ETV Bharat / bharat

ಕಬ್ಬಿಣದ ಸಲಾಕೆಯಿಂದ ತಾಯಿಯನ್ನೇ ಕೊಂದ ಪಾಪಿ ಪುತ್ರ - etv bharath kannada news

Son killed his mother: ಕೌಟುಂಬಿಕ ಕಲಹದಿಂದ ಕೋಪಗೊಂಡ ಪಾಪಿ ಮಗನೊಬ್ಬ ತನ್ನ ತಾಯಿಯನ್ನೇ ಕೊಂದಿರುವ ಪ್ರಕರಣ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದಲ್ಲಿ ಕೌಟುಂಬಿಕ ಕಲಹ
ಕಾನ್ಪುರದಲ್ಲಿ ಕೌಟುಂಬಿಕ ಕಲಹ
author img

By

Published : Aug 7, 2023, 9:33 PM IST

ಪ್ರಕರಣದ ಕುರಿತು ದಕ್ಷಿಣ ವಿಭಾಗದ ಎಡಿಸಿಪಿ ಅಂಕಿತಾ ಶರ್ಮಾ ಮಾಹಿತಿ

ಕಾನ್ಪುರ (ಉತ್ತರ ಪ್ರದೇಶ) : ಮನೆಯಲ್ಲಿ ದಿನನಿತ್ಯ ತಾಯಿ ಮತ್ತು ಹೆಂಡತಿಯ ಜಗಳದಿಂದ ಕೋಪಗೊಂಡ ಮಗ ತನ್ನ ತಾಯಿಯನ್ನೇ ಹೊಡೆದು ಕೊಂದ ಘಟನೆ ಕಾನ್ಪುರದಲ್ಲಿ ನಡೆದಿದೆ. ಕೃತ್ಯದ ಬಳಿಕ ಆರೋಪಿ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನೌಬಸ್ತಾ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು, ಆರೋಪಿ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ.

ಮುನ್ನಿದೇವಿ ಮೃತಪಟ್ಟ ಮಹಿಳೆ. ಇವರ ಮಗ ಅಜಯ್ ಕೊಲೆ ಆರೋಪಿ. ಈತನ ಪತ್ನಿಯ ಹೆಸರು ರೋಶನಿ. ನೌಬಸ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವ್ ನಗರ ಕಾಲೋನಿಯಲ್ಲಿ ಇವರ ವಾಸ. ಹಿರಿಮಗ ವಿಜಯ್ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಹತ್ತಿರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಭಾನುವಾರ ತಡರಾತ್ರಿ ಸ್ಥಳೀಯರೆಲ್ಲರೂ ತನ್ನ ತಾಯಿಯ ಮನೆಯತ್ತ ಓಡುತ್ತಿರುವುದನ್ನು ಕಂಡು ವಿಜಯ್ ತನ್ನ ಮನೆಯ ಕಡೆಗೆ ಓಡಿಹೋಗಿದ್ದಾನೆ. ಈ ಸಂದರ್ಭದಲ್ಲಿ ತಾಯಿ ಮನೆಯ ಗೇಟ್ ಬಳಿ ಬಿದ್ದಿದ್ದು, ತಲೆಯಿಂದ ಭಾರಿ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತಿದ್ದುದನ್ನು ನೋಡಿದ್ದಾರೆ. ತದನಂತರ ಎಡಿಸಿಪಿ ಅಂಕಿತಾ ಶರ್ಮಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಪ್ರಕರಣದ ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಅಜಯ್‌ನನ್ನು ಬಂಧಿಸಿದ್ದಾರೆ.

ತನಿಖೆ ನಡೆಸುತ್ತಿರುವ ದಕ್ಷಿಣ ವಿಭಾಗದ ಎಡಿಸಿಪಿ ಅಂಕಿತಾ ಶರ್ಮಾ

ಆರೋಪಿ ಅಜಯ್​ನ ಪತ್ನಿ ರೋಶನಿ ಹಾಗೂ ತಾಯಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಭಾನುವಾರ ಸಂಜೆ ಮನೆಗೆ ಬಂದಾಗ ಪತ್ನಿ ಹಾಗೂ ತಾಯಿ ನಡುವೆ ಜಗಳ ನಡೆಯುತ್ತಿತ್ತು. ದಿನನಿತ್ಯದ ಜಗಳದಿಂದ ಬೇಸತ್ತು ಹೋಗಿದ್ದ ಅಜಯ್​, ಇಬ್ಬರೂ ಜಗಳವಾಡುವುದನ್ನು ಕಂಡು ಕೋಪಗೊಂಡಿದ್ದಾನೆ. ಇದಾದ ಬಳಿಕ ಸಮೀಪದಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ತಾಯಿಯ ತಲೆಗೆ ಹೊಡೆದಿದ್ದಾನೆ. ತಾಯಿಯ ತಲೆಯಿಂದ ರಕ್ತ ಹೊರಬರಲು ಪ್ರಾರಂಭಿಸಿದೆ. ನೋವು ತಡೆಯಲಾರದೆ ನೆಲದ ಮೇಲೆ ಕುಸಿದು ಬಿದ್ದು ಅವರು ಅಸುನೀಗಿದ್ದಾರೆ.

''ವೃದ್ಧೆಯನ್ನು ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಲಭಿಸಿತು. ಸ್ಥಳಕ್ಕಾಗಮಿಸಿ ನೋಡಿದಾಗ ಗೇಟ್ ಬಳಿ ಆಕೆ ಬಿದ್ದಿದ್ದು, ತಲೆಯಿಂದ ರಕ್ತ ಹೊರಬರುತ್ತಿತ್ತು. ಆರೋಪಿ ಅಜಯ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತನ ಪತ್ನಿಯ ವಿಚಾರಣೆಯೂ ನಡೆಯುತ್ತಿದೆ'' ಎಂದು ದಕ್ಷಿಣ ವಿಭಾಗದ ಎಡಿಸಿಪಿ ಅಂಕಿತಾ ಶರ್ಮಾ ತಿಳಿಸಿದರು.

ಇದನ್ನೂ ಓದಿ: Mob lynching: ಸಿಕ್ಕಿಬಿದ್ದ ಕಳ್ಳನಿಗೆ ಅಮಾನವೀಯ ಥಳಿತ; ತಲೆಬೋಳಿಸಿ ತಾಲಿಬಾನ್​ ಮಾದರಿ ಶಿಕ್ಷೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.