ಮುಂಬೈ: ಸ್ನೇಹಿತೆಯ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿ ಆತನ ಅಪ್ರಾಪ್ತ ಮಗಳನ್ನು ಗರ್ಭಿಣಿಯನ್ನಾಗಿ ಮಾಡಿದ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2017 ರಲ್ಲಿ ಬೆಳಕಿಗೆ ಬಂದಿದ್ದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಮುಂಬೈನ ವಿಶೇಷ ನ್ಯಾಯಾಲಯ, ಆರೋಪಿಯ ಕೃತ್ಯ ಸಾಬೀತಾಗಿದೆ. ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿ ಮಾಡಿದ್ದು ಆತನೇ ಎಂಬುದು ವರದಿ ದೃಢಪಡಿಸಿದೆ. ಸಂತ್ರಸ್ತೆಯ ಮೇಲೆ ಅತ್ಯಾಚಾರವಾದ ಬಗ್ಗೆ ಸಮರ್ಥವಾದ ಪುರಾವೆಗಳಿವೆ. ಇದು ಆರೋಪಿಯು ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಬಹಿರಂಗಪಡಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಗರ್ಭಾವಸ್ಥೆಯಲ್ಲಿದ್ದ ಹೆಣ್ಣು ವಾಂತಿ, ವಾಕರಿಕೆ ಮಾಡಿಕೊಳ್ಳಲೇಬೇಕು ಎಂದಿಲ್ಲ. ಅದು ಪ್ರಕೃತಿ ಸಹಜವಾಗಿ ನಡೆಯುವ ಕ್ರಿಯೆಯಾಗಿದೆ. ಪ್ರತಿಯೊಬ್ಬ ಗರ್ಭಿಣಿ ಗರ್ಭಾವಸ್ಥೆಯ ವೇಳೆಯ ಕಾರಣಗಳ ಮೇಲೆ ಆಕೆ ಭಾವನೆ ವ್ಯಕ್ತಪಡಿಸುತ್ತಾಳೆ. ಹೊಟ್ಟೆ ನೋವಾದಾಗ ಸಂತ್ರಸ್ತೆಯ ತಪಾಸಣೆ ಮಾಡುವವರೆಗೆ ಆಕೆ ತನ್ನ ದೇಹ ಬದಲಾವಣೆಯನ್ನು ಗಮನಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಆದಾಗ್ಯೂ, ಸಂತ್ರಸ್ತೆಯ ನಿಖರ ವಯಸ್ಸನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಕಾರಣ ನ್ಯಾಯಾಲಯವು ಪೋಕ್ಸೋ ಕಾಯ್ದೆಯಡಿ ಆರೋಪಿಗೆ ಶಿಕ್ಷೆ ವಿಧಿಸಿಲ್ಲ.
ಪ್ರಕರಣವೇನು?: ಈ ಪ್ರಕರಣ ನಡೆದಿದ್ದು 2017 ರಲ್ಲಿ. ಆರೋಪಿ ಸ್ನೇಹಿತೆಯ ಮನೆಯಲ್ಲಿ ಬಾಡಿಗೆಗೆ ಉಳಿದುಕೊಂಡಿದ್ದ. ಈ ವೇಳೆ ಆತನ ಮಗಳ ಜೊತೆಯೇ ಸಂಪರ್ಕ ಬೆಳೆಸಿಕೊಂಡು ಗರ್ಭಿಣಿಯನ್ನಾಗಿ ಮಾಡಿದ್ದ. ಬಾಲಕಿ ಹೊಟ್ಟೆ ನೋವು ಎಂದು ಹೇಳಿದಾಗ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಬಾಲಕಿ ಆಕೆ ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದು ಗೊತ್ತಾಗಿದೆ. ಪೋಷಕರು ಮಗಳನ್ನು ವಿಚಾರಿಸಿದಾಗ ಬಾಡಿಗೆಗಿದ್ದ ವ್ಯಕ್ತಿ ತನ್ನ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದ ಎಂದು ಬಾಯ್ಬಿಟ್ಟಿದ್ದಾಳೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದ. ಇದನ್ನು ಯಾರ ಬಳಿಯೂ ಹೇಳದಂತೆ ಬೆದರಿಸಿದ್ದ ಎಂದು ತಿಳಿಸಿದ್ದಳು. ಬಳಿಕ ಸಂತ್ರಸ್ತೆಯ ತಾಯಿ ಉಪನಗರ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
ಹುಡುಗಿಗೆ ಗರ್ಭಪಾತ ಮಾಡಿಸಲಾಗಿದ್ದು, ಭ್ರೂಣದ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಸಂತ್ರಸ್ತೆ ಮತ್ತು ಆರೋಪಿ ಭ್ರೂಣದ ಜೈವಿಕ ಪೋಷಕರು ಎಂದು ಬಹಿರಂಗವಾಗಿತ್ತು.
ಓದಿ: ಗುಂಡುಹಾರಿಸಿ ರೌಡಿಶೀಟರ್ನನ್ನು ಬಂಧಿಸಿದ ಧೀರೆ.. ಮಹಿಳಾ ಎಸ್ಐ ಮೀನಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