ETV Bharat / bharat

ಗಂಡನ ಮನೆಯಲ್ಲಿ ಕಿರುಕುಳ.. ಸಂಗೀತ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಮಗಳನ್ನು ತವರಿಗೆ ಕರೆತಂದ ತಂದೆ - Man takes out his married daughters Baraat

ಗಂಡನ ಮನೆಯಲ್ಲಿ ಕಿರುಕುಳ ಹಿನ್ನೆಲೆ ತವರಿಗೆ ಆಗಮಿಸಿದ ಮಗಳನ್ನು ಮೆರವಣಿಗೆ ಮೂಲಕ ಕರೆತಂದಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

man-takes-out-his-married-daughters-baraat-from-her-in-laws-house-in-jharkhand-with-music-and-fireworks
ಗಂಡನ ಮನೆಯಲ್ಲಿ ಕಿರುಕುಳ : ಸಂಗೀತ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಮಗಳನ್ನು ತವರಿಗೆ ಕರೆತಂದ ತಂದೆ
author img

By ETV Bharat Karnataka Team

Published : Oct 18, 2023, 9:59 AM IST

Updated : Oct 18, 2023, 10:39 AM IST

ಗಂಡನ ಮನೆಯಲ್ಲಿ ಕಿರುಕುಳ.. ಸಂಗೀತ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಮಗಳನ್ನು ತವರಿಗೆ ಕರೆತಂದ ತಂದೆ

ರಾಂಚಿ (ಜಾರ್ಖಂಡ್​) : ಸಾಮಾನ್ಯವಾಗಿ ಮದುವೆ ಮನೆಗೆ ವಧುವರರನ್ನು ಕರೆತರುವಾಗ ಮೆರವಣಿಗೆಯಲ್ಲಿ ಆಗಮಿಸುವುದನ್ನು ನೋಡಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಮದುವೆ ಬಳಿಕ ವಧುವರರನ್ನು ಮೆರವಣಿಗೆ ಕರೆದುಕೊಂಡು ಹೋಗುವುದನ್ನು ನೋಡಿರುತ್ತೇವೆ. ಆದರೆ ಗಂಡನ ಮನೆ ತೊರೆದು ತವರಿಗೆ ಆಗಮಿಸಿದ ಮಗಳನ್ನು ಸಂಗೀತ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಕರೆತಂದಿರುವ ಅಪರೂಪದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ಕುಮ್ಹರ್ಟೋಲಿಯ ಕೈಲಾಸ್​​ನಗರ ನಿವಾಸಿ ಪ್ರೇಮ್​ ಗುಪ್ತಾ ಎಂಬವರು ತಮ್ಮ ಮಗಳು ಸಾಕ್ಷಿ ಗುಪ್ತಾಳನ್ನು ಮೆರವಣಿಗೆ ಮೂಲಕ ತವರು ಮನೆಗೆ ಸ್ವಾಗತಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರೇಮ್​ ಗುಪ್ತಾ, ಮಗಳ ಬಗ್ಗೆ ಭಾವನಾತ್ಮಕ ಬರಹ ಬರೆದಿದ್ದಾರೆ. ಇದರಲ್ಲಿ, ಪೋಷಕರು ತಮ್ಮ ಮಗಳನ್ನು ಬಹಳ ಆಡಂಬರದಿಂದ ಮದುವೆ ಮಾಡಿಕೊಡುತ್ತಾರೆ. ಒಂದು ವೇಳೆ ಮದುವೆ ಬಳಿಕ ಸಂಗಾತಿ ಮತ್ತು ಅವರ ಕುಟುಂಬದವರು ಆಕೆಗೆ ಕಷ್ಟ ನೀಡಲು ಪ್ರಾರಂಭಿಸಿದರೆ, ನಿಮ್ಮ ಮಗಳನ್ನು ಅತ್ಯಂತ ಗೌರವದಿಂದ ಮನೆಗೆ ಕರೆದುಕೊಂಡು ಬರಬೇಕು. ಏಕೆಂದರೆ ಎಲ್ಲಾ ಹೆಣ್ಣುಮಕ್ಕಳು ಅಮೂಲ್ಯ ಎಂದು ಬರೆದಿದ್ದಾರೆ.

