ETV Bharat / bharat

ಕಳ್ಳತನ ಶಂಕೆ; ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ವಿದ್ಯುತ್ ಶಾಕ್ ನೀಡಿ, ಥಳಿಸಿ ಕೊಂದರು! - ಸಾರಿಗೆ ವ್ಯವಸ್ಥಾಪಕ

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಕಳ್ಳತನದ ಶಂಕೆಯಿಂದ ವ್ಯಕ್ತಿಯೊಬ್ಬನಿಗೆ ವಿದ್ಯುತ್ ಶಾಕ್ ನೀಡಿ ಥಳಿಸಿದ್ದು ಆತ ಮೃತಪಟ್ಟಿದ್ದಾನೆ.

ಶಹಜಹಾನ್​​ಪುರದಲ್ಲಿ ವ್ಯಕ್ತಿಗೆ ವಿದ್ಯುತ್ ಶಾಕ್ ನೀಡಿ ಥಳಿತ

author img

By

Published : Apr 13, 2023, 10:43 PM IST

ಶಹಜಹಾನ್‌ಪುರ (ಉತ್ತರ ಪ್ರದೇಶ): ಕಳ್ಳತನದ ಅನುಮಾನದ ಮೇರೆಗೆ 33 ವರ್ಷದ ವ್ಯಕ್ತಿಯೊಬ್ಬನಿಗೆ ವಿದ್ಯುತ್ ಶಾಕ್ ನೀಡಿ ಥಳಿಸಿದ್ದರಿಂದ ಆತ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಶಿವಂ ಜೋಹ್ರಿ ಎಂಬಾತನನ್ನು ಅರೆಬೆತ್ತಲೆ ಸ್ಥಿತಿಯಲ್ಲಿ ಕಂಬಕ್ಕೆ ಕಟ್ಟಿಹಾಕಿದ್ದು, ಆತ ನೋವಿನಿಂದ ನರಳುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿದೆ.

ಸರ್ಕಲ್ ಆಫೀಸರ್ (ನಗರ) ಬಿ.ಎಸ್.ವೀರ್ ಪ್ರಕಾರ, ಜೋಹ್ರಿ ಸೂರಿ ಟ್ರಾನ್ಸ್‌ಪೋರ್ಟ್ಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಕಂಪನಿಯ ಮಾಲೀಕ ನೀರಜ್ ಗುಪ್ತಾ ಅವರ ಮೇಲೆ ಕಳ್ಳತನದ ಆರೋಪ ಮಾಡಿ ಕುನಾಲ್ ಅರೋರಾ ಅವರ ಬಟ್ಟೆ ಕಂಪನಿಗೆ ಕರೆದೊಯ್ದಿದ್ದಾರೆ. ಅಲ್ಲಿ ಜೋಹ್ರಿ ಅವರನ್ನು ಕಂಬಕ್ಕೆ ಕಟ್ಟಿ ಹಾಕಲಾಗಿದೆ. ಆ ನಂತರ ಅಂಗಿಯನ್ನು ತೆಗೆದುಹಾಕಿ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದಾರೆ. ಗುಪ್ತಾ, ಅರೋರಾ ಮತ್ತು ಇತರ ಆರು ಮಂದಿ ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಬಿಸಿ ಇಂಡಿಯಾ ವಿರುದ್ಧ ಫೆಮಾ ಕಾಯ್ದೆಯಡಿ ಕೇಸ್​ ದಾಖಲಿಸಿದ ಇಡಿ

8 ಜನರ ವಿರುದ್ಧ ಎಫ್​ಐಆರ್: ಜೋಹ್ರಿ ಅವರು ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದುದನ್ನು ಕಂಡ ಗುಪ್ತಾ ನಂತರ ಅವರ ಕುಟುಂಬಸ್ಥರಿಗೆ ವಿದ್ಯುತ್ ಆಘಾತಕ್ಕೊಳಗಾಗಿರುವ ಬಗ್ಗೆ ತಿಳಿಸಿದ್ದಾರೆ. ತದನಂತರ ಜೋಹ್ರಿ ಅವರ ಕುಟುಂಬದ ಸದಸ್ಯರು ಆಸ್ಪತ್ರೆಗೆ ಕರೆದೊಯ್ದಿದ್ದು ಬುಧವಾರ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜೋಹ್ರಿ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ, ಗುಪ್ತಾ ಮತ್ತು ಅರೋರಾ ಸೇರಿದಂತೆ ಎಂಟು ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಹನುಮ ಜಯಂತಿ ರ‍್ಯಾಲಿ ಮೇಲೆ ಕಲ್ಲು ತೂರಾಟ: ಇಂದಿನಿಂದ 48 ಗಂಟೆ ಇಂಟರ್​ನೆಟ್​ ಬಂದ್​

ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಹತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.