ ನೀಡದೆ ಪಾಸ್‌ಪೋರ್ಟ್ ಹಾಗೂ ವೀಸಾ ಕಸಿದುಕೊಂಡಿದ್ದಾನೆ. ಹಲವು ದಿನಗಳಿಂದ ಊಟ, ನೀರಿಲ್ಲದೆ, ಪಾರ್ಕ್ ಹಾಗೂ ಪುಟ್‌ಪಾತ್‌ಗಳಲ್ಲಿ ದಿನ ಕಳೆಯುತ್ತಿರುವುದಾಗಿ ತನ್ನ ಸಂಕಷ್ಟವನ್ನು ವಿವರಿಸಿದ್ದಾನೆ.
ಭಾರತಕ್ಕೆ ವಾಪಸ್ ಆಗಲು ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾನೆ. ಫ್ಯಾಮಿಲಿ ಡ್ರೈವರ್ ಕೆಲಸಕ್ಕಾಗಿ 4 ವರ್ಷಗಳ ಹಿಂದೆ ಮಗ ಸೌದಿ ಅರೇಬಿಯಾಗೆ ಹೋಗಿದ್ದಾರೆ ಎಂದು ರುಖ್ಸಾನ್ ಖಾನ್ ಅವರ ತಾಯಿ ಅಕಿಲಾ ಬೇಗಂ ಹೇಳಿದ್ದಾರೆ.
ಇದನ್ನೂ ಓದಿ: ಜಗತ್ತಿನ ಚುನಾಯಿತ ನಾಯಕರ ಒಪ್ಪಿತ ನಾಯಕತ್ವ ಸೂಚ್ಯಂಕದಲ್ಲಿ ಮೋದಿ ಟಾಪರ್
ಆರಂಭದಲ್ಲಿ ನಾಸಿರ್ ಎಂಬ ವ್ಯಕ್ತಿ ಬಳಿ ಕೆಲಸ ಮಾಡಿದ್ದಾರೆ. ಅವರು ತಿಂಗಳಿಗೆ 1,500 ರಿಯಾಲ್ ಪಾವತಿಸಿದರು. ನಂತರ, ನಾಸಿರ್ ಮತ್ತೊಬ್ಬ ವ್ಯಕ್ತಿ ಬಳಿ ಚಾಲಕನಾಗಿ ಕೆಲಸ ಮಾಡುವಂತೆ ರುಖ್ಸಾನ್‌ಗೆ ಸೂಚಿಸಿದ್ದಾನೆ. ಆ ಮೂರನೇ ವ್ಯಕ್ತಿ ಈತನ ದಾಖಲೆಗಳನ್ನು ವಶಪಡಿಸಿಕೊಂಡು, ವೇತನ ನೀಡದೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.