ಕಳೆದ 2022ರ ಏಪ್ರಿಲ್ 28ರಂದು ಸಾಕ್ಷಿ ಅವರನ್ನು ಸಚಿನ್​ ಕುಮಾರ್​ ಎಂಬವರಿಗೆ ಬಹಳ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಸಚಿನ್​ ರಾಂಚಿಯ ಸರ್ವೇಶ್ವರಿ ನಗರದ ನಿವಾಸಿಯಾಗಿದ್ದು, ಜಾರ್ಖಂಡ್​ ವಿದ್ಯುತ್​ ವಿತರಣಾ ನಿಗಮದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಮದುವೆ ಆದ ಕೆಲವು ದಿನಗಳ ಬಳಿಕ ಗಂಡ ಹಾಗೂ ಗಂಡನ ಮನೆಯವರು ಸಾಕ್ಷಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಸಚಿನ್​ ಕೂಡ ಸಾಕ್ಷಿಯನ್ನು ಮನೆಯಿಂದ ಹೊರಗೆ ದಬ್ಬಿದ್ದಾನೆ. ಆದರೂ ಧೃತಿಗೆಡದೇ ಸಾಕ್ಷಿ ಗಂಡನ ಮನೆಯವರೊಂದಿಗೆ ವಾಸವಿದ್ದಳು. ಒಂದು ವರ್ಷ ಕಳೆದ ಬಳಿಕ ಸಚಿನ್​ ಈಗಾಗಲೇ 2 ಮದುವೆಯಾಗಿರುವುದು ಸಾಕ್ಷಿಗೆ ಗೊತ್ತಾಗಿದೆ. ಎಲ್ಲ ಗೊತ್ತಾದರೂ ಹೊಂದಾಣಿಕೆಯೇ ಜೀವನ ಎಂದು ಸಾಕ್ಷಿ ಸುಮ್ಮನಾಗಿದ್ದಳು.

ಯಾವಾಗ ಗಂಡ ಮತ್ತು ಗಂಡನ ಮನೆಯವರ ಕಿರುಕುಳ ಹೆಚ್ಚಾಯಿತೋ ಸಾಕ್ಷಿ ಸಂಬಂಧವನ್ನು ಕಡಿದುಕೊಳ್ಳುವ ದೃಢ ನಿರ್ಧಾರ ಮಾಡಿದಳು. ಈ ಬಗ್ಗೆ ತನ್ನ ಪೋಷಕರಲ್ಲೂ ತಿಳಿಸಿದಳು. ಇವಳ ನಿರ್ಧಾರದಿಂದ ಸಂತೋಷಗೊಂಡ ಪೋಷಕರು, ಗಂಡನ ಮನೆಯಿಂದ ಆಕೆ ಬರುವಾಗ ಮೆರವಣಿಗೆ ಮೂಲಕ ಸಂಗೀತ ವಾದ್ಯ ಮೇಳಗಳೊಂದಿಗೆ ಕರೆತಂದಿದ್ದಾರೆ. ಜೊತೆಗೆ ದಾರಿಯುದ್ದಕೂ ಪಟಾಕಿಯ ಸುರಿಮಳೆಗೈದಿದ್ದಾರೆ.

ಮೆರವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಾಕ್ಷಿ ತಂದೆ ಪ್ರೇಮ್​ ಗುಪ್ತಾ, ನಾನು ನನ್ನ ಸಂತೋಷಕ್ಕಾಗಿ ಈ ಮೆರವಣಿಗೆ ಮಾಡಿದ್ದೇನೆ. ಈಗ ನನ್ನ ಮಗಳು ಕಿರುಕುಳದಿಂದ ಮುಕ್ತಳಾಗಿದ್ದಾಳೆ. ಅದಕ್ಕೆ ಅವಳಿಗೆ ಅದ್ಧೂರಿ ಸ್ವಾಗತ ಕೋರಿದ್ದೇನೆ ಎಂದು ಹೇಳಿದ್ದಾರೆ. ಈ ಸಂಬಂಧ ಸಾಕ್ಷಿ ತನ್ನ ಗಂಡ ಸಚಿನ್​ ವಿರುದ್ಧ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದು, ಸಚಿನ್​ ಸಾಕ್ಷಿಗೆ ಜೀವನಾಂಶ ನೀಡುವುದಾಗಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ : ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಜಾವೆಲಿನ್ ಕ್ರೀಡಾಪಟುಗೆ ₹1.5 ಕೋಟಿ ಬಹುಮಾನ ನೀಡಿ ಗೌರವಿಸಿದ ಒಡಿಶಾ ಸಿಎಂ

Last Updated : Oct 18, 2023, 10:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.