ಶಹಜಹಾನ್‌ಪುರ(ಉತ್ತರ ಪ್ರದೇಶ): ಜಿಲ್ಲೆಯ ತಿಲ್ಹಾರ್‌ನ ಪಿಪ್ರೌಲಿ ಗ್ರಾಮದ ನಿವಾಸಿಯೊಬ್ಬರು ಸೋಮವಾರ ಸಂಜೆ ಸಾವನ್ನಪ್ಪಿದ್ದರು. ಕುಟುಂಬಸ್ಥರು ವಿಧಿವಿಧಾನಗಳಂತೆ ಮಂಗಳವಾರ ಮಧ್ಯಾಹ್ನ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕುಟುಂಬ ಸದಸ್ಯರು ಸ್ಮಶಾನದಿಂದ ಹಿಂತಿರುಗಿದ ನಂತರ ಗ್ರಾಮದ ಕೆಲ ಯುವಕರು ಚಿತಾಗಾರಕ್ಕೆ ತೆರಳಿ ಆ ವ್ಯಕ್ತಿಯ ರುಂಡ ಹೊರ ತೆಗೆದಿರುವ ಘಟನೆ ಬೆಳಕಿಗೆ ಬಂದಿದೆ.
ವಿವರ: ಕುಬೇರ್ ಗಂಗ್ವಾರ್ ಎಂಬ ವ್ಯಕ್ತಿಯ ನಿಧನದ ನಂತರ ಮೃತದೇಹದ ಅಂತ್ಯಕ್ರಿಯೆ ಮುಗಿಸಿದ ಕುಟುಂಬವು ಸ್ಮಶಾನದಿಂದ ಹಿಂತಿರುಗಿದ್ದಾರೆ. ಇದೇ ಸಂದರ್ಭದಲ್ಲಿ ಉಪೇಂದ್ರ ಅಲಿಯಾಸ್ ಗೋಪಿ ಮದ್ಯದ ಅಮಲಿನಲ್ಲಿ ಅಲ್ಲಿಗೆ ಬಂದಿದ್ದಾನೆ. ಆತನೊಂದಿಗೆ ಇನ್ನಿಬ್ಬರು ಗೆಳೆಯರು ಕೂಡ ಇದ್ದರೆಂದು ಹೇಳಲಾಗುತ್ತಿದೆ. ಚಿತೆಯಿಂದ ಕುಬೇರ್ ಗಂಗ್ವಾರ್‌ನ ತಲೆಯನ್ನು ಮೂವರು ಹೊರತೆಗೆದಿದ್ದಾರೆ. ಬಳಿಕ ಉಪೇಂದ್ರ ಆ ತಲೆಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ ಎಂದು ಎಸ್ಪಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಸಂಜೆಯ ವೇಳೆಗೆ ಕುಬೇರನ ಕುಟುಂಬವೂ ಸೇರಿದಂತೆ ಗ್ರಾಮದ ಜನರೆಲ್ಲ ಸೇರಿ ಉಪೇಂದ್ರನ ಮನೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರೂ ಕೂಡಾ ಆತನ ಮನೆಗೆ ಬಂದಿದ್ದಾರೆ. ಮಗ ಮನೆಯಲ್ಲಿ ಇರಲಿಲ್ಲ ಎಂದು ತಾಯಿ ಮಾಹಿತಿ ನೀಡಿದ್ದಾರೆ. ಮನೆಯೊಳಗೆ ನುಗ್ಗುವಂತೆ ಗುಂಪು ಎಚ್ಚರಿಕೆ ನೀಡುತ್ತಿದ್ದಂತೆ ಪೊಲೀಸರು ಮನೆಯೊಳಗೆ ತೆರಳಿ ಆರೋಪಿ ಉಪೇಂದ್ರನನ್ನು ಸೆರೆ ಹಿಡಿದಿದ್ದಾರೆ. ಪೊಲೀಸರು ಕುಬೇರ್ ಗಂಗ್ವಾರ್‌ನ ತಲೆಯನ್ನು ಸಹ ವಶಕ್ಕೆ ಪಡೆದಿದ್ದರು.
ಪೊಲೀಸರ ಪ್ರಕಾರ, ಉಪೇಂದ್ರ ಮಾಟ-ಮಂತ್ರದಲ್ಲಿ ನಂಬಿಕೆ ಇಡುತ್ತಿದ್ದ. ಇದಕ್ಕಾಗಿ ಚಿತೆಯಿಂದ ತಲೆ ತೆಗೆಯಬೇಕು ಎಂದು ಯಾರೋ ಹೇಳಿದ್ದರಿಂದ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ದೇವಸ್ಥಾನದಲ್ಲೇ ಅರ್ಚಕನ ತಲೆಗೆ ಹಾಡಹಗಲೇ ಗುಂಡಿಕ್ಕಿ ಹತ್ಯೆ!